Advertisement

ಕೆಮ್ಮಣ್ಣು ಬಗ್ಗರ್‌ಬೆಟ್ಟು ಗದ್ದೆಯಲ್ಲಿ  ಬಲೇ ಕೆಸರ್ಡ್ ಗೊಬ್ಬುಗ

06:25 AM Aug 08, 2017 | Harsha Rao |

ಮಲ್ಪೆ: ಕೆಮ್ಮಣ್ಣು ಸೀ ಸ್ಟಾರ್‌ ಫ್ರೆಂಡ್ಸ್‌ ಆಶ್ರಯದಲ್ಲಿ ಗುಡ್ಯಾಂ ದೇವಸ್ಥಾನದ ಬಗ್ಗರಬೆಟ್ಟು ಗದ್ದೆಯಲ್ಲಿ  ಆ. 6 ರಂದು ಬಲೇ ಕೆಸರ್ಡ್ ಗೊಬ್ಬುಗ ಗ್ರಾಮೀಣ ಕ್ರೀಡಾಕೂಟವು ಜರಗಿತು.

Advertisement

ಜಿ. ಪಂ. ಸದಸ್ಯ ಜನಾರ್ದನ ತೋನ್ಸೆ ಅವರು  ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿ  ಹಿಂದಿನ ದಿನಗಳಲ್ಲಿ ಪ್ರತಿಯೊಬ್ಬರು ಕೃಷಿಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಪ್ರತಿಯೊಂದು ದಿನವನ್ನು ಕೆಸರಿನ ಗದ್ದೆಯಲ್ಲಿ ಕಳೆಯುತ್ತಿದ್ದರು. ಇಂದಿನ ಯುವ ಜನರಿಗೆ ಕೃಷಿಯ ಬಗ್ಗೆ ತಿಳುವಳಿಕೆ ಮೂಡಿಸಲು ಕೆಸರªಗೊಬ್ಬುಗಳು  ಪ್ರೇರಣೆಯಾಗಬೇಕು.

ತುಳುನಾಡಿನ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಉಳಿಸುವಲ್ಲಿ ಯುವ ಜನತೆ ಪ್ರಯತ್ನ ಪಡಬೇಕಾಗಿದೆ ಎಂದರು.
ಅಧ್ಯಕ್ಷತೆಯನ್ನು ಕೆಮ್ಮಣ್ಣು ಸೀ ಸ್ಟಾರ್‌ ಫ್ರೆಂಡ್ಸ್‌ ಅಧ್ಯಕ್ಷ ರವಿರಾಜ್‌ ಶೆಟ್ಟಿ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಮೀನುಗಾರಿಕಾ ಸಚಿವ ಪ್ರಮೋದ್‌ ಮಧ್ವರಾಜ್‌, ಮಾಜಿ ಶಾಸಕ ಕೆ. ರಘುಪತಿ ಭಟ್‌, ಕಲ್ಯಾಣಪುರ ಗ್ರಾ. ಪಂ. ಅಧ್ಯಕ್ಷೆ ಪುಷ್ಪಾ, ಕೆಮ್ಮಣ್ಣು ಭದ್ರಕಾಳಿ ಮಹಾಮಾರಿಕಾಂಬ ದೇವಸ್ಥಾನದ ಆಡಳಿತ ಮೊಕ್ತೇಸರ ಜಯಕೃಷ್ಣ ಶೆಟ್ಟಿ,  ತಾ. ಪಂ. ಸದಸ್ಯೆ ಸುಲೋಚನ ಎಸ್‌., ದ.ಕ. ಮತ್ತು ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಶನಿನ ಅಧ್ಯಕ್ಷ ಯಶ್‌ಪಾಲ್‌ ಸುವರ್ಣ, ಕೆಪಿಸಿಸಿ ಕಾರ್ಯದರ್ಶಿ ವೆರೋನಿಕ ಕರ್ನೆಲಿಯೋ, ಬಡಾನಿಡಿಯೂರು ಗ್ರಾ. ಪಂ. ಅಧ್ಯಕ್ಷ ಉಮೇಶ್‌ ಪೂಜಾರಿ, ಬಡಾನಿಡಿಯೂರು ಗ್ರಾ. ಪಂ. ಮಾಜಿ ಅಧ್ಯಕ್ಷ ಸುರೇಶ್‌ ಶೆಟ್ಟಿ, ಕೆಮ್ಮಣ್ಣು ಗ್ರಾ. ಪಂ. ಅಧ್ಯಕ್ಷೆ ಫೌಜಿಯಾ ಸಾದಿಕ್‌, ಧರ್ಮಸ್ಥಳ ಗ್ರಾಮಾಭಿವೃದ್ಧಿ  ಯೋಜನೆಯ ಸೇವಾ ಪ್ರತಿನಿಧಿ ವಿಜಯಾ ಪೈ ಉಪಸಿœತರಿದ್ದರು.

ಸಮಾಜ ಸೇವಕ ವಿಶುಶೆಟ್ಟಿ ಅಂಬಲಪಾಡಿ ಅವರನ್ನು ಸಂಘದ ವತಿಯಿಂದ ಸಮ್ಮಾನಿಸಲಾಯಿತು. ಸತೀಶ್ಚಂದ್ರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next