Advertisement
ಯೋಜನೆಯ ಅನುಷ್ಠಾನ ಮತ್ತು ಅನುದಾನ ಸದ್ಬಳಕೆ ಆಧಾರದ ಮೇಲೆ ಆಯ್ಕೆಯಾದ ನಗರಗಳಿಗೆ ಕೇಂದ್ರ ಸರಕಾರವು ರ್‍ಯಾಂಕಿಂಗ್ ನೀಡುತ್ತಿದೆ. ಕಳೆದ ವರ್ಷ ತುಮಕೂರು ಸ್ಮಾರ್ಟ್ ಸಿಟಿ ದೇಶದಲ್ಲಿ 23ನೇ ಸ್ಥಾನದಲ್ಲಿದ್ದು, ಪ್ರಸ್ತುತ 9ನೇ ಸ್ಥಾನಕ್ಕೆ ಏರಿದೆ.
ಯೋಜನೆ ಪ್ರಗತಿಯ ವೇಗ, ಅನುದಾನ ಸದ್ಬಳಕೆ ಮತ್ತು ಇತರ ಮಾಹಿತಿ ಆಧರಿಸಿ ರ್‍ಯಾಂಕ್ ನೀಡಲಾಗುತ್ತದೆ. ತುಮಕೂರಿನಲ್ಲಿ ಪ್ರಗತಿ ಬಗ್ಗೆ ಕೇಂದ್ರ, ರಾಜ್ಯ ಸರಕಾರಕ್ಕೆ ಕಾಲ ಕಾಲಕ್ಕೆ ಮಾಹಿತಿ ನೀಡಲಾಗಿದೆ. ಇದರ ನ್ವಯ ರ್‍ಯಾಂಕಿಂಗ್ ನೀಡಲಾಗಿದೆ.