Advertisement

Indira Canteen: ನಗರದ ನಾಲ್ಕು ಇಂದಿರಾ ಕ್ಯಾಂಟೀನ್‌ಗೆ ಗ್ರಹಣ

04:10 PM Aug 23, 2023 | Team Udayavani |

ತುಮಕೂರು: ನಗರದಲ್ಲಿನ ನಾಲ್ಕು ಇಂದಿರಾ ಕ್ಯಾಂಟೀನ್‌ಗಳಿಗೆ ಗ್ರಹಣ ಹಿಡಿದಿದೆ. ಸಿಬ್ಬಂದಿಗೆ ಸಂಬಳ ನೀಡದ ಕಾರಣ ನಾಲ್ಕು ಇಂದಿರಾ ಕ್ಯಾಂಟೀನ್‌ಗಳನ್ನು ಬಂದ್‌ ಮಾಡಿ ಪ್ರತಿಭಟನೆ ಮಾಡಲಾಯಿತು.

Advertisement

ಬಡವರ ಹಾಗೂ ವಿದ್ಯಾರ್ಥಿಗಳ ಹೊಟ್ಟೆ ತುಂಬಿಸುತ್ತಿದ್ದ ತುಮಕೂರು ನಗರದಲ್ಲಿದ್ದ ನಾಲ್ಕು ಇಂದಿರಾ ಕ್ಯಾಂಟೀ ನ್‌ಗಳು ಏಕಾಏಕಿ ಬಂದ್‌ ಆಗಿದ್ದವು. ಹಸಿವಿನಿಂದ ಇಂದಿರಾ ಕ್ಯಾಂಟೀನ್‌ಗೆ ಬಂದ ಜನರು ಊಟ ಸಿಗದೆ ಸೆಪ್ಪೆ ಮುಖದೊಂದಿಗೆ ವಾಪಸ್‌ ಹೋದರು.

ಹೌದು, ತುಮಕೂರು ನಗರದ ತುಮಕೂರಿನ ಕ್ಯಾತಸಂದ್ರ, ಶಿರಾ ಗೇಟ್‌, ಮಂಡಿಪೇಟೆ ಹಾಗೂ ಪಾಲಿಕೆ ಆವರಣ ದಲ್ಲಿ ಸೇರಿದಂತೆ ನಗರದ ನಾಲ್ಕು ಕಡೆ ಗಳಲ್ಲಿ ಇಂದಿರಾ ಕ್ಯಾಂಟೀನ್‌ ಕಾರ್ಯ ನಿರ್ವಹಿಸುತ್ತಿವೆ. ಕಾಂಗ್ರೆಸ್‌ನ ಮಹತ್ವದ ಯೋಜನೆ ಇದಾಗಿದ್ದು, ಸಂಬಳವಿಲ್ಲದೆ ಸಿಬ್ಬಂದಿ ಇಂದಿರಾ ಕ್ಯಾಂಟೀನ್‌ ಬಂದ್‌ ಮಾಡಿ ಪ್ರತಿಭಟನೆ ನಡೆಸಿದರು.

ತುಮಕೂರು ನಗರದ ನಾಲ್ಕು ಇಂದಿರಾ ಕ್ಯಾಂಟೀನ್‌ಗಳಲ್ಲಿ ಸುಮಾರು 25ಕ್ಕೂ ಹೆಚ್ಚು ಸಿಬ್ಬಂದಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಸಿಬ್ಬಂದಿಗೆ ಕಳೆದ 8 ತಿಂಗಳಿನಿಂದ ಸಂಬಳವನ್ನೇ ನೀಡಿಲ್ಲ. ಹೀಗಾಗಿ ಮಂಗಳವಾರ ಬೆಳಗ್ಗೆ ಸಿದ್ಧಪಡಿಸಿದ

ರೈಸ್‌ ಬಾತ್‌, ಇಡ್ಲಿ, ಚಟ್ನಿ ಎಲ್ಲಾವನ್ನು ಅಡುಗೆ ಮನೆಯಲ್ಲಿ ಉಳಿಸಿ, ಸಿಬ್ಬಂದಿ ಕೆಲಸವನ್ನು ಸ್ಥಗಿತಗೊಳಿಸಿ ಆಕ್ರೋಶ ವ್ಯಕ್ತಪಡಿಸಿದರು.

Advertisement

ನಗರದ ನಾಲ್ಕು ಕಡೆಗಳಲ್ಲಿ ಇಂದಿರಾ ಕ್ಯಾಂಟೀನ್‌ ಕಾರ್ಯನಿರ್ವಹಿಸುತ್ತಿವೆ. ಇವುಗಳ ಉಸ್ತುವಾರಿಯನ್ನು ರಿವಾರ್ಡ್ಸ್‌ ಎಂಬ ಕಂಪನಿಗೆ ನೀಡಲಾಗಿದೆ. ಇಂದಿರಾ ಕ್ಯಾಂ ಟೀನ್‌ನಲ್ಲಿ ಊಟ ತಯಾ ರಿಕೆಯಿಂದ ಹಿಡಿದು, ಅಲ್ಲಿನ ಸಿಬ್ಬಂದಿಗೆ ಸಂಬಳ ನೀಡುವುದು ಎಲ್ಲಾವನ್ನು ರಿವಾರ್ಡ್ಸ್‌ ಸಂಸ್ಥೆಗೆ ಹೊರ ಗುತ್ತಿಗೆ ನೀಡಲಾಗಿದೆ. ಆದರೆ, ಕಂಪನಿಗೂ ಸರ್ಕಾರ ಬಿಲ್‌ ಪಾವತಿ ಮಾಡದೆ ಬಾಕಿ ಉಳಿಸಿ ಕೊಂಡಿದೆ. ಹೀಗಾಗಿ ಕಂಪನಿ ಯವರು ಸಿಬ್ಬಂದಿಗೆ ಸಂಬಳ ನಿಲ್ಲಿಸಿದ್ದಾರೆ.-ಮಂಜುನಾಥ್‌, ಇಂದಿರಾ ಕ್ಯಾಂಟೀನ್‌ ಉಸ್ತುವಾರಿ

Advertisement

Udayavani is now on Telegram. Click here to join our channel and stay updated with the latest news.

Next