ತುಮಕೂರು: ಕಳೆದ ಒಂದು ತಿಂಗಳಿನಿಂದ ಕುಡಿಯುವ ನೀರಿನ ಸಮಸ್ಯೆಯಿಂದ ಬಸವಳಿದಿದ್ದ ತುಮಕೂರು ನಾಗರಿಕರ ನೀರಿನ ದಾಹ ನೀಗಿಸಲು ಹಾಸನದ ಹೇಮಾ ವತಿ ಜಲಾಶಯದಿಂದ ತುಮಕೂರಿಗೆ ಹೇಮೆ ಹರಿದು ಬಂದಿದ್ದಾಳೆ. ತುಮಕೂರಿಗೆ ಬಂದ ಹೇಮಾವತಿಗೆ ಮೇಯರ್ ಲಲಿತಾ, ರವೀಶ್, ಉಪಮೇಯರ್ ರೂಪಶ್ರೀ ಪೂಜೆ ಸಲ್ಲಿಸುವ ಮೂಲಕ ಸ್ವಾಗತಿಸಿದರು.
ಹೇಮಾವತಿ ಜಲಾಶಯದಿಂದ ನಾಲೆ ಮೂಲಕ ತುಮಕೂರು ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಬುಗುಡನಹಳ್ಳಿ ಜಲಸಂಗ್ರಹಗಾರಕ್ಕೆ ಭಾನುವಾರ ನೀರು ಹರಿಯಿತು.
ಭಾನುವಾರ ಬೆಳಗ್ಗೆ 6.30ಕ್ಕೆ ತುಮಕೂರು ಬುಗಡನಹಳ್ಳಿ ಕೆರೆಗೆ ಪ್ರವೇಶಿಸಿದ ಹೇಮಾವತಿ ನೀರನ್ನು ಒಂದು ಗಂಟೆಗೂ ಹೆಚ್ಚು ಕಾಲ ಕೆರೆಗೆ ನೀರು ಬಿಡದೇ ಮುಂದಕ್ಕೆ ನಾಲೆಯಲ್ಲಿ ಹರಿಸಲಾಯಿತು. ನಾಲೆಯಲ್ಲಿ ಬಂದ ಕಲುಷಿತ ನೀರು ಕಡಿಮೆಯಾದ ಮೇಲೆ ಕೆರೆಗೆ ನೀರು ಹರಿಸಲಾಯಿತು. ಈ ವೇಳೆ ಹೇಮಾವತಿ ನಾಲಾ ಎಂಜಿನಿಯರ್‌ಗಳು, ಪಾಲಿಕೆ ಅಧಿಕಾರಿಗಳು, ಪೊಲೀಸರು ಬಿಗಿಭದ್ರತೆಯಲ್ಲಿ ನೀರು ಹರಿಸಿದರು.
ರೈತರಲ್ಲಿ ಆಶಾಭಾವ: ಕಳೆದ ವರ್ಷ ಜು.4ರಂದೇ ಹೇಮಾವತಿ ಜಲಾಶಯದಿಂದ ನೀರು ಬುಗಡನಹಳ್ಳಿಗೆ ಬಂದಿತ್ತು. ಕಳೆದ ವರ್ಷ 23 ಟಿಎಂಸಿ ನೀರನ್ನು ಜಿಲ್ಲೆಗೆ ಹರಿಸಿರುವುದಾಗಿ ಅಧಿಕಾರಿಗಳು ಹೇಳಿದ್ದರು. ಆದರೆ ಜಿಲ್ಲೆಯ ಯಾವುದೇ ಕೆರೆಕಟ್ಟೆಗಳು ಸರಿಯಾಗಿ ತುಂಬಿ ರಲಿಲ್ಲ. ತುಮಕೂರಿನ ಬುಗಡನಹಳ್ಳಿ ಕೆರೆಯೇ ತುಂಬಿ ರಲಿಲ್ಲ, ಆದರೆ ಈ ಬಾರಿ ನೀರು ರಭಸವಾಗಿ ಬರುತ್ತಿದೆ. ಹೇಮಾವತಿ ಜಲಾಶಯಕ್ಕೂ ನೀರು ಸಂಗ್ರಹವಾಗುತ್ತಿದೆ. ಈ ಬಾರಿ ಅಧಿಕಾರಿಗಳು ಎಲ್ಲಾ ಕೆರೆಗಳಿಗೆ ನೀರು ಹರಿಸುತ್ತಾರೆ ಎನ್ನುವ ಆಶಾಭಾವನೆ ರೈತರಲ್ಲಿ ಮೂಡಿದೆ.
ಕುಡಿವ ನೀರಿಗೆ ಕೆರೆಗಳಿಗೆ ಹೇಮಾವತಿ ನೀರು ತುಂಬಿ ಸಲು ಮೊದಲ ಅದ್ಯತೆ ನೀಡಲಾಗಿದೆ. ಇಡೀ ನಾಲೆಯಲ್ಲಿ ಬರುತ್ತಿರುವ ನೀರನ್ನು ಸಂಪೂರ್ಣವಾಗಿ ಬುಗುಡನಹಳ್ಳಿ ಕೆರೆಗೆ ತಿರುಗಿಸಿರುವುದರಿಂದ ಮುಂದಿನ ಒಂದು ವಾರದಲ್ಲಿ ಕೆರೆ ತುಂಬಲಿದೆ ಎಂಬ ವಿಶ್ವಾಸ ಮೂಡಿದೆ.
ಮೇಯರ್ ಲಲಿತಾ, ಉಪಮೇಯರ್ ರೂಪಶ್ರೀ ಮತ್ತು ಪಾಲಿಕೆ ಸದಸ್ಯರು ಹೇಮಾವತಿಗೆ ಪೂಜೆ ಸಲ್ಲಿಸಿ, ಕಳೆದ ಬಾರಿ ನಗರದಲ್ಲಿ ಕುಡಿವ ನೀರಿನ ಸಮಸ್ಯೆ ಉಲ್ಬಣಿ ಸಿತ್ತು. ಅದೃಷ್ಟವಶಾತ್ ಹೇಮಾವತಿ ಅಚ್ಚುಕಟ್ಟು ಪ್ರದೇಶ ದಲ್ಲಿ ಒಳ್ಳೆಯ ಮಳೆಯಾದ ಕಾರಣ ಈಗ ನೀರು ಬಿಡ ಲಾಗಿದೆ. ಇದು ನಿಜಕ್ಕೂ ಸಂತೋಷದ ವಿಚಾರ. ಈಗಾ ಗಲೇ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡ ಲಾಗುತ್ತಿದೆ. ಹೇಮಾವತಿ ನೀರು ಬಂದಿರುವುದರಿಂದ ಜನರಿಗೆ ಬೇಗ ನೀರು ಕೊಡಬಹುದು ಎಂದು ಸದಸ್ಯರು ಹರ್ಷ ವ್ಯಕ್ತಪಡಿಸಿದ್ದಾರೆ.