Advertisement

ತುಂಬೆ: ನೀರಿನ ಮಟ್ಟ 4.40 ಮೀಟರ್‌ಗೆ ಇಳಿಕೆ

12:05 AM May 06, 2019 | sudhir |

ಮಂಗಳೂರು: ತುಂಬೆ ವೆಂಟೆಡ್‌ ಡ್ಯಾಂನಲ್ಲಿ ರವಿವಾರ 5 ಸೆಂ.ಮೀ. ಇಳಿಕೆಯಾಗಿದ್ದು, ಸಂಜೆ ವೇಳೆಗೆ 4.40 ಮೀ.ನಷ್ಟಿತ್ತು. ರವಿವಾರ ಬೆಳಗ್ಗೆ 4.45 ಮೀ.ನಷ್ಟಿದ್ದ ನೀರಿನ ಮಟ್ಟ ಸಂಜೆ ವೇಳೆಗೆ 4.40 ಮೀ.ನಷ್ಟಾಗಿದೆ.

Advertisement

ಮೇ 3ರ ಬೆಳಗ್ಗೆ 6 ಗಂಟೆಯಿಂದ ನೀರು ಸರಬರಾಜು ಆರಂಭಗೊಂಡಿದ್ದು, ಮೇ 7ರ ಬೆಳಗ್ಗೆ 6 ಗಂಟೆ ವರೆಗೆ ಮುಂದುವರಿಯಲಿದೆ. ಆದರೆ ಎರಡು ದಿವಸಕ್ಕೊಮ್ಮೆ ನೀರು ಪೂರೈಕೆಯಾಗುವ ಪ್ರದೇಶಗಳಿಗೆ ಶನಿವಾರ ಬೆಳಗ್ಗೆ 11 ಗಂಟೆಯಿಂದ ನೀರು ಪೂರೈಕೆ ಸ್ಥಗಿತಗೊಂಡಿದೆ. ಸೋಮವಾರ ಬೆಳಗ್ಗೆ ಮತ್ತೆ ನೀರು ಪೂರೈಕೆ ಆರಂಭಗೊಳ್ಳುವ ನಿರೀಕ್ಷೆ ಇದೆ.

ಮೇ 7ರ ಬೆಳಗ್ಗೆ 6ರಿಂದ ಮೇ 9ರ ತನಕ ಬೆಳಗ್ಗೆ 6ರ ತನಕ 48 ಗಂಟೆ ನೀರು ಪೂರೈಕೆ ಸ್ಥಗಿತಗೊಳ್ಳಲಿದೆ. ಮೇ 9ರ ಬೆಳಗ್ಗೆ 6ರಿಂದ ಮೇ 13ರ ಬೆಳಗ್ಗೆ 6ರ ತನಕ 96 ಗಂಟೆ ಕಾಲ ನೀರು ಪೂರೈಕೆ ನಡೆಯಲಿದೆ. ಮೇ 13ರ ಬೆಳಗ್ಗೆ 6ರಿಂದ ಮೇ 15ರ ಬೆಳಗ್ಗೆ 6ರ ತನಕ 48 ಗಂಟೆ ಕಾಲ ಸ್ಥಗಿತಗೊಳ್ಳಲಿದೆ. ಮೇ 15ರ ಬೆಳಗ್ಗೆ 6ರಿಂದ ಮೇ 19ರ ಬೆಳಗ್ಗೆ 6ರಿಂದ 96 ಗಂಟೆ ಪೂರೈಕೆಯಾಗಲಿದೆ. ಮೇ 19ರ ಬೆಳಗ್ಗೆ 6ರಿಂದ ಮೇ 21ರ ಬೆಳಗ್ಗೆ 6ರ ವರೆಗೆ ಮತ್ತೆ ಸ್ಥಗಿತಗೊಳ್ಳಲಿದೆ.

Advertisement

Udayavani is now on Telegram. Click here to join our channel and stay updated with the latest news.

Next