Advertisement

ಟರ್ಕಿಯಲ್ಲಿ ಇಸ್ಲಾಮಿಕ್‌ ಸ್ಟೇಟ್‌ ಉಗ್ರ ಸಂಘಟನೆ ವಿರುದ್ಧ ಟರ್ಕಿ ಕಾರ್ಯಾಚರಣೆ

09:52 AM Dec 31, 2019 | Hari Prasad |

ಬಾಗ್ಧಾದ್‌/ಇಸ್ತಾಂಬುಲ್‌: ಇಸ್ಲಾಮಿಕ್‌ ಸ್ಟೇಟ್‌ ಉಗ್ರ ಸಂಘಟನೆ ವಿರುದ್ಧ ಟರ್ಕಿ ಸರಕಾರ ಮುಗಿಬಿದ್ದಿದೆ. ಅಂಕಾರಾ, ಬುರ್ಸಾ, ಬ್ಯಾಟ್‌ಮಾನ್‌, ಅನಡೌಲ್‌ ಪ್ರಾಂತ್ಯ ಗಳಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಉಗ್ರ ಸಂಘಟನೆ ಜತೆಗೆ ಸಂಪರ್ಕ ಹೊಂದಿದ ಆರೋಪಗಳ ಹಿನ್ನೆಲೆಯಲ್ಲಿ 100ಕ್ಕೂ ಅಧಿಕ ಮಂದಿಯನ್ನು ಬಂಧಿಸಲಾಗಿದೆ.

Advertisement

ಬಂಧಿತರ ಪೈಕಿ ನಲವತ್ತು ಮಂದಿ ಇರಾಕಿಗಳು, 20 ಮಂದಿ ಸಿರಿಯ ರಾಷ್ಟ್ರದವರು. 2015, 2016ರಲ್ಲಿ ಉಗ್ರ ಸಂಘಟನೆ ಹಲವು ಗುರುತರ ದಾಳಿ ನಡೆಸಿ, ಅನಾಹುತಕ್ಕೆ ಕಾರಣವಾಗಿತ್ತು. ಹೀಗಾಗಿ, ಇತ್ತೀಚಿನ ದಿನಗಳಲ್ಲಿ ಉಗ್ರ ಸಂಘಟನೆ ವಿರುದ್ಧ ಕಠಿನ ಕ್ರಮಕ್ಕೆ ಮುಂದಾಗಿದೆ.

25 ಸಾವು: ಅಮೆರಿಕ ನೇತೃತ್ವದ ಸೇನಾ ಪಡೆಗಳು ಇರಾಕ್‌ ಮತ್ತು ಸಿರಿಯಾದಲ್ಲಿ ಸೋಮವಾರ ನಡೆಸಿದ ಕಾರ್ಯಾ ಚರಣೆಯಲ್ಲಿ 25 ಮಂದಿ ಹತರಾಗಿದ್ದಾರೆ. ಅಮೆರಿಕನ್‌ ಸಮುದಾಯದ ವಿರುದ್ಧ ಇರಾನ್‌ ನಡೆಸುವ ಯಾವುದೇ ಕೃತ್ಯವನ್ನು ಸಹಿಸುವುದಿಲ್ಲ ಎಂಬ ಎಚ್ಚರಿಕೆಯನ್ನು ಈ ಮೂಲಕ ನೀಡಲಾಗಿದೆ ಎಂದು ವಿದೇಶಾಂಗ ಸಚಿವ ಮೈಕ್‌ ಪೊಂಪ್ಯೋ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next