Advertisement

ತುಳುನಾಡು ಫ್ರೆಂಡ್ಸ್‌  ಬೆಳ್ಳಿಹಬ್ಬ : ತುಳುನಾಡ ಟ್ರೋಫಿ ವಾಲಿಬಾಲ್‌

01:54 PM Feb 20, 2019 | Team Udayavani |

ಮುಂಬಯಿ: ಖೇಲೊ ಇಂಡಿಯಾ ಯೋಜನೆಯ ಅಡಿಯಲ್ಲಿ ಕ್ರೀಡೆಯಲ್ಲಿ ಸಾಧನೆ ಮಾಡುಲು ಗುರಿ ಹೊಂದಿರುವ ಕ್ರೀಡಾಸಕ್ತರಿಗೆ ಇದೊಂದು ವರದಾನವಾಗಿದೆ. ಪ್ರತಿಭಾನ್ವಿತ ಕ್ರೀಡಾಪಟುಗಳನ್ನು ಗುರುತಿಸಿ ಅವರಿಗೆ ಕ್ರೀಡಾ ಸವಲತ್ತುಗಳನ್ನು ಒದಗಿಸುವುದು ಖೇಲೋ ಭಾರತ ಹೆಸರಿನ ರಾಷ್ಟ್ರೀಯ ಯೋಜನೆಯ ಉದ್ದೆಶವಾಗಿದೆ. ಇದರ ಸದುಪಯೋಗವನ್ನು ಪಡೆದು ಎಲ್ಲರೂ ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಬೇಕು ಎಂದು ಸಂಸದ ಗೋಪಾಲ್‌ ಸಿ. ಶೆಟ್ಟಿ ನುಡಿದರು.

Advertisement

ಫೆ. 17ರಂದು ಬೆಳಗ್ಗೆ ಮೀರಾರೋಡ್‌ ಪೂರ್ವದ ಶಾಂತಿ ನಗರ ಸೆಕ್ಟರ್‌ 5ರ ಮೈದಾನದಲ್ಲಿ ತುಳುನಾಡು ಫ್ರೆಂಡ್ಸ್‌ ಇದರ ಬೆಳ್ಳಿಹಬ್ಬ ನಿಮಿತ್ತ ಆಯೋಜಿಸಲಾಗಿದ್ದ ತುಳುನಾಡ ಟ್ರೋಫಿ-2019 ವಾಲಿಬಾಲ್‌ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಂದು ಕ್ಷೇತ್ರಗಳಲ್ಲೂ ಪ್ರಾಮಾಣಿಕತೆಯಿಂದ ದುಡಿ ಯುವವರಿಗೆ ಅವಕಾಶ ಖಂಡಿತ ಒದಗಿ ಬರುತ್ತದೆ. ಸಮಯ ಪ್ರಜ್ಞೆ, ಕರ್ತವ್ಯ ಪ್ರಜ್ಞೆಯನ್ನು ಮರೆಯದೆ ಸಂಘಟನೆಯನ್ನು ಯಶಸ್ವಿಗೊಳಿಸಬೇಕು. 25 ವರ್ಷಗಳ ತಮ್ಮ ಕ್ರೀಡಾ ಜೀವನ ಅನೇಕ ಕ್ರೀಡಾಪಟುಗಳಿಗೆ  ಅಸರೆಯಾಗಲಿ ಎಂದು ನುಡಿದರು.

ಶುಕ್ರವಾರ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾಗಿ ನಮ್ಮನ್ನು ಅಗಲಿದ ವೀರ ಯೋಧರಿಗೆ ಭಾರತ ಮಾತೆಯ ಪುತ್ರರಿಗೆ ಪುಷ್ಪಾಂಜಲಿ ಪ್ರಾರ್ಥನೆಯೊಂದಿಗೆ ನಮನ ಸಲ್ಲಿಸಿದರು.

ಮೀರಾ-ಭಾಯಂದರ್‌ ಜಿಲ್ಲೆಯ ಬಿಜೆಪಿಯ ಕಾರ್ಯದರ್ಶಿ ಮುನ್ನಲಾಯಿಗುತ್ತು ಸಚ್ಚಿದಾನಂದ ಶೆಟ್ಟಿ ಅವರು ಮಾತನಾಡಿ, ಶಿಸ್ತು, ಕರ್ತವ್ಯ ಹಾಗೂ ಸಮಯ ಪ್ರಜ್ಞೆಯಿಂದ ಸಂಸದ ಗೋಪಾಲ್‌ ಶೆಟ್ಟಿ ಅವರು ಮಹಾರಾಷ್ಟ್ರ ಸರ್ವಶ್ರೇಷ್ಠ ಸಂಸದರಾಗಿ ಪುರಸ್ಕೃತರಾಗಿದ್ದಾರೆ. ಅವರ ಸಾಧನೆ ಸರ್ವರಿಗೂ ಅನುಕರಣೀಯವಾಗಿದೆ ಎಂದು ಕ್ರೀಡಾಪಟುಗಳಿಗೆ ಶುಭಹಾರೈಸಿದರು.

ಸಮಾರಂಭದಲ್ಲಿ ಬಂಗಾರದ ಪದಕ ವಿಜೇತೆ ರಾಜ್ಯಮಟ್ಟದ ಕಾವ್ಯಾ ಜೆ. ಕರ್ಕೇರ, ಜೂನಿಯರ್‌ ಇಂಟರ್‌ನ್ಯಾಷನಲ್‌ ಬ್ಯಾಡ್‌ಮಿಂಟನ್‌ ಪ್ಲೇಯರ್‌ ಕೃತಿ ತೆಜಾ³ಲ್‌ ಕರ್ಕೇರ ಅವರನ್ನು ವೇದಿಕೆಯ ಗಣ್ಯರು ಸಮ್ಮಾನಿಸಿದರು. ಸಮ್ಮಾನ ಪತ್ರವನ್ನು ಸದಾನಂದ ಸಾಲ್ಯಾನ್‌ ಕಾಪು ವಾಚಿಸಿದರು. ಪುರುಷರ ವಾಲಿಬಾಲ್‌ ಪಂದ್ಯಾಟವನ್ನು ಸ್ಥಳೀಯ ನಗರ ಸೇವಕ ಹಾಗೂ ಅಶ್ವಿ‌ನ್‌ ಕಸೋಡಿಯಾ, ಸಂಸದ ಗೋಪಾಲ್‌ ಶೆಟ್ಟಿ, ಮಹಿಳೆಯರ ವಾಲಿಬಾಲ್‌ ಪಂದ್ಯಾಟವನ್ನು ಹೇತಲ್‌ ಪಾರ್ಮರ್‌ ಮತ್ತು ದೀಪ್ತಿ ಭಟ್‌ ಉದ್ಘಾಟಿಸಿದರು.

Advertisement

ತುಳುನಾಡ ಫ್ರೆಂಡ್ಸ್‌ನ ಅಧ್ಯಕ್ಷ ಶಂಕರ್‌ ಕೋಟ್ಯಾನ್‌ ಸ್ವಾಗತಿಸಿದರು. ಕಾರ್ಯದರ್ಶಿ ರಾಜೇಶ್‌ ಶೆಟ್ಟಿ ಕಾಪು ವಂದಿಸಿದರು. ರಂಗ ಸಿನೇಮಾ ನಟ ಜಿ. ಕೆ. ಕೆಂಚನಕೆರೆ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಗೌರವ ಅತಿಥಿಗಳಾಗಿ ಕಲಾ ಸಂಘಟಕರಾದ ಗುಣಪಾಲ್‌ ಶೆಟ್ಟಿ ಕರ್ಜೆ, ಚಂದ್ರಜನಾರ್ದನ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

ಗೌರವಾಧ್ಯಕ್ಷ ಯಾದೇಶ್‌ ಪುತ್ರನ್‌, ಉಪಾಧ್ಯಕ್ಷರುಗಳಾದ ವಿಲ್ಫೆÅಡ್‌ ಮಾರ್ಟಿಸ್‌, ಲಕ್ಷ್ಮೀಕಾಂತ್‌ ಪೂಜಾರಿ, ಜತೆ ಕಾರ್ಯದರ್ಶಿ ಕಿರಣ್‌ ಮೆಂಡನ್‌, ಕೋಶಾಧಿಕಾರಿ ದೀಪಕ್‌ ಮೆಂಡನ್‌, ಜತೆ ಕೋಶಾಧಿಕಾರಿ ರವಿ ಸುವರ್ಣ ಅವರು ಗಣ್ಯರನ್ನು ಗೌರವಿಸಿದರು.

ಸರ್ವ ಸದಸ್ಯರು ದಿನಪೂರ್ತಿ ನಡೆಯುವ ಕಾರ್ಯಕ್ರಮಕ್ಕೆ ಸಹಕರಿಸಿದರು. ಸ್ಥಳೀಯ ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ನಗರ ಸೇವಕರು, ಕನ್ನಡೇತರರು ಅಪಾರ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. 

 ಚಿತ್ರ-ವರದಿ: ರಮೇಶ್‌ ಅಮೀನ್‌

Advertisement

Udayavani is now on Telegram. Click here to join our channel and stay updated with the latest news.

Next