ರಾಮನಗರ: ಲಾಕ್‌ಡೌನ್ ಸಡಿಲಗೊಳ್ಳುತ್ತಿದ್ದಂತೆ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳಲ್ಲಿ ರಾಜಕೀಯ ಗರಿಗೆದರಿದೆ. ಜತೆಗೆ ಪಕ್ಷದ ಪ್ರಮುಖ ಕಾರ್ಯಕರ್ತರ ನಡುವೆ ಅಸಮಾಧಾನದ ಹೊಗೆ ಎದ್ದಿದೆ.ಈ ಮಧ್ಯೆ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಬೇಕು ಎಂದು ಕೂಗು ಕೇಳಿದೆ. ದಶಕಗಳಿಂದ ಜೆಡಿಎಸ್‌ನಲ್ಲಿ ಗುರುತಿ ಸಿಕೊಂಡಿದ್ದ ಹೋಬಳಿ ನಾಯಕರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದು, ಈ ಕೂಗು ಎಬ್ಬಿಸಿದ್ದಾರೆ.
ಜೆಡಿಎಸ್‌ನಲ್ಲಿ ಬಿನ್ನಮತ: ರಾಮನಗರ ತಾಪಂ ಅಧಿಕಾರ ಹಿಡಿಯಲು ಜೆಡಿಎಸ್‌ಗೆ ಸಂಖ್ಯಾಬಲ ಇದ್ದರೂ, ಅಧ್ಯಕ್ಷ ಸ್ಥಾನಕ್ಕೆ ತಾಪಂ ಸದಸ್ಯೆ ಲಕ್ಷ್ಮೀಕಾಂತ, ಭದ್ರಯ್ಯ ಮತ್ತು ಜಗ ದೀಶ್ ನಡುವಿದ್ದ ಪೈಪೋಟಿ ಪರಿಹರಿಸಲು ಸ್ಥಳೀಯ ಮುಖಂಡರಿಗೆ ಸಾಧ್ಯವಾಗಲಿಲ್ಲ. ಪರಿಸ್ಥಿತಿ ಲಾಭ ಪಡೆದ ಕಾಂಗ್ರೆಸ್, ಜೆಡಿಎಸ್‌ನ ನಾಲ್ವರು ತಾಪಂ ಸದಸ್ಯರನ್ನು ತನ್ನತ್ತ ಸೆಳೆದು ಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಹೀಗೆ ಸೆಳೆದುಕೊಂಡ ಒಬ್ಬರಿಗೆ ಅಧ್ಯಕ್ಷ ಸ್ಥಾನ ಕೊಟ್ಟು ಜೆಡಿಎಸ್‌ಗೆ ಭಾರೀ ಪೆಟ್ಟುಕೊಟ್ಟಿದೆ. ಹೀಗೆ ಕಾಂಗ್ರೆಸ್‌ಗೆ ಜಿಗಿದ ಜೆಡಿ ಎಸ್ ತಾಪಂ ಸದಸ್ಯರು ಕನಕಪುರ ಶಾಸಕ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಬೇಕು. ಜಿಲ್ಲೆಯಿಂದ ರಾಜ್ಯಕ್ಕೆ 4ನೇ ಬಾರಿಗೆ ಮುಖ್ಯಮಂತ್ರಿ ಕೊಡುಗೆ ನೀಡಬೇಕಾಗಿದೆ. ಹೀಗಾಗಿ ಡಿಕೆಶಿ, ಕೈ ಬಲಪಡಿಸುವ ಸಲುವಾಗಿಯೇ ತಾವು ಕಾಂಗ್ರೆಸ್ ಸೇರಿರುವುದಾಗಿ ಹೇಳಿಕೊಂಡು ಪರೋಕ್ಷವಾಗಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಕಾಂಗ್ರೆಸ್‌ನಲ್ಲಿ ಅಸಮಾಧಾನ: ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಎಂ.ನರಸಿಂಹ ಮೂರ್ತಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಯನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಗಂಗಾಧರ್ ಅವರಿಗೆ ರವಾನಿ ಸಿದ್ದಾರೆ. ತಾಪಂ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ, ಕಡೆಗಣಿಸಲಾ ಗುತ್ತಿದೆ ಎಂಬ ದನಿ ಎತ್ತಿದ್ದಾರೆ.
ಬಿಜೆಪಿಯಲ್ಲಿ ಅಸಮಾಧಾನ: ಬಿಜೆಪಿ ಪಾಳಯದಲ್ಲಿ ಜಿಲ್ಲಾಧ್ಯಕ್ಷ ಎಂ.ರುದ್ರೇಶ್ ವಿರುದ್ಧ ಹಳೆ ಬಿಜೆಪಿ ಕಾರ್ಯಕರ್ತರು ಕತ್ತಿ ಮಸೆಯುತ್ತಿ ದ್ದಾರೆ. ಬೆವರು ಸುರಿಸಿ ಬಿಜೆಪಿ ಕಟ್ಟಿದ ತಮ್ಮನ್ನು ಕಡೆಗಣಿಸಲಾಗಿದೆ. ಇದೀಗ ರಾಜ್ಯ ದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಬಿಜೆಪಿ ಕಟ್ಟಿದ ಕೃತಜ್ಞತೆಗೆ ಅಧಿಕಾರ ಕೊಡಿಸುವ ಯಾವ ಶ್ರಮವನ್ನು ಜಿಲ್ಲಾಧ್ಯಕ್ಷರು ಹಾಕುತ್ತಿಲ್ಲ. ಅವರಿಗೆ ಬೇಕಾದವರಿಗೆ ಕೃಪೆ ತೋರುತ್ತಿದ್ದಾರೆ ಎಂದು ಹರಿಹಾಯ್ದಿದ್ದಾರೆ. ಗ್ರೇಟರ್ ಬೆಂಗಳೂರು ಬಿಡದಿ ಸ್ಮಾರ್ಟ್ ಸಿಟಿ ಪ್ರಾಧಿಕಾರದ ಅಧ್ಯಕ್ಷ ವರದರಾಜಗೌಡರ ವಿರುದ್ಧ ಬಿಡದಿ ಬಿಜೆಪಿ ಘಟಕದ ಪ್ರಮುಖರು ಅಸಮಾ ಧಾನ ಹೊರಹಾಕಿದ್ದಾರೆ.
ಬಿಡದಿ ಹೋಬಳಿ ಘಟಕದ ಪ್ರಮುಖ ಕಾರ್ಯಕರ್ತರು ಪ್ರಾಧಿಕಾರದ ಅಧ್ಯಕ್ಷರ ಬದಲಾವಣೆಗೆ ಪಟ್ಟು ಹಿಡಿದಿದ್ದಾರೆ. ಕೋವಿಡ್-19 ಲಾಕ್‌ಡೌನ್ ಸಡಲಿಕೆ ಯಾಗಿ ಜನಜೀವನ ಸಹಜ ಸ್ಥಿತಿಗೆ ಮರುಳುತ್ತಿ ರುವ ಜೊತೆಯಲ್ಲೆ ರಾಜಕೀಯ ಪಕ್ಷಗಳಲ್ಲಿ ಅಸಮಾಧಾನ ಮಡುಗಟ್ಟುತ್ತಿದೆ. ಗ್ರಾಪಂ ಚುನಾ ವಣೆ, ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಗಳಿಗೆ ದಿನಾಂಕ ಘೋಷಣೆಮುನ್ನವೇ ಪಕ್ಷಗಳಲ್ಲಿ ಅಸಮಾಧಾನ ವ್ಯಕ್ತವಾಗುತ್ತಿರುವುದು ಮುಖಂಡರಿಗೆ ತಲೆನೋವಾಗಲಿದೆ.