Advertisement

ತುಳು ಸಂಘ ಬೊರಿವಲಿಯ ವತಿಯಿಂದ ವೃದ್ಧಾಶ್ರಮಕ್ಕೆ ಭೇಟಿ

04:38 PM Mar 20, 2019 | Team Udayavani |

ಮುಂಬಯಿ: ತುಳು ಸಂಘ ಬೊರಿವಲಿಯ ಇದರ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ವಸಾಯಿ ಪಶ್ಚಿಮದ ಗ್ರಾಮಾಂತರ ಪ್ರದೇಶದಲ್ಲಿರುವ ಶ್ರದ್ಧಾನಂದ ಮಹಿಳಾ ವೃದ್ದಾಶ್ರಮಕ್ಕೆ ಮಾ. 17ರಂದು ಭೇಟಿ ನೀಡಿದರು. ವೃದ್ಧಾಶ್ರಮದ ಸುಮಾರು 70 ಮಂದಿ ವೃದ್ಧರಿಗೆ ಮಧ್ಯಾಹ್ನದ ಭೋಜನ ಮತ್ತು ಹಣ್ಣು ಹಂಪಲುಗಳನ್ನು ವಿತರಿಸಿ ಅವರೊಡನೆ ಬೆರೆತು ಮಾತುಕತೆ ನಡೆಸಿದರು.

Advertisement

ತುಳು ಸಂಘ ಬೊರಿವಲಿಯ ಅಧ್ಯಕ್ಷ ವಾಸು ಪುತ್ರನ್‌, ಗೌರವ ಪ್ರಧಾನ ಕಾರ್ಯದರ್ಶಿ ಕೃಷ್ಣರಾಜ್‌ ಸುವರ್ಣ, ಜತೆ ಕಾರ್ಯದರ್ಶಿ ದಿವಾಕರ ಕರ್ಕೇರ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸವಿತಾ ಸಿ. ಶೆಟ್ಟಿ ಹಾಗೂ ಸಂಘದ ಧನ ಸಂಗ್ರಹ ಸಮಿತಿಯ ಕಾರ್ಯಾಧ್ಯಕ್ಷ ಪ್ರಕಾಶ್‌ ಎ. ಶೆಟ್ಟಿ ಅವರ ಮುಂದಾಳತ್ವದಲ್ಲಿ ನಡೆದ  ಈ ಜನಸೇವಾ ಕಾರ್ಯಕ್ರಮದಲ್ಲಿ ರಾಜೇಶ್ವರಿ ಜಿ. ಸುವರ್ಣ, ಕುಸುಮಾ ಬಿ. ಶೆಟ್ಟಿ, ವತ್ಸಲಾ ಕೆ. ಪೂಜಾರಿ, ಲಕ್ಷ್ಮೀ ಜಿ. ದೇವಾಡಿಗ, ಕಸ್ತೂರಿ ಶೆಟ್ಟಿ, ನಳಿನಿ ಅಶೋಕ್‌, ಶೋಭಾ ಪೂಜಾರಿ, ಸುನೀತಾ ಕೆ. ಶೆಟ್ಟಿ, ಸುನಂದಾ ಕೆ. ಶೆಟ್ಟಿ, ಅಶೋಕ್‌ ನಿಂಜೂರು, ವಿಜಯಕುಮಾರ್‌ ಮೂಲ್ಕಿ, ಶೇಖರ ಶೆಟ್ಟಿ, ಸುನಂದಾ ಎಸ್‌. ಶೆಟ್ಟಿ, ಅಶೋಕ್‌ ಸುವರ್ಣ ಅವರು ಉಪಸ್ಥಿತರಿದ್ದರು.

ಬೊರಿವಲಿ ಜಯರಾಜ್‌ ನಗರದಿಂದ ಬಸ್‌ನಲ್ಲಿ ಹೊರಟ ಈ ತಂಡವನ್ನು ಶ್ರದ್ಧಾನಂದ ಮಹಿಳಾ ವೃದ್ಧಾಶ್ರಮದ ಕಾರ್ಯದರ್ಶಿ ಜಗದೀಶ್‌ ಶೆಟ್ಟಿ ಅವರು ಸ್ವಾಗತಿಸಿ, ಆಶ್ರಮದ ಕಾರ್ಯಚಟುವಟಿಕೆಗಳನ್ನು ವಿವರಿಸಿದರು. ಆಶ್ರಮದಲ್ಲಿದ್ದ ವೃದ್ಧರು ಜೀವನ ವೃತ್ತಾಂತ ಮತ್ತು ಅವರು ಎದುರಿಸಿದ ಅನಿರೀಕ್ಷಿತ ಸಮಸ್ಯೆ ಹಾಗೂ ಪ್ರಸ್ತುತ ಆಶ್ರಮದಲ್ಲಿ ಅವರಿಗೆ ಸಿಗುತ್ತಿರುವ ಆರೈಕೆ, ಸಾಂತ್ವನ ಹಾಗೂ ಪ್ರೀತಿ ಗೌರವದ ಬಗ್ಗೆ ವಿವರಿಸಿದರು. ತುಳು ಸಂಘದ ಮಹಿಳಾ ಕಾರ್ಯಕರ್ತೆಯರು  ಬೆರೆತು ಭಜನೆ, ಕುಣಿತದಲ್ಲಿ ಭಾಗವಹಿಸಿ ವೃದ್ಧರಿಗೆ ಸ್ಫೂರ್ತಿ, ನೈತಿಕ ಬೆಂಬಲ ಹಾಗೂ ಆನಂದದ ಕ್ಷಣಗಳನ್ನು ನೀಡಿದರು. ಆಶ್ರಮವಾಸಿಗಳಿಗೆ ಸಂಘದ ಮಹಿಳೆಯರು ಭೋಜನವನ್ನು ಬಡಿಸಿ ಅವರ ಸೇವೆಗೈದರು.

ಸಂಘದ ಅಧ್ಯಕ್ಷ ವಾಸು ಪುತ್ರನ್‌ ಅವರು ಮಾತನಾಡಿ, ಸಂಘದ ಸಾಧನೆಗಳನ್ನು ವಿವರಿಸಿ, ಇಲ್ಲಿಗೆ ಭೇಟಿ ನೀಡುವುದರೊಂದಿಗೆ ಸಂಘದ ಕಾರ್ಯಕರ್ತರು ಹೊಸ ವಿಚಾರದಿಂದ ಸಮಾಜ ಸೇವೆಗೆ ಮತ್ತಷ್ಟು ಉತ್ತೇಜನ ದೊರೆತಂತಾಯಿತು ಎಂದು ಹೇಳಿದರು. ಈ ಅವಕಾಶ ನೀಡಿ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next