Advertisement
ನಗರದ ಕನ್ನಡ ಭವನದಲ್ಲಿ ಸ್ನೇಹ ಸಂಗಮ ಸಾಹಿತ್ಯ ಬಳಗ ಜಿಲ್ಲಾ ಶಾಖೆಯ ವತಿಯಿಂದ ಆಯೋಜಿಸಿದ್ದ ರಾಜ್ಯ ಮಟ್ಟದ ಕವಿ ಹೃದಯಗಳ ಸಂಗಮ- 2019 ಕವಿಗೋಷ್ಠಿ, ಬಳಗದ ವಾರ್ಷಿಕೋತ್ಸವ, ಕವನ ಸಂಕಲನ ಬಿಡುಗಡೆ ಹಾಗೂ ಪ್ರಶಸ್ತಿ ಪ್ರದಾನ ಸಮಾ ರಂಭವನ್ನು ಉದ್ಘಾಟಿಸಿದ ಅವರು ಮಾತನಾಡಿ, ಸಾಹಿತ್ಯದ ಹೊಸ ಸ್ವರೂಪ ಎಂಬಂತೆ ವಾಟ್ಸ್‌ಆ್ಯಪ್ ಕವನಗಳು ಹೆಚ್ಚಾಗುತ್ತಿವೆ. ಇದು ಸುಲಭದ ಮಾರ್ಗವೂ ಆಗಿದೆ. ಅದರೆ, ವಾಟ್ಸ್‌ಆ್ಯಪ್ ಮೂಲಕ ಮೂಡಿಬರುವ ಕವನಗಳು ಗಂಭೀರವಾಗಿರಬೇಕು. ಸಾಮಾಜಿಕ ನೆಲೆಯಲ್ಲಿ ನಿಂತು ನೋಡುವಂತಿರಬೇಕು. ಅದು ಎಲ್ಲರಿಗೂ ಒಪ್ಪುವಂತಹ ಹಾಗೂ ವಿಮರ್ಶೆಗೂ ಒಳಪಡುವಂತಹ ನಿಟ್ಟಿನಲ್ಲಿಯೇ ಇರಬೇಕು ಎಂದು ಹೇಳಿದರು.
Related Articles
Advertisement
ಕಲಿಕಾ ಮನಸ್ಸು ಇರಬೇಕು: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪಿಟೀಲು ವಾದಕ ಹಾಗೂ ಕವಿ ಜಿ.ಎನ್.ಶ್ಯಾಮಸುಂದರ್ ಮಾತನಾಡಿ, ಕವಿಯ ಮನಸ್ಸು ಹಕ್ಕಿಯ ರೆಕ್ಕಿಯಿದ್ದಂತೆ, ಕಲಿಕೆ ಎಂಬುಂದು ಸಾಗರದಷ್ಟು ಇರುತ್ತದೆ. ಆದರೆ, ಕಲಿಕಾ ಮನಸ್ಸು ಇರಬೇಕು. ಪದ ಬಳಕೆಯ ಬಗ್ಗೆ ಕವಿಗಳು ಅತ್ಯಂತ ಎಚ್ಚರಿಕೆ ವಹಿಸಬೇಕು. ಸಾಮಾಜಿಕ ಪ್ರಜ್ಞೆ ಇರಬೇಕು, ಓದುಗನ ಮನಸ್ಸಿಗೆ ತಟ್ಟುವ ರೀತಿಯಲ್ಲಿ ಕವನಗಳು ಇರಬೇಕು ಹಾಗೂ ಇಂತಹ ಅವಕಾಶಗಳನ್ನು ಕೊಟ್ಟಿರುವುದು ನಮ್ಮ ಹೆಮ್ಮೆಯ ವಿಷಯವಾಗಿದೆ ಎಂದು ತಿಳಿಸಿದರು.
ಹೊಸ ಬೆಳವಣಿಗೆಗೆ ನಾಂದಿ: ರತ್ಮಬಡವನಹಳ್ಳಿ ಮಾತನಾಡಿ, ಸ್ನೇಹ ಸಂಗಮದಂತೆ ಸಾಹಿತ್ಯದ ಒಲವು ಇರುವವರು ಒಂದು ಕಡೆ ಸೇರುವುದು ಅತ್ಯಂತ ಸಂತಸದ ವಿಚಾರವಾಗಿದೆ. ಮನೆಗಳಲ್ಲಿಯೇ ಇಂದು ವಿಷಯಗಳನ್ನು ಹಂಚಿಕೊಳ್ಳುವ ವಾತಾವರಣ ಇಲ್ಲವಾಗಿದೆ. ಇಂತಹ ಸಂದರ್ಭದಲ್ಲಿ ಸಾಹಿತ್ಯಾಸಕ್ತರು ಒಂದು ಕಡೆ ಸೇರಿ ಚರ್ಚೆ ಮಾಡುವುದು ಹೊಸ ಬೆಳವಣಿಗೆಗೆ ನಾಂದಿಯಾಗಲಿದೆ ಎಂದರು.
ಜಿಲ್ಲೆಗೆ ಹೆಮ್ಮೆಯ ವಿಚಾರ: ಸ್ನೇಹ ಸಂಗಮ ಸಂಸ್ಥಾಪಕ ಚಂದ್ರುನಿಟ್ಟೂರು ಮಾತನಾಡಿ, ಸಾಹಿತ್ಯದ ಕಾರ್ಯ ಕ್ರಮಗಳೆಂದರೆ ಇಂದು ದೂರದ ಊರುಗಳಿಂದ ಯಾರನ್ನಾದರೂ ಕರೆಯುವುದೇ ಕಷ್ಟಕರವಾಗಿದೆ. ಅವರನ್ನು ಆಮಂತ್ರಿಸುವುದರಿಂದ ಹಿಡಿದು ಸನ್ಮಾನದ ತನಕ ಕೆಲವರು ನಿರೀಕ್ಷಿಸುತ್ತಾರೆ. ಇತಂಹ ದಿನಗಳಲ್ಲಿ ರಾಜ್ಯದ ವಿವಿಧ ಮೂಲೆಗಳಿಂದ ಈ ಕಾರ್ಯಕ್ರಮಕ್ಕೆ ಆಗಮಿಸಿರುವುದು ಜಿಲ್ಲೆಗೆ ಒಂದು ಹೆಮ್ಮೆಯ ವಿಷಯವಾಗಿದೆ. ಇತ್ತೀಚಿನ ದಿನಗಳಲ್ಲಿ ಜಿಲ್ಲೆ ಸಾಹಿತ್ಯ ಕ್ಷೇತ್ರದ ಕೇಂದ್ರವಾಗುತ್ತಿರುವುದು ನಮ್ಮೆಲ್ಲರಿಗೂ ಹೆಮ್ಮೆ ತರಿಸಿದೆ ಎಂದು ಹೇಳಿದರು.
ಪುಸ್ತಕ ಬಿಡುಗಡೆ: ಜಿ.ಎನ್.ಶ್ಯಾಮಸುಂದರ್ ಅವರಿಂದ ಶಾಮಗಾನ, ರತ್ನಬಡವನಹಳ್ಳಿ ಮೌನ ದಿಂಚರ, ವಿಜಯಪದ್ಮಶಾಲಿ ಭಾವೋಲ್ಲಾಸ, ಗೋಪಿ ಹಂದನಕೆರೆ ಜಗವೆಲ್ಲಾ ಕಾವ್ಯಮಯ, ಚಂದ್ರು ನಿಟ್ಟೂರು ಕಚಗುಳಿ ಪುಸ್ತಕ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ದಿವ್ಯಾಆಚಾರ್, ಹೆಚ್.ಎನ್. ಸುಧಾರಾಜು, ಶಶಿವಸಂತ, ಡಾ.ಗಂಧರ್ವ, ರಾಜೇಂದ್ರ ಪಾಟೀಲ್, ಅಣ್ಣಪ್ಪ ಮೇಟಿಗೌಡರು, ನರಸಿಂಹಯ್ಯ, ಎನ್.ವಿ.ವೆಂಟೇಶಯ್ಯ, ನಾಗರಾಜು, ದಯಾನಂದ ಸರಸ್ವತಿ, ಭೈರಪ್ಪ, ಬಿ.ಎನ್.ದಯಾನಂದ್, ರಂಗನಾಥಾಚಾರ್, ಡಾ.ಸುರೇಶ್ ನೆಗಳಗುಳಿ, ಜಬಿಲಾಲ್ ಮುಲ್ಲಾ, ಲಲಿತಾಸಂಪಿಗೆ, ಚಿನ್ನುಪ್ರಿಯ, ಸಿದ್ದುಸ್ವಾಮಿ, ವಿಜಯಾ.ಆರ್, ಹನುಮಂತಚಾರ್, ಪುಟ್ಟಣ್ಣ ಕೋಳಾಲ, ಭಾಗ್ಯ, ಕಲ್ಪತರು ಅಭಿನಯ ಶಾಲೆಯ ಆನಂದ್ ಸೇರಿದಂತೆ ಅನೇಕರು ಹಾಜರಿದ್ದರು.