Advertisement
ಮಾ. 11ರಂದು ಬೊರಿವಲಿ ಪಶ್ಚಿಮದ ಗ್ಯಾನ್ ಸಾಗರ್ ಆ್ಯಂಪಿ ಥೀಯೆಟರ್‌ನಲ್ಲಿ ನಡೆದ ತುಳು ಸಂಘ ಬೊರಿವಲಿಯ ಆರನೇ ವಾರ್ಷಿಕೋತ್ಸವ ಸಮಾರಂಭದ ಗೌರವ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಅವರು, ಇಂದು ಬೊರಿವಲಿಯಲ್ಲಿ ನಾವೆಲ್ಲರೂ ಒಂದಾಗಿದ್ದು, ನಮ್ಮ ಹಿರಿಯರು ಕಟ್ಟಿದ ಆ ತುಳುನಾಡನ್ನು ಇಂದು ನಮ್ಮವರು ಮುಂಬಯಿಯಲ್ಲೂ ಕಟ್ಟುತ್ತಿರುವುದು ಅಭಿನಂದನೀಯ. ಇಂದು ಇಲ್ಲಿ ತುಳುನಾಡಿನ ಸುಂದರವಾದ ವಾತಾವರಣ ನಿರ್ಮಾಣಗೊಂಡಿದೆ. ಯುವ ಜನಾಂಗದಿಂದ ಇಂದು ತುಳು ಭಾಷೆ ಉಳಿಯುತ್ತಿದೆ. ತುಳು ಭಾಷೆಗಾಗಿಯೇ ಸ್ಥಾಪನೆಗೊಂಡ ಚಿಣ್ಣರ ಬಿಂಬದಂತಹ ಸಂಘಟನೆಯಲ್ಲಿ ಇಂಗ್ಲಿಷ್ ಮಾಧ್ಯಮದ ಮಕ್ಕಳಿದ್ದು ಬಹಳ ಸುಂದರವಾಗಿ ತುಳು ಭಾಷೆಯಲ್ಲಿ ಕಾರ್ಯಕ್ರಮ ನಿರ್ವಹಿಸುತ್ತಿರುವಾಗ ಸಂತೋಷವಾಗುತ್ತಿದೆ. ನಾವೆಲ್ಲ ಒಂದಾಗಿ ತುಳು ಭಾಷೆಯನ್ನು ಉಳಿಸಿ ಬೆಳೆಸುತ್ತಿರುವ ಕಾರ್ಯಮಾಡುತ್ತಿದ್ದು ಇಂದಿನ ಜನಾಂಗಕ್ಕೆ ಇದು ಅನಿವಾರ್ಯ. ಎಲ್ಲ ತುಳುವರು ಒಂದಾಗಿ ತುಳು ಭಾಷೆ ಹಾಗೂ ಸಂಸ್ಕೃತಿಯನ್ನು ಉಳಿಸಿ ತುಳುನಾಡಿನ ಸೌಂದರ್ಯವನ್ನು ಬೆಳೆಸೋಣ. ಪೇಟೆಮನೆ ಪ್ರಕಾಶ್ ಶೆಟ್ಟಿ ಹಾಗೂ ಅವರ ತಂಡದವರಿಂದ ಈ ಸಂಘವು ಇನ್ನಷ್ಟು ಬೆಳೆಯಲಿ ಎಂದರು.
Related Articles
Advertisement
ಈ ಸಂಧರ್ಭದಲ್ಲಿ ಸ್ಥಳೀಯ ತುಳು ಸಂಘಟನೆಗಳನ್ನು ಸಮ್ಮಾನಿಸಲಾಯಿತು. ಬಂಟರ ಸಂಘ ಮುಂಬಯಿ ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ವಿಜಯ ಆರ್. ಭಂಡಾರಿ ಮತ್ತು ಬಿಲ್ಲವರ ಅಸೋಸಿಯೇಶದ್ ಬೊರಿವಲಿ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಸುಂದರ ಎಂ. ಪೂಜಾರಿ ಅವರನ್ನು ಅತಿಥಿಗಳು ಹಾಗೂ ಸಂಘದ ಪದಾಧಿಕಾರಿಗಳು ಸಮ್ಮಾನಿಸಿದರು. ಅಂಜನಾ ಮಹೇಶ್ ಶೆಟ್ಟಿ ಸಮ್ಮಾನಿತರನ್ನು ಪರಿಚಯಿಸಿದರು.
ಅತಿಥಿಗಳನ್ನು ಅಧ್ಯಕ್ಷರಾದ ಪೇಟೆಮನೆ ಪ್ರಕಾಶ ಶೆಟ್ಟಿ ಅವರೊಂದಿಗೆ ಉಪಾಧ್ಯಕ್ಷ ಪ್ರಭಾಕರ ಬಿ. ಶೆಟ್ಟಿ, ಕೋಶಾಧಿಕಾರಿ ರಜಿತ್ ಎಲ್. ಸುವರ್ಣ, ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷೆ ಹರಿಣಾ ಆರ್. ಶೆಟ್ಟಿ ಅವರು ಪುಷ್ಪಗುತ್ಛ, ಸ್ಮರಣಿಕೆಯೊಂದಿಗೆ ಶಾಲು ಹೊದಿಸಿ ಸಮ್ಮಾನಿಸಿ ಗೌರವಿಸಿದರು. ಹತ್ತನೆಯ ಹಾಗೂ ಹನ್ನೆರಡನೆಯ ಪರೀಕ್ಷೆಯಲ್ಲಿ ಅಧಿಕ ಅಂಕ ಪಡೆದು ಉತ್ತೀರ್ಣರಾದ ಸಂಘದ ಸದಸ್ಯರ ಮಕ್ಕಳನ್ನು ಗೌರವಿಸಲಾಯಿತು.
ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಕರುಣಾಕರ ಎಂ. ಶೆಟ್ಟಿ ಅವರು ಅತಿಥಿಗಳನ್ನು ಸ್ವಾಗತಿಸಿದರು. ಸಭಾ ಕಾರ್ಯಕ್ರಮಕ್ಕೆ ಮೊದಲು ಮಹಿಳಾ ವಿಭಾಗದವರಿಂದ ಅರಸಿನ ಕುಂಕುಮ ಹಾಗೂ ಸದಸ್ಯರಿಂದ ಹಾಗೂ ಮಕ್ಕಳಿಂದ ವಿವಿಧ ಮನೋರಂಜನ ಕಾರ್ಯಕ್ರಮಗಳು ನಡೆದವು. ಮನೋರಂಜನಾ ಕಾರ್ಯಕ್ರಮವನ್ನು ಸಂಘದ ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷೆ ಹರಿಣಾ ಆರ್. ಶೆಟ್ಟಿ ಅವರು ನಿರ್ವಹಿಸಿದರು. ಸದಸ್ಯತನ ಕಾರ್ಯಾಧ್ಯಕ್ಷೆ ಸುಮತಿ ಸಿ. ಸಾಲ್ಯಾನ್, ಕ್ರೀಡಾ ಕಾರ್ಯಾಧ್ಯಕ್ಷೆ ಶೋಭಾ ಸಿ. ಶೆಟ್ಟಿ ಮೊದಲಾದವರು ಸಹಕರಿಸಿದರು.
ಸಿಎ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಮೃತಾ ವೆಂಕಟ್ರಮಣ ತಂತ್ರಿ ಅವರನ್ನು ಗೌರವಿಸಲಾಯಿತು, ಜೊತೆ ಕೋಶಾಧಿಕಾರಿ ಸವಿತಾ ಸಿ. ಶೆಟ್ಟಿ ಅವರು ಅವರನ್ನು ಪರಿಚಯಿಸಿದರು. ಅಂತಾರಾಷ್ಟ್ರೀಯ ಹಾಗೂ ರಾಷ್ಟ್ರೀಯ ಮಟ್ಟದ ಪ್ರತಿಭೆಗಳಾದ ಕಾರ್ತಿಕ್ ಉಮಾನಾಥ ಶೆಟ್ಟಿ, ಕರಾಟೆಪಟು ದಿಯಾ ಶೆಟ್ಟಿ, ಅಂಜನಾ ಮಹೇಶ್ ಶೆಟ್ಟಿ, ಮೋಹಿತ್ ಉಮಾನಾಥ ಶೆಟ್ಟಿ ಅವರನ್ನು ಗೌರವಿಸಲಾಯಿತು. ಆಶಾ ಶೆಟ್ಟಿ ಸಮ್ಮಾನಿತರನ್ನು ಪರಿಚಯಿಸಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಗಣ್ಯರಾದ ಉಷಾ ಗೋಪಾಲ ಶೆಟ್ಟಿ, ಮುಂಡಪ್ಪ ಪಯ್ಯಡೆ, ಎಂ. ಡಿ. ಶೆಟ್ಟಿ, ವಿನೋದಾ ಶೆಟ್ಟಿ, ಅಪ್ಪಿ$ ವಿಟuಲ್ ಶೆಟ್ಟಿ ಮತ್ತಿತರ ಸಂಘಟನೆಗಳ ಮುಖ್ಯಸ್ಥರನ್ನು ಗೌರವಿಸಲಾಯಿತು. ಕಾರ್ಯಕ್ರಮವನ್ನು ಜತೆ ಕಾರ್ಯದರ್ಶಿ ಪ್ರವೀಣ್ ಆರ್. ಶೆಟ್ಟಿ ನಿರ್ವಹಿಸಿದರು. ಪ್ರಧಾನ ಕಾರ್ಯದರ್ಶಿ ಕರುಣಾಕರ ಎಂ. ಶೆಟ್ಟಿ ವಂದಿಸಿದರು. ಆಭಿನಯ ಮಂಟಪ ಮುಂಬಯಿ ಕಲಾವಿದರಿಂದ ಕರುಣಾಕರ ಕಾಪು ನಿರ್ದೇಶನದ ತುಳು ಹಾಸ್ಯಮಯ ನಾಟಕ ಒಯಿಕ್ ಲಾ ದಿನ ಬರೊಡು ಪ್ರದರ್ಶನಗೊಂಡಿತು.
ಇಂದಿಲ್ಲಿ ಸೇರಿದ ಜನಸಂಖ್ಯೆಯನ್ನು ನೋಡಿದಾಗ ನಾವು ನಿಮ್ಮೆಲ್ಲರ ಪ್ರೀತಿಯನ್ನು ಗೆದ್ದಿರುವುದು ಇಲ್ಲಿ ಸ್ಪಷ್ಟವಾಗಿ ಕಂಡು ಬಂದಿದೆ. ಕಳೆದ ಆರು ವರ್ಷಗಳಿಂದ ಈ ಸಂಘದ ಮೂಲಕ ನಾವು ಪರಿಸರದಲ್ಲಿ ತುಳು ಭಾಷೆ ಹಾಗೂ ತುಳು ಸಂಸ್ಕೃತಿಯನ್ನು ಉಳಿಸುವ ಕೆಲಸ ಮಾಡುತ್ತಿರುವೆವು. ನಮ್ಮ ಕಾಲದಲ್ಲಿ ನಾವು ಹೆಚ್ಚಿನ ಸಮಯವನ್ನು ನಮ್ಮ ಹಿರಿಯರೊಂದಿಗೆ ಕಳೆದ ಕಾರಣ ನಮಗೆ ನಮ್ಮ ಸಂಸ್ಕೃತಿಯ ಅರಿವಾಗಿದೆ. ಆದರೆ ಇಂದಿನ ಜನಾಂಗಕ್ಕೆ ಅದು ಅಸಾಧ್ಯವಾಗಿದೆ. ಈಗಿನ ಜನಾಂಗವು ತಮ್ಮ ಹೆಚ್ಚಿನ ಸಮಯವನ್ನು ಶಿಕ್ಷಣಕ್ಕಾಗಿ ಶಾಲಾ ಕಾಲೇಜುಗಳಲ್ಲದೆ, ಖಾಸಗಿ ಟ್ಯೂಷನ್ ಹಾಗೂ ಆಧುನಿಕ ತಂತ್ರಜಾ°ನದೊಂದಿಗೆ ಕಳೆಯುತ್ತಿದ್ದು ತಮ್ಮ ಮಾತೃಭಾಷೆ, ಮಾತೃ ಸಂಸ್ಕೃತಿಯಿಂದ ವಂಚಿತರಾಗುತ್ತಿದ್ದು, ಇಂತಹ ಸಂಘ ಸಂಸ್ತೆಗಳ ಮೂಲಕ ಮಾತ್ರ ಈ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯ. ಅಂತಹ ಸಂಘಟನೆಗಳಲ್ಲಿ ಬಂಟರ ಸಂಘ ಹಾಗೂ ಬಿಲ್ಲವರ ಅಸೋಸಿಯೇಶನ್ ಕೂಡಾ ಸೇರಿದ್ದು ತುಳು ಭಾಷೆ ಸಂಸ್ಕೃತಿಯನ್ನು ಮಹಾನಗರದಲ್ಲಿ ಉಳಿಸಿ ಬೆಳೆಸುವ ಕಾರ್ಯ ಮಾಡುತ್ತಿದ್ದು ಅದರ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷರನ್ನು ಇಂದು ಸಮ್ಮಾನಿಸಲು ಸಂತೋಷವಾಗುತ್ತಿದೆ
– ಪೇಟೆಮನೆ ಪ್ರಕಾಶ್ ಶೆಟ್ಟಿ (ಅಧ್ಯಕ್ಷರು : ತುಳು ಸಂಘ ಬೊರಿವಲಿ).