ಪುಣೆ, ಫೆ. 16: ತುಳು ಸಂಘ ಪಿಂಪ್ರಿ-ಚಿಂಚ್ವಾಡ್ ಇದರ 9ನೇ ವಾರ್ಷಿಕೋತ್ಸವ ಸಮಾರಂಭವು ಫೆ. 15ರಂದು ರಾಮಕೃಷ್ಣ ಮೋರೆ ಸಭಾಗೃಹ, ಚಿಂಚ್ವಾಡ್ ಇಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ನಡೆಯಿತು.
ಸಂಘದ ಅಧ್ಯಕ್ಷ ಹರೀಶ್ ಶೆಟ್ಟಿ ಕುರ್ಕಾಲ್ ಇವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಮಾಜಿ ಉಪ ಕುಲಪತಿ ಡಾ| ಚಿನ್ನಪ್ಪ ಗೌಡ ದೀಪ ಪ್ರಜ್ವಲಿಸುವ ಮೂಲಕ ಸಮಾರಂಭಕ್ಕೆ ಚಾಲನೆ ನೀಡಿದರು.
ಈ ಸಂದರ್ಭ ಗೌರವ ಅತಿಥಿಗಳಾಗಿ ಮುಂಬಯಿಯ ಸಾಹಿತಿ, ನಾಟಕಕಾರ ಶಿಮಂತೂರು ಚಂದ್ರಹಾಸ ಸುವರ್ಣ, ಗೌರವ ಉಪಸ್ಥಿತರಾಗಿ ಪುಣೆ ತುಳುಕೂಟದ ಅಧ್ಯಕ್ಷ ಮೋಹನ್ ಶೆಟ್ಟಿ ಎಣ್ಣೆಹೊಳೆ, ಅಧ್ಯಕ್ಷರಾದ ಹರೀಶ್ ಶೆಟ್ಟಿ ಕುರ್ಕಾಲ್, ನಿಕಟಪೂರ್ವ ಕಾರ್ಯಾಧ್ಯಕ್ಷ ಶ್ಯಾಮ್ ಸುವರ್ಣ, ಉಪಾಧ್ಯಕ್ಷರಾದ ದಿನೇಶ್ ಶೆಟ್ಟಿ ಉಜಿರೆ, ಶೇಖರ್ ಚಿತ್ರಾಪು, ಕಾರ್ಯದರ್ಶಿ ವಿನಯ್ ಶೆಟ್ಟಿ ನಿಟ್ಟೆ, ಕೋಶಾಧಿಕಾರಿ ಗಣೇಶ್ ಅಂಚನ್, ಸಾಂಸ್ಕೃತಿಕಸಮಿತಿ ಕಾರ್ಯಾಧ್ಯಕ್ಷ ಸಂತೋಷ್ ಶೆಟ್ಟಿ ಪೆರ್ಡೂರು, ಶಿಕ್ಷಣ ಮತ್ತು ಸಾಮಾಜಿಕ ಸಮಿತಿ ಕಾರ್ಯಾಧ್ಯಕ್ಷ ನಿತಿನ್ ಶೆಟ್ಟಿ ನಿಟ್ಟೆ, ಕ್ರೀಡಾ ಸಮಿತಿ ಕಾರ್ಯಾಧ್ಯಕ್ಷ ಸತೀಶ್ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಮಿಥುನ್ ಶೆಟ್ಟಿ ಉಪಸ್ಥಿತರಿದ್ದರು.
ಖ್ಯಾತ ಸಮಾಜ ಸೇವಕ, ಕಲಾಪೋಷಕ ಲೀಲಾಧರ ಶೆಟ್ಟಿ ಕಾಪು ಇವರನ್ನು ವರ್ಷದ ವಿಶೇಷ ಸಾಧಕರನ್ನಾಗಿ ಗುರುತಿಸಿ ಶಾಲು ಹೊದೆಸಿ, ಸ್ಮರಣಿಕೆ ಫಲ ಪುಷ್ಪಗಳನ್ನು ನೀಡಿ ಸಮ್ಮಾನಿಸಲಾಯಿತು. ಉಪಾಧ್ಯಕ್ಷರಾದ ದಿನೇಶ್ ಶೆಟ್ಟಿ ಉಜಿರೆ ಸ್ವಾಗತಿಸಿದರು. ಮಿಥುನ್ ಶೆಟ್ಟಿ, ರತ್ನಾಕರ ಹಾಗೂ ಶ್ಯಾಮ್ ಸುವರ್ಣ ಅತಿಥಿಗಳನ್ನುಪರಿಚಯಿಸಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರನ್ನು ಅಧ್ಯಕ್ಷರಾದ ಹರೀಶ್ ಶೆಟ್ಟಿ ಕುರ್ಕಾಲ್ ಗೌರವಿಸಿದರು.
ಕಾರ್ಯಕ್ರಮದ ಅಂಗವಾಗಿ ಯಶಸ್ವಿ ಹೊಟೇಲ್ ಉದ್ಯಮಿಗಳಾದ ಎರ್ಮಾಳ್ ನಾರಾಯಣ ಕೆ. ಶೆಟ್ಟಿ ಎರ್ಮಾಳ್ ವಿಶ್ವನಾಥ ಶೆಟ್ಟಿ ಹಾಗೂ ವಿಶ್ವನಾಥ ಡಿ. ಶೆಟ್ಟಿ ಇವರುಗಳೊಂದಿಗೆ ಸಾಹಸದ ಹಾದಿ ಎಂಬ ಮುಕ್ತ ಸಂದರ್ಶನ ಕಾರ್ಯಕ್ರಮವನ್ನು ನೂತನ್ ಸುವರ್ಣ ನಡೆಸಿಕೊಟ್ಟರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಮಿತಿ ಸದಸ್ಯರಿಂದ ನೃತ್ಯ ವೈವಿಧ್ಯಗಳು ಹಾಗೂ ಮನೋರಂಜನೆಯ ಅಂಗವಾಗಿ ನಂದಳಿಕೆ ನಾರಾಯಣ ಶೆಟ್ಟಿ ನಿರ್ದೇಶನದಲ್ಲಿ ತುಳು ನಾಟಕ “ದೈಯ್ಯಕ್ಕನ ದೈವದ ಇಲ್ಲ್’ ಪ್ರದರ್ಶನಗೊಂಡಿತು.
ಚಿತ್ರ – ವರದಿ: ಕಿರಣ್ ಬಿ. ರೈ ಕರ್ನೂರು