Advertisement
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಗೆ ಅನ್ಯ ರಾಜ್ಯ ಮತ್ತು ವಿದೇಶಗಳಿಂದಲೂ ಹೆಚ್ಚಿನ ಪ್ರವಾಸಿಗರು ಆಗಮಿಸುತ್ತಿದ್ದು, ಅವರಿಗೆ ಈ ನೆಲದ ಭಾಷೆ, ಸಂಸ್ಕೃತಿ, ತಿಂಡಿ-ತಿನಿಸು ಪರಿಚಯಿಸುವುದು ಈ ಯೋಜನೆಯ ಮುಖ್ಯ ಉದ್ದೇಶ.
ಈ ಮಳಿಗೆಗಳಲ್ಲಿ ತುಳುನಾಡ ಮುಟ್ಟಾಳೆ, ಕಂಬಳದ ಬೆತ್ತ, ಗೆರಟೆ ಸಹಿತ ಕರಕುಶಲ ವಸ್ತುಗಳು ಅಲ್ಲದೆ ತುಳುನಾಡಿನ ಅಧ್ಯಯನದ ಪುಸ್ತಕ ಗಳೂ ಇರಲಿವೆ. ತುಳು ಲಿಪಿಯನ್ನು ಪರಿಚಯಿಸುವ ಉದ್ದೇಶದಿಂದ ಮರದ ಕೀ-ಬಂಚ್‌ನಲ್ಲಿ ತುಳು ಲಿಪಿಯಲ್ಲಿ ಹೆಸರು ಬರೆದುಕೊಡುವ ಸೌಲಭ್ಯವೂ ಇರುತ್ತದೆ.
Related Articles
ನೀರುದೋಸೆ, ಬನ್ಸ್, ಪತ್ರೊಡೆ, ಗೋಳಿಬಜೆ ಸಹಿತ ತುಳುನಾಡಿನ ಪ್ರಸಿದ್ಧ ತಿನಿಸುಗಳನ್ನು ಬಸ್, ರೈಲು ಮತ್ತು ವಿಮಾನ ನಿಲ್ದಾಣಗಳಿಗೆ ಹೊಂದಿಕೊಂಡಿರುವ ಹೊಟೇಲ್‌ಗಳಲ್ಲಿ ಸಿಗುವಂತೆ ಮಾಡಲು ಚಿಂತನೆ ನಡೆಯುತ್ತಿದೆ.
Advertisement
ರೈತನ ಜತೆ ಸೆಲ್ಫಿಬಸ್, ರೈಲು ಮತ್ತು ವಿಮಾನ ನಿಲ್ದಾಣಗಳಲ್ಲಿ ಸೆಲ್ಫಿà ಕಾರ್ನರ್ ನಿರ್ಮಾಣ ವಾಗಲಿದ್ದು ಪ್ರವಾಸಿಗರು ಇಲ್ಲಿ ಸೆಲ್ಫಿ ಕ್ಲಿಕ್ಕಿಸಬಹುದು. ಅಲ್ಲಿ ರೈತನನ್ನು ಹೋಲುವ ಸ್ಟಾ éಂಡ್ ಒಂದನ್ನು ಇಡಲಿದ್ದು, ತಲೆ ಭಾಗದಲ್ಲಿ ಖಾಲಿ ಇರುತ್ತದೆ. ಅಲ್ಲಿ ಪ್ರವಾಸಿಗರು, ಸಾರ್ವ ಜನಿಕರು ಮುಟ್ಟಾಳೆ ಧರಿಸಿ, ನೇಗಿಲು, ಕಂಬಳದ ಬೆತ್ತ ಕೈಯಲ್ಲಿ ಹಿಡಿದು ಸೆಲ್ಫಿà ಕ್ಲಿಕ್ಕಿಸಿ ಸಂಭ್ರಮಿಸಬಹುದು. ತುಳುನಾಡ ಸಂಸ್ಕೃತಿ ಬೇರೆ ಭಾಗದ ಜನರಿಗೂ ತಿಳಿಯಬೇಕು. ಈ ಉದ್ದೇಶದಿಂದ ಉಭಯ ಜಿಲ್ಲೆಗಳ ಪ್ರಮುಖ ಬಸ್, ರೈಲು ಮತ್ತು ವಿಮಾನ ನಿಲ್ದಾಣಗಳಲ್ಲಿ ತುಳುನಾಡ ಸಂಸ್ಕೃತಿಯ ಅನಾವರಣಗೊಳಿಸಲು ಅಕಾಡೆಮಿ ನಿರ್ಧರಿಸಿದೆ. ಈ ಬಗ್ಗೆ ಸದ್ಯದಲ್ಲೇ ರೂಪರೇಖೆ ಸಿದ್ಧ ಪಡಿಸಲಾಗುವುದು. ಉಪ ಚುನಾ ವಣೆ ಮುಗಿದ ಕೂಡಲೇ ಅಕಾಡೆಮಿ ಪದಾಧಿಕಾರಿಗಳ ಪದಗ್ರಹಣ ನಡೆಯ ಲಿದ್ದು, ಬಳಿಕ ತುಳುವನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸಲು ಬೇಕಾದ ಪ್ರಕ್ರಿಯೆಗಳನ್ನು ಆರಂಭಿಸ ಲಾಗುವುದು.
– ದಯಾನಂದ ಕತ್ತಲಸಾರ್,
ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ -ನವೀನ್ ಭಟ್ ಇಳಂತಿಲ