Advertisement
ಸುದ್ದಿಗೋಷ್ಠಿಯಲ್ಲಿ ತುಳು ಉತ್ಸವದ ಸ್ವಾಗತ ಸಮಿತಿ ಅಧ್ಯಕ್ಷ ಕೆ.ವಿ.ರಾಜೇಂದ್ರ ಕುಮಾರ್ ಮಾಹಿತಿ ನೀಡಿ,ಇದು ಒಂದು ದಿನದ ಸುಗ್ಗಿಯ ಸಂಭ್ರಮವಾಗಿದ್ದು, ಬೆಳಗ್ಗೆ 8 ರಿಂದ ರಾತ್ರಿ 10 ಗಂಟೆವರೆಗೆ ವಿಜಯನಗರದ ಬಂಟರ ಸಂಘದ ಆವರಣದಲ್ಲಿ ನಡೆಯಲಿದೆ. ಈ ವೇಳೆ ತುಳು ಸಾಹಿತ್ಯಗೋಷ್ಠಿ, ಯಕ್ಷಗಾನ, ತಾಳಮದ್ದಲೆ, ಹುಲಿವೇಷ ಕುಣಿತ, ಕರಾವಳಿ ಜಾನಪದ, ಗ್ರಾಮೀಣ ಕ್ರೀಡೆಗಳು ಅನಾವರಣಗೊಳ್ಳಲಿವೆ ಎಂದರು.
Related Articles
Advertisement
ಗುರುಕಿರಣ ತಂಡದಿಂದ ಕಾರ್ಯಕ್ರಮ: ಸಂಜೆ ಕುದ್ರೋಳಿ ಗಣೇಶ್‌ರಿಂದ “ಮ್ಯಾಜಿಕ್ ಶೋ’ ಪ್ರಸನ್ನ ಶೆಟ್ಟಿ ಮತ್ತವರ ತಂಡದಿಂದ “ಯಕ್ಷಗಾನ’ ಕದ್ರಿ ನವನೀತ್ ಶೆಟ್ಟಿ ಅವರಿಂದ “ತಾಳ ಮದ್ದಳೆ’ ಗುರುಕಿರಣ್, ಶಿವಧ್ವಜ ತಂಡದಿಂದ “ತುಳುವೆರೆ ಪಟ್ಟಾಂಗ’ ಸೇರಿ ಹಲವು ಮನರಂಜನೆಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ತುಳು ಕವಿತಾ ಸ್ಪರ್ಧೆ: ಇದೇ ವೇಳೆ ತುಳುನಾಡಿನ ಪ್ರತಿಭೆ ಪ್ರೋತ್ಸಾಹಿಸಲು ಪಂಥ ಮತ್ತು ಪ್ರಬಂಧ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ತುಳು ಬುಲೆಚ್ಚಿಲ್, ಸಂವಿಧಾನ 8ನೆಯ ಪರಿಚ್ಛೇದ: ತುಳು, ತುಳು ಸಾಂಸ್ಕೃತಿಕ ಜೀವನ ಎಂಬ ವಿಷಯದ ಮೇಲೆ ಪ್ರಬಂಧವನ್ನು ಆಹ್ವಾನಿಸಲಾಗಿದೆ. ಅಲ್ಲದೆ 250-300 ಶಬ್ದಗಳ ತುಳು ಕವಿತೆ. 300 ಶಬ್ದಗಳ ಒಗಟು ಮತ್ತು ಅದರ ಒಳಕತೆಗಳನ್ನೂ ಆಹ್ವಾನಿಸಿದೆ. ಆಸಕ್ತರು ಮೊ.9341212789 ಕ್ಕೆ ಸಂಪರ್ಕಿಸಬಹುದು. ವಿಜೇತರಿಗೆ 15 ಸಾವಿರ ಪ್ರಥಮ, 10 ಸಾವಿರ ದ್ವೀತಿಯ, 5 ಸಾವಿರ ತೃತೀಯ ಬಹುಮಾನ ನೀಡಲಾಗುವುದು ಎಂದು ಸೂಡ ತಿಳಿಸಿದ್ದಾರೆ.