Advertisement

ತುಳುವರು ಎಲ್ಲಿದ್ದರೂ ಸಂಘಟಣೆಗೆ ಮಹತ್ವ ನೀಡುವವರು

06:01 PM Sep 20, 2019 | Suhan S |

ಮುಂಬಯಿ, ಸೆ. 19: ಜಾತಿ, ಧರ್ಮವನ್ನು ಮೀರಿ ಭಾಷೆ, ಸಂಸ್ಕೃತಿ, ಸಂಪ್ರದಾಯವನ್ನು ಪ್ರೀತಿಸುವ ಗುಣ ಇರುವ ತುಳುವರು ಎಲ್ಲಿದ್ದರೂ ಸಂಘಟಣೆಗೆ ಮಹತ್ವ ನೀಡುವವರು. ಕಳೆದ 9 ವರ್ಷಗಳಿಂದ ವೈವಿಧ್ಯ ಕಾರ್ಯಕ್ರಮಗಳ ಮೂಲಕ ಉತ್ತರ ಮುಂಬಯಿ ಪರಿಸರದಲ್ಲಿ ಪ್ರಸಿದ್ಧಿ ಪಡೆದ ತುಳು ಸಂಘ ಬೊರಿವಲಿ ಇದೀಗ ಪರಿಸರದಲ್ಲಿ ಸ್ವಂತ ಕಚೇರಿಯನ್ನು ಹೊಂದುವ ಮೂಲಕ 9 ವರ್ಷಗಳ ಕನಸ್ಸೊಂದು ನನಸಾಗಿ ಸಂಘ ತನ್ನ ಅಸ್ತಿತ್ವವನ್ನು ದ್ವಿಗುಣ ಗೊಳಿಸಿದೆ ಎಂದು ತುಳು ಸಂಘ ಬೊರಿವಲಿಯ ಗೌರವಾಧ್ಯಕ್ಷರಾದ ಡಾ| ವಿರಾರ್‌ ಶಂಕರ್‌ ಶೆಟ್ಟಿ ಆಶಯ ವ್ಯಕ್ತಪಡಿಸಿದರು.

Advertisement

ಅವರು ಸೆ. 14ರಂದು ಬೊರಿವಲಿ ಪಶ್ಚಿಮದ ಯೋಗಿ ನಗರದ ಸೊಸೈಟಿ ಅಡಿಟೋರಿಯಂ ಹಾಲ್ನಲ್ಲಿ ಜರಗಿದ ಬೊರಿವಲಿ ತುಳು ಸಂಘದ 9ನೇ ವಾರ್ಷಿಕ ಮಹಾಸಭೆಯಲ್ಲಿ ಉಪಸ್ಥಿತರಿದ್ದು ಸದಸ್ಯರನ್ನು ಉದ್ದೇಶಿಸಿ ಮಾತನಾಡಿ, ಸಂಘದ ಚರ್ಚೆ, ಪ್ರಸ್ತಾಪನೆಗಳಲ್ಲಿ ಮನಸ್ತಾಪ ಮೂಡಿದರೂ ಸಮರ್ಪಣಾ ಮನೋಭಾವದಿಂದ ಸರ್ವತೋಮುಖ ಬೆಳವಣಿಗೆಯಲ್ಲಿ ಸದಾ ಸಂಘಟಿರಾಗಿ ದುಡಿಯುವುದು ತುಳುವರ ರಕ್ತಗತ ಗುಣವಾಗಿದೆ. ಯುವಶಕ್ತಿ, ಮಕ್ಕಳು ಹೆಚ್ಚಿನ ಉತ್ಸುಕತೆಯಿಂದ ಮುಂದೆ ಬಂದು ಈ ತುಳು ಸಂಘದಲ್ಲಿ ತಮ್ಮ ವೇದಿಕೆ ನಿರ್ಮಿಸಿಕೊಳ್ಳಬೇಕು ಎಂದು ಅವರು ಹೇಳಿದರು.

ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ರಾದ ವಾಸು ಕೆ. ಪುತ್ರನ್‌ ಅವರು ಮಾತನಾಡಿ, ಸಂಘವೊಂದು 9 ವರ್ಷ ಪೂರ್ತಿಗೊಳಿಸುವ ಮೂಲಕ ಶಿಶುವೊಂದರ ಜನನವಾದಂತಾಗಿದೆ. ಪರಿಸರದಲ್ಲಿ ತುಳು ಭಾಷೆ, ಸಂಸ್ಕೃತಿ ಯನ್ನು ಗಟ್ಟಿಗೊಳಿಸುವ ಮೂಲಕ ತುಳು ಸಂಘವು ವೈಶಿಷ್ಟ್ಯಪೂರ್ಣ ಸಂಸ್ಥೆಯಾಗಿ ಬೆಳೆದಿದೆ. ಸಂಸ್ಥೆಯನ್ನು ಮುಂದಿನ ಜನಾಂಗಕ್ಕೆ ಹಸ್ತಾಂತರಿಸುವ ಕೆಲಸ ಯುವ ಜನಾಂಗ, ಮಕ್ಕಳಿಂದ ಆಗಬೇಕಾಗಿದೆ. ಆ ದೃಷ್ಟಿಯಿಂದ ಮಕ್ಕಳು, ಯುವಕರು ಸಂಘದ ಸದಸ್ಯರಾಗಿ ವೈವಿಧ್ಯ ವೇದಿಕೆಯಲ್ಲಿ

ಭಾಗವಹಿಸುವಂತವರಾಗಬೇಕು. ವೈದ್ಯಕೀಯವಾಗಿ ಸಹಾಯ ಮಾಡುವ ಸಂಘದ ದೂರದೃಷ್ಟಿ ಯೋಜನೆಗೆ ಎಲ್ಲರೂ ಕೈಜೋಡಿಸುವಂತೆ ಮನವಿ ಮಾಡಿದ ಅವರು ಸೆ. 29ರಂದು ಉದ್ಘಾಟನಾಗೊಳ್ಳಲಿರುವ ತುಳು ಸಂಘ ಬೊರಿವಲಿ ಇದರ ನೂತನ ಕಚೇರಿಯ ಸಮಾರಂಭಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರು, ತುಳು-ಕನ್ನಡ ಬಾಂಧವರು ಭಾಗವಹಿಸಿಸುವಂತೆ ಮನವಿ ಮಾಡಿದರು.

ಕಾರ್ಯಕ್ರಮದ ಪ್ರಾರಂಭದಲ್ಲಿ ಸ್ಥಳೀಯ ಆರಾಧ್ಯ ದೇವತೆ ಮಹಿಷ ಮರ್ದಿನಿಯನ್ನು ಸ್ಮರಿಸಿ ಮಹಾಸಭೆಯು ಪ್ರಾರಂಭಗೊಂಡಿತು.

Advertisement

ಗೌರವ ಕಾರ್ಯದರ್ಶಿ ಕೃಷ್ಣರಾಜ್‌ ಸುವರ್ಣ ಪದಾಧಿಕಾರಿಗಳು, ಸದಸ್ಯರನ್ನು ಸ್ವಾಗತಿಸಿ, ಗತ ವರ್ಷದ ಮಹಾಸಭೆಯ ವರದಿಯನ್ನು ಓದಿದರು. ಗೌರವ ಕೋಶಾಧಿಕಾರಿ ಹರೀಶ್‌ ಮೈಂದನ್‌ ಸಭೆಯಲ್ಲಿ ಲೆಕ್ಕ ಪತ್ರ ಮಂಡಿಸಿದರು. ಸದಸ್ಯರ ಪರವಾಗಿ ಪೇಟೆಮನೆ ಪ್ರಕಾಶ್‌ ಶೆಟ್ಟಿ, ಜಯಕರ ಡಿ. ಪೂಜಾರಿ, ಹರೀಶ್‌ ಜಿ. ಪೂಜಾರಿ, ಟಿ. ಶ್ರೀನಿವಾಸ ಪುತ್ರನ್‌ ಸಂಘದ ಪ್ರಗತಿಯ ಬಗ್ಗೆ ಸಲಹೆ ಸೂಚನೆಗಳನ್ನು ನೀಡಿದರು. ವೇದಿಕೆಯಲ್ಲಿ ಉಪಾಧ್ಯಕ್ಷರಾದ ಕರುಣಾಕರ ಶೆಟ್ಟಿ, ಜತೆ ಕೋಶಾಧಿಕಾರಿ ಟಿ. ವಿ. ಪೂಜಾರಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸವಿತಾ ಸಿ. ಶೆಟ್ಟಿ, ಕಾರ್ಯದರ್ಶಿ ತಿಲೋತ್ತಮ ವೈದ್ಯ ಉಪಸ್ಥಿತರಿದ್ದರು. ಜೊತೆ ಕಾರ್ಯದರ್ಶಿ ದಿವಾಕರ ಕರ್ಕೇರ ಮಹಾಸಭೆಯ ಕೊನೆಯಲ್ಲಿ ವಂದಿಸಿದರು.

ಚಿತ್ರ-ವರದಿ : ರಮೇಶ್‌ ಉದ್ಯಾವರ್‌

Advertisement

Udayavani is now on Telegram. Click here to join our channel and stay updated with the latest news.

Next