ಪುಣೆ: ಪುಣೆ ತುಳು ಕೂಟದ ಪಿಂಪ್ರಿ-ಚಿಂಚ್ವಾಡ್ ಪ್ರಾದೇಶಿಕ ಸಮಿತಿಯ ನೂತನ ಅಧ್ಯಕ್ಷರಾಗಿ ಹರೀಶ್ ಶೆಟ್ಟಿ ಕುರ್ಕಾಲ್ ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಅ. 14 ರಂದು ಪಿಂಪ್ರಿಯ ತೃಷ್ಣಾ ಹೊಟೇಲ್‌ನ ಸಭಾಂಗಣದಲ್ಲಿ ತುಳು ಕೂಟ ಪುಣೆ ಇದರ ಪಿಂಪ್ರಿ-ಚಿಂಚಾÌಡ್ ಪ್ರಾದೇಶಿಕ ಸಮಿತಿಯ 8 ನೇ ವಾರ್ಷಿಕ ಮಹಾಸಭೆಯು ಹಾಲಿ ಅಧ್ಯಕ್ಷರಾದ ಶ್ಯಾಮ್ ಸುವರ್ಣ ಅವರ ಅಧ್ಯಕ್ಷತೆಯಲ್ಲಿ ಜರಗಿತು. ವೇದಿಕೆಯಲ್ಲಿ ದಿನೇಶ್ ಶೆಟ್ಟಿ ಉಜಿರೆ, ನಿತಿನ್ ಶೆಟ್ಟಿ, ಹರೀಶ್ ಶೆಟ್ಟಿ ಕುರ್ಕಾಲ್, ಸಂತೋಷ್ ಕಡಂಬ ಅವರು ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ಗತವರ್ಷದ ಸಮಿತಿಯ ಕಾರ್ಯಕಾರಿ ಕಾರ್ಯಗಳ ವರದಿಯನ್ನು ನಿತಿನ್ ಶೆಟ್ಟಿ ನಿಟ್ಟೆ ಅವರು ಸಭೆಯ ಮುಂದಿಟ್ಟರು. ಸಂತೋಷ್ ಕಡಂಬ ಅವರು ವಾರ್ಷಿಕ ಅಯವ್ಯಯ ಪಟ್ಟಿಯನ್ನು ಮಂಡಿಸಿ ಅನುಮೋದಿಸಿಕೊಂಡರು.ಇದೇ ಸಂದರ್ಭದಲ್ಲಿ 2018-2020ನೆ ಸಾಲಿನ ನೂತನ ಕಾರ್ಯಕಾರಿ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಪರಿಸರದ ಉದ್ಯಮಿ, ಸಮಾಜ ಸೇವಕ ಹರೀಶ್ ಶೆಟ್ಟಿ ಕುರ್ಕಾಲ್ ಅವರನ್ನು ನೂತನ ಅಧ್ಯಕ್ಷರನ್ನಾಗಿ ಪಿಂಪ್ರಿ ಪ್ರಾದೇಶಿಕ ಸಮಿತಿಯ ಮಾಜಿ ಅಧ್ಯಕ್ಷರಾದ ಮಹೇಶ್ ಹೆಗ್ಡೆ ಕಟ್ಟಿಂಗೇರಿ, ಹಾಲಿ ಉಪಾಧ್ಯಕ್ಷ ದಿನೇಶ್ ಶೆಟ್ಟಿ ಉಜಿರೆ ಹಾಗು ಮಾಜಿ ಉಪಾಧ್ಯಕ್ಷ ದಿನೇಶ್ ಶೆಟ್ಟಿ ಬಜಗೋಳಿ ಇವರು ಅನುಮೋದಿಸುವ ಮೂಲಕ ಘೊಷಿಸಲಾಯಿತು.
ನೂತನ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾದ ಹರೀಶ್ ಶೆಟ್ಟಿ ಅವರು ಮಾತನಾಡಿ, ಪುಣೆ ತುಳುಕೂಟದ ಪಿಂಪ್ರಿ-ಚಿಂಚಾÌಡ್ ಪ್ರಾದೇಶಿಕ ಸಮಿತಿಯು ಪರಿಸರದ ಎÇÉಾ ತುಳು ಬಾಂಧವರನ್ನು ಒಂದೇ ವೇದಿಕೆಯಡಿಯಲ್ಲಿ ಒಟ್ಟು ಸೇರಿಸಿಕೊಂಡು ಮಾಜಿ ಅಧ್ಯಕ್ಷರಾದ ಕಟ್ಟಿಂಗೇರಿ ಮಹೇಶ್ ಹೆಗ್ಡೆ ಹಾಗು ನಿರ್ಗಮನ ಅಧ್ಯಕ್ಷರಾದ ಶ್ಯಾಮ್ ಸುವರ್ಣ ಅವರು ಒಳ್ಳೆಯ ರೀತಿಯಲ್ಲಿ ನಡೆಸಿಕೊಂಡು ಬಂದಿ¨ªಾರೆ. ಅವರ ಕಾರ್ಯ ಶ್ಲಾಘನಿಯವಾಗಿದೆ. ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳು ಕೂಡಾ ಒಳ್ಳೆಯ ರೀತಿಯ ಸಹಕಾರವನ್ನು ನೀಡಿ¨ªಾರೆ. ಇನ್ನು ಮುಂದೆಯೂ ಇದೆ ರೀತಿಯ ಸಹಕಾರವನ್ನು ತಾವೆಲ್ಲರೂ ನೀಡಬೇಕು. ನಮ್ಮ ಈ ಪ್ರಾದೇಶಿಕ ಸಮಿತಿಯ ಮೂಲಕ ಎÇÉಾ ತುಳುಬಾಂಧವರಿಗೆ ಸಹಕಾರಿಯಾಗುವಂತಹ ಕಾರ್ಯ ಯೋಜನೆಗಳನ್ನು ರೂಪಿಸುವಲ್ಲಿ ಕಾರ್ಯ ಪ್ರವೃತ್ತರಾಗಬೇಕು. ನನಗೆ ಸಂಘದ ಜವಾಬ್ದಾರಿಯನ್ನು ನೀಡಿದ್ದೀರಿ. ತುಳು ಭಾಂದವರ ಸಮಾಜ ಸೇವೆಯಲ್ಲಿ ತನ್ನಿಂದಾಗುವ ಕಾರ್ಯವನ್ನು ಮಾಡಲು ಸಿದ್ದನಿದ್ದೇನೆ ಎಂದರು.
ನೂತನ ಅಧ್ಯಕ್ಷರಾದ ಹರೀಶ್ ಶೆಟ್ಟಿ ಅವರನ್ನು ನಿಕಟಪೂರ್ವ ಅಧ್ಯಕ್ಷರಾದ ಶ್ಯಾಮ ಸುವರ್ಣ ಅವರು ಪುಷ್ಪಗುಚ್ಚವನ್ನಿತ್ತು ಅಭಿನಂದಿಸಿ ಶುಭಹಾರೈಸಿದರು. ಸಭೆಯಲ್ಲಿ ಸುಧಾಕರ ಶೆಟ್ಟಿ ಪೆಲತ್ತೂರು, ಸಂತೋಷ್ ಶೆಟ್ಟಿ ಪೆರ್ಡೂರು, ನಿಧೀಶ್ ಶೆಟ್ಟಿ, ಗಣೇಶ್ ಅಂಚನ್, ರಾಘು ಪೂಜಾರಿ, ಪ್ರೇಮಾ ಪೂಜಾರಿ, ಸೋನಿ ಶೆಟ್ಟಿ, ವಿಶ್ವನಾಥ್ ಶೆಟ್ಟಿ ಚಾಕನ್, ಪ್ರಭಾಕರ ಶೆಟ್ಟಿ, ಸುಧಾಕರ ಶೆಟ್ಟಿ, ವಿನಯ್ ಶೆಟ್ಟಿ, ಚೇತನ್ ಶೆಟ್ಟಿ, ಮಿಥುನ್ ಶೆಟ್ಟಿ ಹಾಗೂ ತುಳು ಭಾಂದವರು ಉಪಸ್ಥಿತದ್ದರು. ನೂತನ್ ಸುವರ್ಣ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.
ಚಿತ್ರ-ವರದಿ : ಹರೀಶ್ ಮೂಡಬಿದ್ರೆ ಪುಣೆ