Advertisement

ತುಮಕೂರು: ಸೋಂಕಿತರ ಸಂಖ್ಯೆ 208ಕ್ಕೆ ಏರಿಕೆ

06:47 AM Jul 04, 2020 | Lakshmi GovindaRaj |

ತುಮಕೂರು: ಕೋವಿಡ್‌ 19 ವೈರಸ್‌ ತನ್ನ ಅಟ್ಟಹಾಸವನ್ನು ಮುಂದುವರೆಸಿದ್ದು, ಶುಕ್ರ ವಾರ ಒಂದೇ ದಿನ 25 ಜನರಿಗೆ ಸೋಂಕು ದೃಢವಾಗಿದ್ದು ಸೋಂಕಿತರ ಸಂಖ್ಯೆ 208 ಕ್ಕೇರಿಕೆಯಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ  ಕಲ್ಯಾಣಾಧಿಕಾರಿ ಡಾ. ನಾಗೇಂದ್ರಪ್ಪ ತಿಳಿಸಿದ್ದಾರೆ. ಶುಕ್ರವಾರ ಮಧುಗಿರಿಯಲ್ಲಿ 12 ಜನರಿಗೆ ಸೋಂಕು ದೃಢಪಟ್ಟಿದ್ದು ಅತಿ ಹೆಚ್ಚು ಪ್ರಕರಣ ವರದಿಯಾಗಿದೆ.

Advertisement

ಉಳಿ ದಂತೆ ಕುಣಿಗಲ್‌-2, ಕೊರಟಗೆರೆ- 3, ಪಾವಗಡ-1. ಶಿರಾ-2, ತುಮ  ಕೂರು-4, ತುರುವೇಕೆರೆ-1 ಜನರಿಗೆ ಕೋವಿಡ್‌ 19 ದೃಢವಾಗಿದೆ. ಜಿಲ್ಲೆಯಲ್ಲಿ ಈವರೆಗೆ 19,540 ಜನರ ಗಂಟಲು ದ್ರವ ಪರೀಕ್ಷೆ ಮಾಡಲಾಗಿದ್ದು, ಅದರಲ್ಲಿ 15,756 ಜನರಿಗೆ ನೆಗೆಟಿವ್‌ ಎಂದು ವರದಿ ಬಂದಿದೆ. ಅದರಲ್ಲಿ ನಿಗಾ ವಣೆಯಲ್ಲಿ 1395 ಜನರಿದ್ದು  ಸೋಂಕಿತರ ಪ್ರಥಮ ಸಂಪರ್ಕದಲ್ಲಿ 566, ದ್ವೀತಿಯ ಸಂಪರ್ಕದಲ್ಲಿ 829 ಜನರಿದ್ದಾರೆ.

ಶುಕ್ರವಾರ ಒಂದೇ ದಿನ 25 ಪ್ರಕರಣಗಳು ಬೆಳಕಿಗೆ ಬಂದ ಪರಿಣಾಮ ಒಟ್ಟು ಸೋಂಕಿತರು 208ಕ್ಕೇರಿಕೆ ಯಾಗಿದೆ ಅದರಲ್ಲಿ 60 ಜನ  ಗುಣಮುಖರಾಗಿದ್ದಾರೆ. ಇನ್ನೂ ಜಿಲ್ಲಾ ಕೋವಿಡ್‌ ಆಸ್ಪತ್ರೆಯಲ್ಲಿ 141 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಐಸಿ ಯುನಲ್ಲಿ 4 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ದಿನೇ ದಿನೆ ಸೋಂಕು ಹೆಚ್ಚುತ್ತಲೇ ಇದ್ದು ನಗರದಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದ ಕೋವಿಡ್‌ 19 ಈಗ ಗ್ರಾಮಗಳಲ್ಲಿ ಕಾಣಿಸುತ್ತಿದ್ದು ಸಮುದಾಯದಲ್ಲಿ ರೋಗ ಹೆಚ್ಚು ಹರಡುತ್ತಿದ್ದು ಲ್ಯಾಬ್‌ನಿಂದ ಇನ್ನೂ ಸಾವಿರಾರು ವರದಿಗಳು ಬರಬೇಕಿದ್ದು ಇನ್ನು ಎಷ್ಟು ಜನರಿಗೆ ಸೋಂಕು ಇರುವುದೋ ಎನ್ನುವ ಆತಂಕ ಜನರಲ್ಲಿ ಮೂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next