Advertisement
ವಿಜಯ ನಗರದ ಬಂಟರ ಸಂಘದಲ್ಲಿ ಹಮ್ಮಿಕೊಂಡಿದ್ದ “ಸುಗ್ಗಿದ ಐಸಿರಿ’ ತುಳುನಾಡ ಉತ್ಸವದಲ್ಲಿ ಭಾನುವಾರ ಬೆಳಗ್ಗೆಯಿಂದ ರಾತ್ರಿಯ ತನಕ ತುಳು ಸಾಂಸ್ಕೃತಿಕ ಹಾಗೂ ಸಾಹಿತ್ಯಾತ್ಮಕ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು. ತುಳುನಾಡಿನ ಹಲವು ವೈವಿದ್ಯತೆಗಳ ಪ್ರಾತ್ಯಕ್ಷಿಕೆ ನೆರೆದವರನ್ನು ತನ್ಮಯಗೊಳಿಸಿದೆ.
Related Articles
Advertisement
ಕವಿಗೋಷ್ಠಿ, ವಿಚಾರ ಸಂಕಿರಣದ ಜತೆಗೆ ಕಾಪು ಪ್ರಶಂಸ ತಂಡದಿಂದ ಬಲೇ ತೆಲಿಪುಲೆ ನಾಟಕ, ಗಿರೀಶ್ ರೈ ಕಕ್ಕೆಪದವು, ಸತ್ಯನಾರಾಯಣ ಪಣಿಂಚಿತ್ತಾಯ ಮೊದಲಾದ ಕಲಾವಿದರಿಂದ ಯಕ್ಷಗಾನ ಗಾನ-ನೃತ್ಯ- ವೈಭವ- ಆದಿತ್ಯ ಮಂಜರಿ, ಜಾನಪದ ನಲಿಕೆಯಡಿ ದಯಾನಂದ ಕತ್ತಲ್‌ಸಾರ್ ನೇತೃತ್ವದಲ್ಲಿ ಕಂಗೀಲು ನೃತ್ಯ, ಕರ್‌ಂಗೋಲು ನೃತ್ಯ, ಚಿನ್ನು ನಲಿಕೆ, ಮಾದಿರ ನೃತ್ಯ ನಡೆಯಿತು.
ಬುಟ್ಟಿ ಹೆಣೆಯುವುದು, ಚಾಪೆ ಸಿದ್ಧಪಡಿಸುವುದು ನಮ್ಮ ಕುಲಕಸುಬು. ಕಳೆದ ಹಲವು ವರ್ಷಗಳಿಂದ ಇದೇ ವೃತ್ತಿ ಮಾಡಿಕೊಂಡು ಬರುತ್ತಿದ್ದೇವೆ. ಇತ್ತೀಚಿನ ವರ್ಷಗಳಲ್ಲಿ ಆಧುನಿಕ ಪರಿಕರಗಳು ಬಂದು, ಸ್ಪರ್ಧೆ ಹೆತ್ಛಗಿರುವುದರಿಂದ ಬೇರೆ ಉದ್ಯೋಗ ಮಾಡುತ್ತಿದ್ದೇವೆ.-ಗುಲಾಬಿ, ಕಾರ್ಕಳ ಇನೋಳಿ ಕಂಬಳಕ್ಕೆ ಸ್ಥಳ ನೀಡಲು ಸರ್ಕಾರಕ್ಕೆ ಮನವಿ
ಬೆಂಗಳೂರಿನ ಜನರಿಗೆ ಪರಿಚಯಿಸಲು ಕಂಬಳ ಆಯೋಜನೆ ಮಾಡುವುದಕ್ಕೆ ಸಾಧ್ಯವಾಗುವಷ್ಟು ಜಾಗವನ್ನು ತುಳು ಕೂಟಕ್ಕೆ ನೀಡಬೇಕು, ತುಳುಭಾಷೆಯನ್ನು ಸಂವಿಧಾನದ 8ನೇ ಅನುಚ್ಛೇಧಕ್ಕೆ ಸೇರಿಸಬೇಕು. ಮಂಗಳೂರು ವಿಮಾನ ನಿಲ್ದಾಣಕ್ಕೆ ರಾಣಿ ಅಬ್ಬಕ್ಕ ಹೆಸರು ಹಾಗೂ ಬೆಂಗಳೂರಿನ ಅತ್ತಿಗುಪ್ಪೆ ಮೆಟ್ರೋ ನಿಲ್ದಾಣಕ್ಕೆ ನಾಡೋಜ ಕಯ್ನಾರ ಕಿಞ್ಞಣ್ಣರೈ ಹೆಸರು ನಾಮಕರಣ ಮಾಡುವಂತೆ ಬೆಂಗಳೂರು ತುಳು ಕೂಟದ ಅಧ್ಯಕ್ಷ ಕೆ.ಜಯರಾಮ ಸೂಡ ಸೇರಿದಂತೆ ಪ್ರಮುಖರು ರಾಜ್ಯಪಾಲರಿಗೆ ಹಾಗೂ ಸಚಿವರಿಗೆ ಮನವಿ ಸಲ್ಲಿಸಿದರು. ಸೆಲ್ಫಿ, ವಿಡಿಯೋ: ಉತ್ಸವಕ್ಕೆ ಇನ್ನಷ್ಟು ಮೆರುಗು ನೀಡಲು ಪ್ರತಿಷ್ಠಾಪಿಸಿದ್ದ ಯಕ್ಷಗಾನ ಕಲಾಕೃತಿ, ತುಳುನಾಡಿನ ಸಂಸ್ಕೃತಿಕ ವೈಭವದ ಹಲವು ವುಸ್ತುಗಳ ಎದುರು ನಿಂತು ಸೆಲ್ಫಿ ತೆಗೆಯುವುದು, ಅದರ ವಿಡಿಯೋ ಚಿತ್ರಿಕರಿಸುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.