ಗಂಗಾವತಿ: ರಾಯಚೂರು ಬಳ್ಳಾರಿ ವಿಜಯನಗರ ಕೊಪ್ಪಳ ಜಿಲ್ಲೆಗಳ ಜೀವನಾಡಿ ತುಂಗಭದ್ರೆ ಅಕಾಲಿಕ ಮಳೆಯ ಕಾರಣ ತುಂಬಿ ಹರಿಯುತ್ತಿದ್ದಾಳೆ.
ಕಳೆದ 2 ದಿನಗಳ ಹಿಂದೆಯೇ ತುಂಗಭದ್ರಾ ಡ್ಯಾಂ ಭರ್ತಿಯಾಗಿದ್ದು ಡ್ಯಾಂನಿಂದ 1.70ಲಕ್ಷ ಕ್ಯೂಸೆಕ್ ನೀರನ್ನು ಹೊರಗೆ ಬಿಡಲಾಗುತ್ತಿದೆ.ಇದರಿಂದ ತುಂಗಭದ್ರಾ ಡ್ಯಾಂ ಸೇರಿದಂತೆ ತುಂಗಭದ್ರಾ ನದಿಪಾತ್ರ ಜಲನಿಧಿಯ ಕಾರಣಕ್ಕಾಗಿ ನಯನ ಮನೋಹರವಾಗಿದೆ.
ಭಾನುವಾರ ರಜೆ ದಿನವಾಗಿದ್ದರಿಂದ ಜನರು ತುಂಗಭದ್ರಾ ಡ್ಯಾಮ್ ಹಂಪಿ ಆನೆಗೊಂದಿ ಸಣಾಪುರ ಕಡೆಬಾಗಿಲು ಸೇತುವೆ ಕಂಪ್ಲಿ ಸೇತುವೆ ಸೇರಿದಂತೆ ನದಿ ಪಾತ್ರದ ಪ್ರವಾಸಿತಾಣಗಳಿಗೆ ಭೇಟಿ ನೀಡಿ ಸುಂದರ ರಮಣೀಯ ತಾಣಗಳನ್ನು ವೀಕ್ಷಣೆ ಮಾಡುತ್ತಿದ್ದಾರೆ. ಮೇಲಿಂದ ಆಗಾಗ ಸುರಿಯುವ ತುಂತುರು ಮಳೆ ಜತೆಗೆ ಎಲ್ಲೆಲ್ಲೂ ಹಸಿರು ನೀರು ಹೀಗೆ ಸುಂದರ ಸೌಂದರ್ಯವನ್ನು ಸವಿಯುವ ಮೂಲಕ ರಜೆಯ ಮಜೆಯಲ್ಲಿ ಜಾರಿದ್ದಾರೆ.
ಡ್ರೋಣ್ ಕ್ಯಾಮೆರಾ ಕಣ್ಣಿನಲ್ಲಿ ತುಂಗಭದ್ರಾ ಡ್ಯಾಮ್ ನಲ್ಲಿ ಸಂಗ್ರಹವಾಗಿರುವ ನೀರಿನ ಜಲರಾಶಿ ಜೊತೆಗೆ ಡ್ಯಾಂನಿಂದ ಕ್ರಸ್ಟ್ ಗೇಟ್ ಗಳ ಮೂಲಕ ಹರಿಯುತ್ತಿರುವ ನೀರಿನ ನಯನ ಮನೋಹರ ಅತ್ಯಂತ ಸೊಗಸಾಗಿದೆ .
-ವಿಶೇಷ ವರದಿ: ಕೆ. ನಿಂಗಜ್ಜ ಗಂಗಾವತಿ