Advertisement

ಚೆಕ್ ಡ್ಯಾಂ ಗೆ ಬಿದ್ದು ಮಹಿಳೆ ನಿರುಪಾಲು : ಅಗ್ನಿಶಾಮಕ ಸಿಬ್ಬಂದಿಗಳಿಂದ ಕಾರ್ಯಾಚರಣೆ

10:06 AM Aug 07, 2022 | Team Udayavani |

ಪಾವಗಡ : ತಾಲ್ಲೂಕಿನ ಬ್ಯಾಡನೂರು ಕೆರೆ ಬಳಿಯ ಚೆಕ್ ಡ್ಯಾಂ ಗೆ ಮಹಿಳೆಯೋರ್ವರು ಕಾಲು ಜಾರಿ ಬಿದ್ದು ಭಾನುವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ.

Advertisement

ಬ್ಯಾಡನೂರು ಗ್ರಾಮದ ದೇವೀರಮ್ಮ(38) ಮೃತರು. ಮಗಳು ಹಾಗೂ ಸಹೋದರಿಯೊಂದಿಗೆ ಕೆರೆ ಹಿಂಬದಿಯ ಚೆಕ್ ಡ್ಯಾಂ ಬಳಿ ಹೋಗಿದ್ದ ಮಹಿಳೆ ಕಾಲು ಜಾರಿ ಬಿದ್ದಿದ್ದಾರೆ. ಗ್ರಾಮಸ್ಥರು ಹುಡುಕಾಟ ನಡೆಸಿದರು ಮಹಿಳೆಯ ಮೃತ ದೇಹ ಸಿಕ್ಕಿಲ್ಲ.

ಅಗ್ನಿಶಾಮಕ ದಳದ ಸಿಬ್ಬಂದಿ ಹುಡುಕಾಟ ಆರಂಭಿಸಿದ್ದಾರೆ. ಸೀಮೆ ಜಾಲಿ ಗಿಡಗಳು ಇರುವುದರಿಂದ ಮೃತದೇಹ ಹೊರತೆಗೆಯಲು ಸಾಧ್ಯವಾಗುತ್ತಿಲ್ಲ.

ಇದನ್ನೂ ಓದಿ : ಇಲ್ಲಿ ಮಳೆಗಾಲದಲ್ಲಿ ಸಾಯಲೂ ಬಾರದು…! ಗೃಹ ಸಚಿವರ ಕ್ಷೇತ್ರದಲ್ಲಿ ಏನಿದು ಅವಸ್ಥೆ

Advertisement

Udayavani is now on Telegram. Click here to join our channel and stay updated with the latest news.

Next