Advertisement

ಉದಯವಾಣಿ ವರದಿಯಿಂದ ಎಚ್ಚೆತ್ತ ಅಧಿಕಾರಿಗಳು: ತುಂಗಭದ್ರಾ ಎಡದಂಡೆ ಕಾಲುವೆ ಬಿರುಕು ದುರಸ್ಥಿ

04:47 PM Sep 22, 2020 | keerthan |

ಗಂಗಾವತಿ: ತಾಲೂಕಿನ ಕೇಸರಹಟ್ಟಿ ಬಳಿ ತುಂಗಭದ್ರಾ ಎಡದಂಡೆ ಕಾಲುವೆಯ ಬಲ ಭಾಗದ ಅಕ್ವಾಡೆಕ್ಟನಲ್ಲಿ ಕಾಣಿಸಿದ್ದ ಬಿರುಕನ್ನು ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು ಮಂಗಳವಾರ ಮುಚ್ಚಿದರು.

Advertisement

ಕಳೆದ ಹಲವು ದಿನಗಳಿಂದ ಕಾಲುವೆಯ ಬಲಭಾಗದ ಅಕ್ವಾಡೆಕ್ಟನಲ್ಲಿ ಬಿರುಕು ಕಂಡು ಬಂದಿತ್ತು. ಇದರಿಂದ ಸಣ್ಣ ಪ್ರಮಾಣದಲ್ಲಿ ನೀರು ಸೋರಿಕೆಯಾಗುತ್ತಿತ್ತು. ಇದನ್ನು ಕಂಡ ರೈತರೊಬ್ಬರು ಫೇಸ್ ಬುಕ್ ವಾಟ್ಸಾಪ್ ನಲ್ಲಿ ಕಾಲುವೆಯ ಅಕ್ವಾಡೆಕ್ಟ ಬಿರುಕು ಬಿಟ್ಟ ಗೋಡೆಯ ಪೋಟೊಗಳನ್ನು ಹಾಕಿ ಆತಂಕ ವ್ಯಕ್ತಪಡಿಸಿದ್ದರು.

ಈ ಕುರಿತು ಉದಯವಾಣಿ ವೆಬ್ ನಲ್ಲಿ ತುಂಗಭದ್ರಾ ಎಡದಂಡೆ ಕಾಲುವೆ ಅಕ್ವಾಡೆಕ್ಟನಲ್ಲಿ‌ ಬಿರುಕು : ಆತಂಕದಲ್ಲಿ ರೈತರು ಎಂಬ ಶೀರ್ಷಿಕೆಯಡಿಯಲ್ಲಿ ಸುದ್ದಿ ಪ್ರಕಟವಾಗಿತ್ತು. ಇದನ್ನು ಗಮನಿಸಿದ ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಬಿರುಕು ಬಿಟ್ಟ ಜಾಗಕ್ಕೆ ಸಿಮೆಂಟ್ ಹಾಕಿ ಬಿರುಕು ಮುಚ್ಚಿದ್ದಾರೆ.

ಇದನ್ನೂ ಓದಿ: ತುಂಗಭದ್ರಾ ಎಡದಂಡೆ ಕಾಲುವೆ ಅಕ್ವಾಡೆಕ್ಟನಲ್ಲಿ‌ ಬಿರುಕು : ಆತಂಕದಲ್ಲಿ ರೈತರು

Advertisement

ಅಕ್ವಾಡೆಕ್ಟನಲ್ಲಿ ಕಂಡು ಬಂದ ಬಿರುಕು ಮುಚ್ಚಲಾಗಿದ್ದು ರೈತರು ಆತಂಕ ಪಡುವ ಅವಶ್ಯಕತೆ ಇಲ್ಲ. ನಿತ್ಯವೂ ಕಾಲುವೆ ವೀಕ್ಷಣೆ ಮಾಡಲಾಗುತ್ತಿದ್ದು ರೈತರು ಸಾಮಾಜಿಕ ಜಾಲತಾಣದಲ್ಲಿ ಕಾಲುವೆ ಪೊಟೊ ಹಾಕದೇ ಜಲಸಂಪನ್ಮೂಲ ಇಲಾಖೆಯ ಗ್ಯಾಂಗ್ ಮ್ಯಾನ್ ಅವರಿಗೆ ಮಾಹಿತಿ ತಿಳಿಸುವಂತೆ ಹಿರಿಯ ಅಭಿಯಂತರ ರಾಜೇಶ ವಸ್ತ್ರದ್ ಉದಯವಾಣಿ ಮೂಲಕ ಮನವಿ ಮಾಡಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next