ಹೊಳೆಹೊನ್ನೂರು: ತುಂಗಾಭದ್ರಾ ನದಿಗಳು ತುಂಬಿ ಹರಿಯುವತ್ತಿರುವುದರಿಂದ ಪಟ್ಟಣ ಸುತ್ತಮುತ್ತಲಿನ ಗ್ರಾಮಗಳಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ.
ಪಟ್ಟಣದ ಎಡಿ ಕಾಲೋನಿಯಲ್ಲಿ 13 ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗಿದ ಪರಿಣಾಮ ತಡ ರಾತ್ರಿಯಲ್ಲಿ ಕುಟುಂಬಗಳನ್ನು ಸ್ಥಳಾಂತರ ಮಾಡಲಾಗಿದೆ. ವಡೇರಪುರದ ಎಡಿ ಕಾಲೋನಿಯಲ್ಲಿ 4 ಮನೆಗಳು ಜಲಾವೃತವಾಗಿವೆ. ವಡೇರಪುರದ ಎಕೆ ಕಾಲೋನಿಯ ನಿವಾಸಿ ಮನೆಗಳ ಸಮೀಪ ನದಿ ನೀರು ಬಂದಿದು ಕೆಲವರನ್ನು ಅಕ್ಕಪಕ್ಕದ ಅಡಿಕೆ ಮನೆ ಹಾಗೂ ಸಂಬಂದಿಕರ ಮನೆಗಳಿಗೆ ಸ್ಥಳಾಂತರಿಸಲಾಗಿದೆ. ಪಟ್ಟಣದ ಎಡಿ ಕಾಲೋನಿಯ 10 ಕುಟುಂಬಗಳನ್ನು ಪಟ್ಟಣದ ಬಿಸಿಎಂ ಹಾಸ್ಟೇಲ್ ನಲ್ಲಿ ನಿರಾಶ್ರಿತರ ಕೇಂದ್ರಗಳಲ್ಲಿ ವಾಸ್ಥವ್ಯ ಹೋಡಿದ್ದಾರೆ.
ಪಟ್ಟಣ, ವಡೇರಪುರ ಗ್ರಾಮಗಳಲ್ಲಿ ಪ್ರವಾಹ ಪೀಡಿತ ಸ್ಥಳಗಳಿಗೆ ಬೇಟಿ ನೀಡಿ ಉಪವಿಭಾಗಧಿಕಾರಿ ಸತ್ಯನಾರಾಯಣ ಬೇಟಿ ನೀಡಿ ಕಾಳಜಿ ಕೇಂದ್ರದಲ್ಲಿನ ಜನರಿಗೆ ಸಂತ್ವಾನ ಹೇಳಿದರು. ಸಮೀಪದ ವಡೇರಪುರದ ಎಡಿ ಕಾಲೋನಿಗೆ ತೆರಳಿ ನದಿ ಪಾತ್ರವನ್ನು ವೀಕ್ಷಿಸಿದರು. ವಡೇರಪುರ ಎಡಿ ಕಾಲೋನಿ ಬಳಿ ನದಿ ದಂಡೆಯಲ್ಲಿ ನಿರ್ಮಾಣ ಮಾಡಿರುವ ಚಿಕ್ಕ ತಡೆಗೋಡೆಯಿಂದ ಯಾವುದೇ ಪ್ರಯೋಜನವಿಲ್ಲ. ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ಕೂಡಲೆ ಸ್ಥಳ ಪರೀಶಿಲನೆ ನಡೆಸಿ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಬೇಕು. ನದಿ ಪಾತ್ರದ ಜನರಿಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಬೇಕು ಎಂದರು.
ಮಂಗೋಟೆಯಲ್ಲಿ ತುಂಗಾಭದ್ರಾ ನದಿಯ ದಡದಲ್ಲಿರುವ ಸುಮಾರು 1 ಮನೆಗೆ ನೀರು ನುಗ್ಗಿದ್ದು, ನದಿಯೂ ಚಿಕ್ಕಹಳ್ಳದ ಮುಖಾಂತರ ರಸ್ತೆಗೆ ನೀರು ನುಗ್ಗಿದ್ದು, ಸಂಜೆವೇಳೆ ಬಸ್ ಸಂಚಾರ ಸ್ಥಗಿತವಾಗಿದೆ.
ವಡೇರಪುರ ಹಾಗೂ ಪಟ್ಟಣದ ಎಡಿ ಕಾಲೋನಿ ನಿವಾಸಿಗಳ ಸಂಕಷ್ಠಕ್ಕೆ ಸೂಕ್ತ ಶಾಶ್ವತ ಪರಿಹಾರ ನೀಡಲು ಪ್ರಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ರಾಜಸ್ವನೀರಿಕ್ಷಕ ರವಿಕುಮಾರ್, ಉಪತಹಸಿಲ್ದಾರ್ ವಿಜಯ್, ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಪುಷ್ಪಾ, ಗ್ರಾಮಲೆಕ್ಕಿಗ ವಿಜಯ್‌ಕುಮಾರ್, ಸ್ನೇಹ, ಹಾಲಸಿದ್ದಪ್ಪ, ಅಣ್ಣಪ್ಪ, ಪ್ರಕಾಶ್, ನಂದೀಶ್, ಬಸವನಗೌಡ ಇತರರಿದ್ದರು.
ಇದನ್ನೂ ಓದಿ: ಅತಿವೃಷ್ಟಿಯಿಂದ ಅಪಾರ ಹಾನಿ: 10 ಸಾವಿರ ಕೋಟಿ ರೂ. ನೆರವು ನೀಡಲು ಕೇಂದ್ರಕ್ಕೆ ಉಗ್ರಪ್ಪ ಮನವಿ