Advertisement

ತುಂಗಭದ್ರಾ ಎಡದಂಡೆ ಕಾಲುವೆಯ ಕೆರೆ ಕಟ್ಟೆ ಗೆ ಕಾರು ಢಿಕ್ಕಿ: ಅಭದ್ರತೆಯಲ್ಲಿ ಮಿನಿಡ್ಯಾಂ

07:15 PM Oct 29, 2022 | Team Udayavani |

ಗಂಗಾವತಿ: ತುಂಗಭದ್ರಾ ಎಡದಂಡೆ ಕಾಲುವೆಯ ಸಾಣಾಪುರ ಕೆರೆಯ ಕಟ್ಟೆಗೆ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ಅಲ್ಪ ಪ್ರಮಾಣದ ಬಿರುಕು ಉಂಟಾಗಿದ್ದು  ಸಾಣಾಪುರ ಮಿನಿ ಡ್ಯಾಂ ಅಭದ್ರತೆಯಲ್ಲಿದ್ದು ಮಿನಿ ಡ್ಯಾಂ  ಕೆಳಭಾಗದಲ್ಲಿರುವ ಸಾಣಾಪುರ ಗ್ರಾಮಸ್ಥರು ಆತಂಕದಲ್ಲಿದ್ದಾರೆ .

Advertisement

ತಾಲ್ಲೂಕಿನ ಸಾಣಾಪುರ ಹತ್ತಿರ ತುಂಗಭದ್ರಾ ಎಡದಂಡೆ ಕಾಲುವೆ ಗುಡ್ಡಗಾಡು ಪ್ರದೇಶದ ಹರಿಯುವುದರಿಂದ ಗುಡ್ಡಗಳ ಮಧ್ಯೆ ಮಿನಿ ಡ್ಯಾಂ ನಿರ್ಮಿಸಿ ಆ ಮೂಲಕ ರಾಯಚೂರಿಗೆ ನೀರನ್ನು ಹಾಯಿಸಲಾಗುತ್ತದೆ. ಕಾಲುವೆಯ ರಸ್ತೆ ಮೇಲೆ ವಾಹನಗಳಸಂ ಚಾರವನ್ನು  ನಿಷೇಧ ಮಾಡಿದ್ದರೂ ಇತ್ತೀಚೆಗೆ ಪ್ರವಾಸಿಗರು ಆಗಮಿಸಿದ್ದು, ಹೆಚ್ಚಿನ ಪ್ರಮಾಣದಲ್ಲಿ ವಾಹನಗಳು ಸಂಚಾರ ಸಾಣಾಪುರ ಕೆರೆ ಕಟ್ಟೆ ಮೇಲೆ ಸಂಚಾರಿಸುತ್ತಿದೆ. ಇಲ್ಲಿ ಏಕಮುಖ ರಸ್ತೆ ವ್ಯವಸ್ಥೆ ಇದ್ದರೂ   ಜಲಸಂಪನ್ಮೂಲ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಇಲ್ಲಿ ಅಧಿಕಾರಿಗಳನ್ನು ಕರ್ತವ್ಯಕ್ಕೆ ನಿಯೋಜನೆ ಮಾಡದಿರುವುದರಿಂದ ಈ ಕೆರೆ ಕಟ್ಟೆ ಮೇಲೆ ಬೃಹತ್ ಮತ್ತು ಮಿನಿ ವಾಹನಗಳು ಸಂಚಾರ ನಿರಂತರವಾಗಿರುತ್ತದೆ. ನಿತ್ಯವೂ ಕೆರೆ ಕಟ್ಟೆ ಮೇಲೆ ವಾಹನಗಳು ಸಂಚಾರ ಮಾಡಿ ಕೆರೆ ಕಟ್ಟೆಗೆ ಢಿಕ್ಕಿ ಹೊಡೆಯುವುದು ಸಾಮಾನ್ಯವಾಗಿದ್ದು ಇದರಿಂದ ಮಿನಿ ಡ್ಯಾಂ ನ ಗೋಡೆ ಅಭದ್ರತೆ ಈಡಾಗಿದೆ. ಸಣಾಪುರ ಕೆರೆ ಕಟ್ಟೆಯ ಕೆಳಭಾಗದಲ್ಲಿಯೇ ಸಣಾಪುರ ಗ್ರಾಮ ಇದ್ದು ಸುಮಾರು 2 ಸಾವಿರಕ್ಕೂ ಹೆಚ್ಚು ಕುಟುಂಬಗಳು ವಾಸ ಮಾಡುತ್ತಿವೆ. ಕೆರೆಯ ಗೋಡೆಯ ಅಭದ್ರತೆಯಿಂದ ನೀರು ಸೋರಿಕೆಯಾಗಿದರೆ  ಕೆರೆ ಒಡೆದು ಹೋದರೆ ಇಡೀ ಗ್ರಾಮ ನೆಲಸಮವಾಗುತ್ತದೆ.

ಸಾಣಾಪುರ ಗ್ರಾಮಸ್ಥರು ಅನೇಕ ಬಾರಿ ಜಲಸಂಪನ್ಮೂಲ ಇಲಾಖೆ ಮತ್ತು ಜಿಲ್ಲಾ ಜೊತೆಗೆ ಸಾಣಾಪುರ ಕೆರೆ ಕಟ್ಟೆಯ ಭದ್ರತೆ ಮತ್ತು ವಾಹನ ಸಂಚಾರ ಸಂಪೂರ್ಣ ನಿಷೇಧಿಸುವಂತೆ ಮನವಿ ಮಾಡಿದರೂ ಜಲಸಂಪನ್ಮೂಲ ಅಧಿಕಾರಿಗಳು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಜಲಸಂಪನ್ಮೂಲ ಅಧಿಕಾರಿಗಳು ಇಲ್ಲಿ ಕರ್ತವ್ಯ ನಿರ್ವಹಿಸಬೇಕಾಗಿದ್ದು ನಿತ್ಯವೂ ಗೈರು ಆಗುವ ಮೂಲಕ ವಾಹನಗಳ ಸಂಚಾರಕ್ಕೆ ಅನುವು ನೀಡಿದ್ದು ಇದರಿಂದ ಸಾಣಾಪುರ ಗ್ರಾಮಸ್ಥರು ಆತಂಕಕ್ಕೀಡಾಗಿದ್ದಾರೆ .

ಸಾಣಾಪುರ ಕೆರೆ ಪ್ರವಾಸೋದ್ಯಮಕ್ಕೆ ಅತ್ಯುತ್ತಮ ತಾಣವಾಗಿದ್ದು ಇಲ್ಲಿಗೆ ಆಗಮಿಸುವ ವಾಹನಗಳನ್ನು ನಿಲ್ಲಿಸುವ  ವ್ಯವಸ್ಥೆ ಮಾಡುವ ಮೂಲಕ ಜಿಲ್ಲಾಡಳಿತ ಸಾಣಾಪುರ ಕೆರೆ ಕಟ್ಟೆಗೆ ರಕ್ಷಣೆ  ಒದಗಿಸುವಂತೆ ಗ್ರಾಪಂ ಮಾಜಿ ಉಪಾಧ್ಯಕ್ಷ ಎನ್ ನರಸಿಂಹಲು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next