Advertisement
ವಸಾಹತುಶಾಹಿ ಮತ್ತು ರಾಜಾಡಳಿತದ ಕಾಲ ದಲ್ಲಿ ತುಳುನಾಡು ಎಂಬ ಪ್ರತ್ಯೇಕವಾದ ತುಳು ಭಾಷೆಗಳ ವಿಸ್ತಾರವಾದ ನಾಡೊಂದು ಇತ್ತು ಎಂಬುದು ಪ್ರಾಚೀನ ಇತಿಹಾಸ, ಶಿಲಾಶಾಸನಗಳು, ತಾಮ್ರಶಾಸನಗಳು, ಮತ್ತು ತಾಳೆಗರಿಗಳನ್ನು ಅವ ಲೋಕಿಸಿದಾಗ ಸ್ಪಷ್ಟವಾಗಿ ಕಂಡುಬರುತ್ತದೆ. ತುಳು ನಾಡು, ತುಳುವ ಕೊಂಕಣನಾಡು ಎಂದು ಬಹ ಳಷ್ಟು ಶಾಸನಗಳಲ್ಲಿ ಈ ನಾಡನ್ನು ಹಾಡಿ ಹೊಗಳ ಲಾಗಿದೆ. ಇಂತಹ ನಾಡಿನ ಮೂಲ ಭಾಷೆ ಭಾರತದ ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಅಧಿಕೃತ ಭಾಷೆ ಎಂದು ಇನ್ನೂ ಘೋಷಣೆಯಾಗದಿರುವುದು ವಿಪರ್ಯಾಸವೇ ಸರಿ.
Related Articles
Advertisement
8ನೇ ಪರಿಚ್ಛೇದಕ್ಕೆ ತುಳು ಭಾಷೆಯ ಸೇರ್ಪಡೆಯಿಂದ ಆಗುವ ಪ್ರಯೋಜನಗಳುತುಳು ಒಂದು ರಾಷ್ಟ್ರೀಯ ಭಾಷೆ ಎಂದು ದಾಖಲಾಗುವುದು.
ಕರೆನ್ಸಿ ನೋಟುಗಳಲ್ಲೂ ತುಳು ಲಿಪಿ ಅಚ್ಚಾಗಲಿದೆ.
ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಪ್ರಾದೇಶಿಕ ಭಾಷಾಂತರದ ಪ್ರಶ್ನೆ ಇರುವುದರಿಂದ ಅದರಲ್ಲಿ ತುಳುವಿಗೂ ಅವಕಾಶ ಸಿಗುವುದು.
ಸರಕಾರದ ಪ್ರಕಟನೆಗಳು, ಸುತ್ತೋಲೆಗಳು ತುಳುವಿನಲ್ಲೂ ಪ್ರಕಟವಾಗುವುದು.
ತುಳುನಾಡಿನೊಳಗೆ ಮಾತ್ರವಲ್ಲದೆ ಹೊರಗಣ ತುಳುವರಿಗೂ ಪ್ರಾತಿನಿಧ್ಯ ದೊರಕುವಂತೆ ಭಾಷಾಭಿವೃದ್ಧಿಗಾಗಿ ಕೇಂದ್ರದಿಂದ ನಿಗಮ ಸ್ಥಾಪನೆ.
ಭಾಷಾಭಿವೃದ್ಧಿ ಸಂಶೋಧನೆಗಳಿಗೆ ಕೇಂದ್ರದಿಂದ ವರ್ಷಕ್ಕೆ ಸುಮಾರು 250 ರಿಂದ 300 ಕೋ.ರೂ.ಗಳ ವರೆಗೆ ಅನುದಾನ ಪಡೆಯುವ ಅವಕಾಶವಿದ್ದು ಇದು ರಾಜ್ಯದ ಅಭಿವೃದ್ಧಿಗೂ ಪೂರಕ.
ತುಳುವಿನ ಜಾನಪದ, ನಾಟಕ, ಯಕ್ಷಗಾನ, ಸಿನೆಮಾ ಮತ್ತು ಇನ್ನಿತರ ಸಾಂಸ್ಕೃತಿಕ ರಂಗದ ಚಟುವಟಿಕೆಗಳಿಗೆ ಅನುದಾನ ದೊರೆಯುತ್ತದೆ.
ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ತುಳು ಸಂಬಂಧಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವಲ್ಲಿ ಮತ್ತು ವಿದ್ಯಾರ್ಥಿ ವೇತನ ಪಡೆಯುವಲ್ಲಿ ಹೆಚ್ಚಿನ ಪ್ರಮಾಣದ ಸಹಕಾರ ದೊರೆಯಲಿದೆ.
ದೇಶ-ವಿದೇಶಗಳಲ್ಲಿ ಏರ್ಪಡಿಸುವ ಸಾಂಸ್ಕೃತಿಕ ಉತ್ಸವಗಳಲ್ಲಿ ತುಳು ಕಲಾವಿದರು ಪಾಲ್ಗೊಳ್ಳಲು ಅಧಿಕೃತ ಅವಕಾಶ ಲಭಿಸುವ ಜತೆಯಲ್ಲಿ ತುಳು ಭಾಷೆ, ಸಂಸ್ಕೃತಿಗಾಗಿ ದುಡಿಯುವ ಸಂಸ್ಥೆ, ಸಂಘಟನೆಗಳಿಗೆ ಅನುದಾನ ದೊರೆಯುತ್ತದೆ.
ಯುಜಿಸಿ, ಶಿಕ್ಷಣ ಸಚಿವಾಲಯ, ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ, ತುಳು ಭಾಷಾಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ಹಮ್ಮಿಕೊಳ್ಳಬೇಕಾಗುವುದು ಮಾತ್ರವಲ್ಲದೆ ಆಕಾಶವಾಣಿ, ದೂರದರ್ಶನ, ನ್ಯಾಶನಲ್ ಬುಕ್ ಟ್ರಸ್ಟ್, ಕೇಂದ್ರ ಸಾಹಿತ್ಯ ಅಕಾಡೆಮಿ, ಕ್ಷೇತ್ರ ಪ್ರಚಾರ ಇಲಾಖೆಗಳಲ್ಲಿ ತುಳು ಭಾಷೆಗೆ ಅವಕಾಶ ಲಭಿಸಲಿದೆ.
ಶಾಲೆಗಳಲ್ಲಿ ತುಳು ಭಾಷೆ ಕಲಿಸಲು ಸಹಾಯಕವಾಗುವುದಲ್ಲದೆ ಸರಕಾರಿ ಪ್ರಶಸ್ತಿಗಳನ್ನು ನೀಡುವಾಗ ತುಳು ಭಾಷಿಗರಿಗೂ ಆದ್ಯತೆ ಲಭಿಸಲಿದೆ.
ದೂರದರ್ಶನ, ಆಕಾಶವಾಣಿ ವಿಶೇಷ ಸಂದರ್ಭಗಳಲ್ಲಿ ರಾಷ್ಟ್ರೀಯ ನೆಲೆಯಲ್ಲಿ ವ್ಯವಸ್ಥೆ ಮಾಡುವ ಕವಿ ಕೂಟಗಳಲ್ಲಿ ತುಳು ಭಾಷೆಗೆ ಸ್ಥಾನ ದೊರೆಯುವುದಲ್ಲದೆ ನ್ಯಾಶನಲ್ ಬುಕ್ ಪ್ರಕಟಿಸುವ ಪುಸ್ತಕಗಳಲ್ಲಿ ತುಳು ಕೃತಿಗಳ ಅನುವಾದಕ್ಕೂ ಅವಕಾಶ ಲಭಿಸಲಿದೆ.
ತುಳು ಭಾಷೆ ಕರ್ನಾಟಕದ ಅಧಿಕೃತ ಭಾಷೆ ಎಂದು ರಾಜ್ಯ ಸರಕಾರ ಶಿಫಾರಸು ಮಾಡಿದರೆ ವಸತಿ, ಉದ್ಯೋಗ, ಶಿಕ್ಷಣ, ವಿದ್ಯಾರ್ಥಿ ವೇತನ, ಕಡಿಮೆ ಬಡ್ಡಿ, ರಿಯಾಯಿತಿ ಸವಲತ್ತುಗಳನ್ನು ಪಡೆಯುವ ಅರ್ಹತೆ ಅಲ್ಪಸಂಖ್ಯಾಕ ಭಾಷಿಗರಾದ ತುಳುವರಿಗೆ ಲಭಿಸಲಿದೆ. ಅಲ್ಲದೆ ಕರ್ನಾಟಕ ಸರಕಾರ ರಾಜ್ಯ ಮತ್ತು ಜಿಲ್ಲಾಮಟ್ಟದಲ್ಲಿ ನೇಮಿಸುವ ಸಲಹಾ ಮಂಡಳಿಯಲ್ಲಿ ಅರ್ಹತೆಯ ಆಧಾರದ ಮೇಲೆ ತುಳುವರನ್ನು ನೇಮಿಸಬೇಕಾಗುವುದು.
ಸರಕಾರದಿಂದ ಸಿಗುವ ಅನುದಾನವನ್ನು ಬಳಸಿ ಸಂಸ್ಕೃತಿ ಬೆಳೆಸುವ ಕಾರ್ಯಗಳನ್ನು ಕೈಗೊಳ್ಳಬಹುದು ಮತ್ತು ವಿಶ್ವಾದ್ಯಂತ ಲಭ್ಯವಿರುವ ಶ್ರೇಷ್ಠ ಕೃತಿಗಳನ್ನು ತುಳುವಿಗೆ ಭಾಷಾಂತರಿಸಿ ಜನಸಾಮಾನ್ಯನಿಗೂ ಸಿಗುವಂತೆ ಮಾಡಬಹುದು.
ತುಳು ಲಿಪಿಯಲ್ಲಿರುವ ಸಹಸ್ರಾರು ತಾಳೆ ಗ್ರಂಥಗಳಿಗೆ ಅಧಿಕೃತ ಮಾನ್ಯತೆ ಸಿಕ್ಕಿ, ಅದರಲ್ಲಿ ಇರುವಂತಹ ಸಾಹಿತ್ಯ ಭಂಡಾರ, ಧಾರ್ಮಿಕ ವಿಚಾರಗಳು, ರಾಜಕೀಯ ವಿಚಾರಗಳು ಹೊರಬಂದು ಬೆಳವಣಿಗೆಗೆ ಪೂರಕವಾಗುತ್ತದೆ.
ಸಹಸ್ರಾರು ವರ್ಷಗಳಿಂದ ತುಳುನಾಡಿನೊಂದಿಗೆ ಬೆಸೆದುಕೊಂಡು ಬಂದಿರುವಂತಹ ವಿಶಿಷ್ಟ ಕುಂದಗನ್ನಡಕ್ಕೂ ಸರಕಾರದಿಂದ ಮಾನ್ಯತೆ, ಗೌರವ ಲಭಿಸಲಿದೆ. ಅರ್ಹತೆ ಮತ್ತು ಆಗಬೇಕಾದದ್ದು
ಯಾವುದೇ ಭಾಷೆ ಸಂವಿಧಾನದ ಮಾನ್ಯತೆ ಪಡೆಯಬೇಕಾದ ಅದಕ್ಕೆ ಯಾವುದೇ ರೀತಿ ಸಿದ್ಧ ಮಾನದಂಡಗಳಿಲ್ಲ. ಇದಕ್ಕೆ ಬೇಕಾದದ್ದು ಜನರ ಭಾವನೆಗಳ ಒತ್ತಡ, ರಾಜಕೀಯ ಇಚ್ಛಾಶಕ್ತಿ, ಮತ್ತು ಮಾಧ್ಯಮಗಳ ಸಹಕಾರ. ಭಾಷಿಗರ ಸಂಖ್ಯೆ, ಭಾಷೆಯಲ್ಲಿರುವ ಸಾಹಿತ್ಯ, ಅದಕ್ಕಿರುವ ಪುರಾತನ ಮೌಲ್ಯ, ದಾಖಲೆಗಳು, ಶಾಸನಗಳು, ಇದ್ಯಾವುದೂ ಇದಕ್ಕೆ ಮಾನದಂಡಗಳಲ್ಲ. ಆ ನಿಟ್ಟಿನಲ್ಲಿ ಯೋಚಿಸಿದರೂ ಈಗಾಗಲೇ ಮಾನ್ಯತೆ ಪಡೆದುಕೊಂಡಿರುವ 22 ಭಾಷೆಗಳಲ್ಲಿ ಹಲವು ಭಾಷೆಗಳಿಂದಲೂ ಉತ್ತಮವಾದ ಸ್ಥಾನವನ್ನು ತುಳು ಭಾಷೆ ಹೊಂದಿದೆ. ಲೋಕಸಭೆಯಲ್ಲಿ ಒಂದು ತಿದ್ದುಪಡಿ ಮಸೂದೆಯನ್ನು ಮಂಡಿಸಿ ಅದನ್ನು ಸಂಸತ್‌ನ ಉಭಯ ಸದನಗಳಲ್ಲಿ ಅಂಗೀಕರಿಸಿ ಅದಕ್ಕೆ ರಾಷ್ಟ್ರಪತಿಗಳ ಮುದ್ರೆಯೊಂದು ಬಿದ್ದರೆ ಮುಗಿಯಿತು. ಅದೇ ರೀತಿ ರಾಜ್ಯ ವಿಧಾನ ಮಂಡಲದ ಉಭಯ ಸದನಗಳಲ್ಲಿ ಮಸೂದೆಯನ್ನು ಅಂಗೀಕರಿಸಿ ಅದಕ್ಕೆ ರಾಷ್ಟ್ರಪತಿಗಳ ಒಪ್ಪಿಗೆ ಸಿಕ್ಕಿದರೆ ತುಳು ರಾಜ್ಯದ ಅಧಿಕೃತ ಭಾಷೆಯಾಗುತ್ತದೆ. ಈ ಸಂಬಂಧ ಸರಕಾರದಿಂದಲೇ ಮಸೂದೆ ಮಂಡನೆ ಆಗಬೇಕೆಂದೇನೂ ಇಲ್ಲ. ರಾಜಕೀಯ ಇಚ್ಛಾಶಕ್ತಿ ಇದ್ದರೆ ಯಾವುದೇ ಸಂಸದರು, ಶಾಸಕರು ಖಾಸಗಿ ಮಸೂದೆ ಮಂಡನೆ ಮಾಡಬಹುದು. ತುಳುವರ ಕರ್ತವ್ಯಗಳು
1 2021ರಲ್ಲಿ ನಡೆಯಲಿರುವ ಜನಗಣತಿ ಯಲ್ಲಿ ತಮ್ಮ ಮಾತೃಭಾಷೆ ತುಳು ಎಂದು ನಮೂದಿಸುವುದು ಅತ್ಯಗತ್ಯ.
2 ಕೊಂಕಣಿ, ಬ್ಯಾರಿ, ಮರಾಠಿ ಇತರ ಮಾತೃ ಭಾಷೆಗಳನ್ನು ಬಳಸುವವರು ತಮ್ಮ ವ್ಯಾವಹಾರಿಕ ಭಾಷೆ ತುಳು ಎಂದು ನಮೂದಿಸಿದರೆ ನಾಡಿನ ಬೆಳವಣಿಗೆಗೆ ಪೂರಕ. ಮಣ್ಣಿನ ಭಾಷೆಯು ಸರ್ಮಧರ್ಮೀ ಯರನ್ನು ಒಂದೇ ತಣ್ತೀದಡಿ ಬೆಸೆಯುತ್ತದೆ.
3 ತುಳುನಾಡಿನ ಪ್ರತಿಯೊಂದು ವೇದಿಕೆ ಯಲ್ಲಿ ಈ ವಿಚಾರ ಪ್ರಸ್ತಾವಗೊಂಡು ಒತ್ತಡ ಸೃಷ್ಟಿಯಾದರೆ ನಮ್ಮ ಅಪೂರ್ವ ಸಂಸ್ಕೃತಿ ಯನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸಿ ಕೊಳ್ಳುವುದರ ಜತೆಯಲ್ಲಿ ಭಾರತೀಯತೆ ಯನ್ನು ರಕ್ಷಿಸಿದಂತಾಗುತ್ತದೆ. ಅದು ಈ ನಾಡಿನ ಪ್ರತೀ ಪ್ರಜೆಯ ಕರ್ತವ್ಯವೂ ಹೌದು. ಡಾ| ಆಕಾಶ್ ರಾಜ್ ಜೈನ್, ಉಡುಪಿ