Advertisement
ಬಡಮಕ್ಕಳೇ ವಿದ್ಯಾಭ್ಯಾಸ ಮಾಡು ತ್ತಿರುವ ಸರ್ಕಾರಿ ಶಾಲೆಗಳು ಇಂದಿಗೂ ಅಗತ್ಯ ಮೂಲ ಭೂತ ಸೌಲಭ್ಯದಿಂದ ವಂಚಿತವಾಗಿವೆ. ಹಾಗೆಯೇ ಮಳೆ ಬಂದರೆ ಪಾಠ ಕೇಳಲೂ ಆಗದ ಸ್ಥಿತಿಯಲ್ಲಿ ಮಕ್ಕಳಿದ್ದಾರೆ.
Related Articles
Advertisement
ಇದಲ್ಲದೇ ಶಿಥಿಲಗೊಂಡಿರುವ ಕಟ್ಟಡಗಳ ದುರಸ್ಥಿ ಗಾಗಿ 2.10 ಕೋಟಿ ಬಿಡುಗಡೆಯಾಗಿದ್ದು ಅದರಲ್ಲಿ ಚಿಕ್ಕನಾಯಕನಹಳ್ಳಿ ತಾಲೂಕಿನ 11 ಶಾಲೆಗಳ 12 ಕೊಠಡಿ, ಗುಬ್ಬಿಯ 10 ಶಾಲೆಯ 11 ಕೊಠಡಿ, ಕುಣಿಗಲ್ ನ 15 ಶಾಲೆ 25 ಕೊಠಡಿ, ತಿಪಟೂರು 9ಶಾಲೆ 14 ಕೊಠಡಿ, ತುಮಕೂರು ನಗರ 8 ಶಾಲೆಗಳ 18 ಕೊಠಡಿ, ತುಮಕೂರು ಗ್ರಾಮಾಂತರ 20 ಶಾಲೆಗಳ 47 ಕೊಠಡಿ, ತುರುವೇಕೆರೆ 10 ಶಾಲೆಗಳ 10 ಕೊಠಡಿ ಸೇರಿ 83 ಶಾಲೆಗಳ 137 ಕೊಠಡಿಗಳಲ್ಲಿ 65 ಕಾಮಗಾರಿ ಮುಗಿದಿದೆ. ಇನ್ನೂ 7 ಪ್ರಗತಿಯಲ್ಲಿದ್ದು 11 ಶಾಲಾ ಕಟ್ಟಡಗಳ ಕಾಮಗಾರಿ ನಡೆಯುತ್ತಿದೆ.
ಪ್ರಸಕ್ತ ಸಾಲಿನಲ್ಲಿ ಮಳೆಯಿಂದ ಹಾನಿಯಾಗಿರುವ ಜತೆಗೆ ಹಳೆಯ ಶಾಲಾ ಕಟ್ಟಡ ತೆರವು ಮಾಡಿ ಹೊಸ ಶಾಲಾ ಕಟ್ಟಡಕಟ್ಟಲು ನರೇಗಾ ಯೋಜನೆಯಲ್ಲಿ ಕಾಮಗಾರಿ ಆರಂಭಿಸಲು ಚಿಕ್ಕನಾಯಕನಹಳ್ಳಿ 44, ಗುಬ್ಬಿ 74, ಕುಣಿಗಲ್ 62, ತಿಪಟೂರು 49, ತುಮ ಕೂರು 79, ತುರುವೇಕೆರೆ 50 ಸೇರಿ ಒಟ್ಟು 358 ಶಾಲಾ ಕಟ್ಟಡಗಳ ಕಾಮಗಾರಿಗೆ ಯೋಜನೆ ಪ್ರಗತಿಯಲ್ಲಿದೆ.
ಮೇ, ಜೂನ್‌ನ ಮಾಹಿತಿ ಸಂಗ್ರಹ ಆಗಬೇಕಿದೆ:
ಕಳೆದ ಮೇ, ಜೂನ್ ತಿಂಗಳಿನಲ್ಲಿ ಸುರಿದ ಮಳೆಯಿಂದಲೂ ಕೆಲವು ಕಡೆ ಶಾಲಾ ಕಟ್ಟಡಗಳಿಗೆ ಹಾನಿಯಾಗಿದ್ದು ಅದರ ಮಾಹಿತಿ ಸಂಗ್ರಹ ಮಾಡಲಾಗುತ್ತಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಜತೆಗೆ ಹಳೆಯ ಶಾಲಾ ಕಟ್ಟಡಗಳ ನವೀಕರಣ ಹಾಗೂ ಮಳೆಹಾನಿಯಿಂದ ತೊಂದರೆಗೆ ಒಳಗಾಗಿರುವ 188 ಶಾಲೆಗಳಲ್ಲಿ 2022-23 ನೇ ಸಾಲಿನಲ್ಲಿ ವಿವೇಕ ಯೋಜನೆಯಲ್ಲಿ ಶಾಲಾ ಕೊಠಡಿಗಳ ನಿರ್ಮಾಣ ಕಾರ್ಯವೂ ಪ್ರಗತಿಯಲ್ಲಿ ಇದೆ. ಅದರಲ್ಲಿ 188 ಶಾಲೆಗಳ 244 ಕೊಠಡಿ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ತುಮಕೂರು ಶೈಕ್ಷಣಿಕ ಜಿಲ್ಲೆಯಲ್ಲಿ ಮಳೆಯಿಂದ ಹಾನಿಯಾಗಿರುವ ಸರ್ಕಾರಿ ಶಾಲಾ ಕಟ್ಟಡಗಳ ಮಾಹಿತಿ ಪಡೆಯಲಾಗುತ್ತಿದೆ. ಕಳೆದ ವರ್ಷ ಮಳೆ ಯಿಂದ ಹಾನಿಯಾದ ಕಟ್ಟಡಗಳ ದುರಸ್ತಿ ಪ್ರಗತಿಯಲ್ಲಿದೆ. ಜತೆಗೆ ಹಳೆಯ ಕಟ್ಟಡಗಳ ಕಾಮಗಾರಿಯೂ ನಡೆಯುತ್ತಿದ್ದು ವಿದ್ಯಾರ್ಥಿ ಗಳ ಶಿಕ್ಷಣಕ್ಕೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ. -ಸಿ.ರಂಗಧಾಮಯ್ಯ, ಉಪನಿರ್ದೇಶ ಕರು, ಸಾರ್ವಜನಿಕ ಶಿಕ್ಷಣ ಇಲಾಖೆ
– ಚಿ.ನಿ.ಪುರುಷೋತ್ತಮ್