Advertisement

ತುಂಬೆ ಅಣೆಕಟ್ಟಿನಲ್ಲಿ ಹೂಳೆತ್ತುವಿಕೆಗೆ ಚಾಲನೆ

01:15 PM Jul 01, 2019 | Vishnu Das |

ಬಂಟ್ವಾಳ: ತುಂಬೆ ಅಣೆಕಟ್ಟು ಪ್ರದೇಶದಲ್ಲಿ ನೇತ್ರಾವತಿ ನದಿಯಿಂದ ಹೂಳೆತ್ತುವ ಕಾಮಗಾರಿ ಅಧಿಕೃತ ವಾಗಿ ಆರಂಭವಾಗಿದ್ದು, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ನೇತೃತ್ವ ದಲ್ಲಿ ಕೆಲಸ ನಡೆದಿದೆ. ಸುಮಾರು 500 ಲೋಡ್‌ ಮರಳನ್ನು ಈಗಾಗಲೇ ಸಂಗ್ರಹಿಸ ಲಾಗಿದೆ.

Advertisement

ಮೊದಲ ಹಂತದಲ್ಲಿ 2.90 ಕೋಟಿ ರೂ. ವೆಚ್ಚದಲ್ಲಿ ಹೂಳೆತ್ತಲು ಅನುಮತಿ ಲಭಿಸಿದೆ. ಜಿಲ್ಲಾಧಿಕಾರಿಗಳ ವಿಶೇಷ ಅನುದಾನದಲ್ಲಿ ಯೋಜನೆ ರೂಪಿಸ ಲಾಗಿದೆ. ಸಂಗ್ರಹವಾದ ಮರಳನ್ನು ಸರಕಾರಿ, ಖಾಸಗಿ ಕಾಮಗಾರಿಗಳಿಗೆ ಬಳಸಿಕೊಳ್ಳ ಲಾಗುವುದು ಎಂದು ಮೂಲಗಳು ತಿಳಿಸಿವೆ.

ಉಪ ಗುತ್ತಿಗೆ
ದಿಲ್ಲಿಯ ನೆಲ್ಕೊ ಕಂಪೆನಿ ಹೂಳೆತ್ತುವ ಗುತ್ತಿಗೆ ಪಡೆದಿದ್ದು ಉಪಗುತ್ತಿಗೆಯನ್ನು ಮಂಗಳೂರಿನ ಖಾಸಗಿ ವ್ಯಕ್ತಿಗಳು ವಹಿಸಿಕೊಂಡಿದ್ದಾರೆ. ಹೂಳೆತ್ತುವ 25 ಟನ್‌ ಸಾಮರ್ಥ್ಯದ ಪಂಟೂನ್‌ ತೇಲುವ ಗೋಲಗಳನ್ನು ಕಳೆದ ತಿಂಗಳಲ್ಲೇ ಸ್ಥಾಪಿಸಿದ್ದು, ಅನುಮತಿಗಾಗಿ ಕಾಯಲಾಗುತ್ತಿತ್ತು. ಪ್ರಸ್ತುತ ಅನುಮತಿ ಲಭಿಸಿದ್ದು, ಕಾಮಗಾರಿ ಆರಂಭಗೊಂಡಿದೆ.

ಯಂತ್ರಗಳ ಚಾಲನೆಗೆ ವಿದ್ಯುತ್‌ ಸಂಪರ್ಕವನ್ನು ಬಳಸಿಕೊಳ್ಳಲಾಗಿದೆ. 125 ಕೆ.ವಿ. ಅಶ್ವಶಕ್ತಿಯ ಜನರೇಟರನ್ನು ಸ್ಥಳದಲ್ಲಿ ಇರಿಸಿಕೊಂಡಿದ್ದು ಯಾವುದೇ ಸಂದರ್ಭ ವಿದ್ಯುತ್‌ ನಿಲುಗಡೆ ಆದರೂ ಯಂತ್ರ ಗಳು ಸ್ಥಗಿತವಾಗದಂತೆ ನೋಡಿ ಕೊಳ್ಳಲಾಗಿದೆ. ಡ್ರೆಜ್ಜಿಂಗ್‌ ಯಂತ್ರವು ಗಂಟೆಗೆ 100 ಎಂ.ಕ್ಯೂ. (ಕ್ಯುಬಿಕ್‌ ಮೀಟರ್‌) ಹೂಳನ್ನು ಮೇಲೆತ್ತಿ ಹಾಕುವುದು. ಹೂಳನ್ನು ಸಂಗ್ರಹಿಸು ವುದಕ್ಕಾಗಿ ನಾಲ್ಕು ಎಕರೆಯಷ್ಟು ವಿಶಾಲ ಪ್ರದೇಶವನ್ನು ಮೀಸಲಿಡಲಾಗಿದೆ. ಒಡಿಶಾ ಮತ್ತು ಕೊಚ್ಚಿಯಲ್ಲಿ ಇಂತಹ ಕಾಮಗಾರಿ ನಿರ್ವಹಿಸಿದ ಅನುಭವಿ ಗಳು ಇಲ್ಲಿಯೂ ಕೆಲಸದಲ್ಲಿ ತೊಡಗಿದ್ದಾರೆ.

Advertisement

ಸಿಸಿ ಕೆಮರಾ ಕಾವಲು
ಮರಳು ಸಂಗ್ರಹಿಸಿರುವ ಸ್ಥಳಕ್ಕೆ ಪೂರ್ವಾನುಮತಿ ಇಲ್ಲದೆ ಹೋಗಲು ಸಾಧ್ಯವಾ ಗದಂತೆ ತಡೆಬೇಲಿ ನಿರ್ಮಿಸಲಾಗಿದೆ. ಪ್ರವೇಶ ದ್ವಾರ ಮತ್ತು ಇತರ ಸ್ಥಳಗಳಲ್ಲಿ ಸಿಸಿ ಕೆಮರಾ ಸಹಿತ ಭದ್ರತೆ ಇದ್ದು, ಮರಳನ್ನು ಅಕ್ರಮ ವಾಗಿ ಸಾಗಿಸದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಮರಳು ಸಂಗ್ರಹ ಹೇಗೆ?
ಬಿ. ಮೂಡ ಗ್ರಾಮದ ಕುಳತ್ತಬೆಟ್ಟು ಪ್ರದೇಶದಲ್ಲಿ ನದಿಪಾತ್ರದ 100 ಮೀಟರ್‌ ವ್ಯಾಪ್ತಿಯಲ್ಲಿ ಕಾಮಗಾರಿ ನಡೆಯುತ್ತಿದೆ. ಯಾಂತ್ರೀಕೃತ ದೋಣಿಯಲ್ಲಿ ಡ್ರೆಜ್ಜಿಂಗ್‌ ಯಂತ್ರವನ್ನು ಇರಿಸಿ ನೀರು ಸಹಿತ ಹೂಳನ್ನು (ಮರಳು) ಮೇಲೆತ್ತಿ ಸಮೀಪದ ಹೊಂಡಕ್ಕೆ ರವಾನಿಸಲಾಗುತ್ತಿದೆ. ಹೊಂಡದಲ್ಲಿ ನೀರು ತುಂಬಿ ಹೊರ ಹರಿಯುವಾಗ ಕೆಸರು ಹೊರಹೋಗುವುದರಿಂದ ಶುದ್ಧವಾದ ಮರಳು ತಳದಲ್ಲಿ ನಿಲ್ಲುತ್ತದೆ. ಅಂತಹ ಮರಳನ್ನು ಜೆಸಿಬಿ ಬಳಸಿ ಮೇಲೆತ್ತಿ ಲಾರಿಗಳ ಮೂಲಕ ನಿರ್ದಿಷ್ಟ ಸ್ಥಳಕ್ಕೆ ಸಾಗಿಸಲಾಗುತ್ತದೆ.

ಡ್ರೆಜ್ಜಿಂಗ್‌ ಮೂಲಕ ಮರಳನ್ನು ಎತ್ತಿ ದಾಸ್ತಾನು ಮಾಡಿ ಲೆಕ್ಕಪತ್ರ ಇಡುವುದಷ್ಟೇ ನಮ್ಮ ಜವಾಬ್ದಾರಿ. ಉಳಿದಂತೆ ಅದರ ವಿಲೇವಾರಿ, ಮಾರಾಟ ಇತ್ಯಾದಿ ಗಣಿ ಇಲಾಖೆಗೆ ಸೇರಿದ್ದು, ಮರಳು ಅಗತ್ಯವುಳ್ಳವರು ಇಲಾಖೆ ಯನ್ನು ಸಂಪರ್ಕಿಸಬಹುದು.
ಧರ್ಮೇಶ್‌,
ತಾಂತ್ರಿಕ ನಿರ್ವಾಹಕ

Advertisement

Udayavani is now on Telegram. Click here to join our channel and stay updated with the latest news.

Next