Advertisement

ತುಳು ಕೂಟ ಫೌಂಡೇಶನ್‌ ನಲಸೋಪರ ವಾರ್ಷಿಕ ಮಹಾಸಭೆ

01:03 PM Sep 26, 2021 | Team Udayavani |

ಮುಂಬಯಿ: ತುಳು ಕೂಟ ಫೌಂಡೇಶನ್‌ ನಲಸೋಪರ ಇದರ ಎರಡನೇ ವಾರ್ಷಿಕ ಮಹಾಸಭೆ ತುಳುಕೂಟದ ಅಧ್ಯಕ್ಷ ರಮೇಶ್‌ ವಿ. ಶೆಟ್ಟಿ ಕಾಪು ಅವರ ಅಧ್ಯಕ್ಷತೆಯಲ್ಲಿ ಸೆ. 12ರಂದು ನಲಸೋಪರ ರೀಜೆನ್ಸಿ ಬ್ಯಾಂಕ್ವೆಟ್‌ ಸಭಾಗೃಹದಲ್ಲಿ ನಡೆಯಿತು.

Advertisement

ಸಭೆಯನ್ನು ದೀಪಬೆಳಗಿಸಿ ಉದ್ಘಾಟಿಸಿದ ರಮೇಶ್‌ ಶೆಟ್ಟಿ ಕಾಪು ಮಾತನಾಡಿ, ಜನ್ಮಭೂಮಿ ತುಳುನಾಡಿನಿಂದ ಕರ್ಮಭೂಮಿಗೆ ಆಗಮಿಸಿರುವ ತುಳುವರು ಒಗ್ಗಟ್ಟಿನಲ್ಲಿ ಇರಬೇಕು ಎಂಬ ಅಭಿಮಾನದಿಂದ ಬಹಳ ಸಂಖ್ಯೆಯಲ್ಲಿ  ಸೇರಿರುವುದನ್ನು ಕಂಡಾಗ ಸಂತೋಷವಾಗುತ್ತದೆ. ಕಷ್ಟದಿಂದ ಇರುವ ತುಳು-ಬಂಧುಗಳಿಗೆ ಸಹಕಾರಿಯಾಗಬೇಕು, ಮಕ್ಕಳು ವಿದ್ಯಾವಂತರಾಗಬೇಕು, ಅವರಿಗೆ ಆರ್ಥಿಕ ಸಹಕಾರ ನೀಡುವುದು ಇನ್ನಿತರ ಉದ್ದೇಶಗಳಿಂದ ಈ ಸಂಸ್ಥೆಯನ್ನು ಸ್ಥಾಪಿಸಲಾಗಿದೆ. ಇದೀಗ ಮುಂದಿನ ಮೂರು ವರ್ಷಗಳ ಅವಧಿಗೆ ಸಮರ್ಥ ನಾಯಕನನ್ನು ಆಯ್ಕೆ ಮಾಡಿದ್ದೇವೆ. ಅವರ ಕಾಲಾವಧಿಯಲ್ಲಿ ಈ ಸಂಸ್ಥೆ ಇನ್ನಷ್ಟು ಅಭಿವೃದ್ಧಿಗೊಳ್ಳಲು ಎಲ್ಲರೂ ಸಹಕಾರ ನೀಡಬೇಕು ಎಂದರು.

ಉಪ ಕಾರ್ಯಾಧ್ಯಕ್ಷ ಗಣೇಶ್‌ ಸುವರ್ಣ ಸ್ವಾಗತಿಸಿದರು. ಗೌರವ ಪ್ರಧಾನ ಕಾರ್ಯದರ್ಶಿ ಜಗನ್ನಾಥ್‌ ಡಿ. ಶೆಟ್ಟಿ  ವಾರ್ಷಿಕ ವರದಿ ಮತ್ತು ಲೆಕ್ಕಪತ್ರ ಮಂಡಿಸಿದರು. ಸಭೆಯಲ್ಲಿ ಆಂತರಿಕ ಲೆಕ್ಕ ಪರಿಶೋಧಕರಾಗಿ ವಿಜಯ ಶೆಟ್ಟಿ ಅವರನ್ನು ಆಯ್ಕೆ ಮಾಡಲಾಯಿತು. ಸಂಸ್ಥೆ ಬಗ್ಗೆ ಮಹಿಳಾ ವಿಭಾಗದ ಉಪಕಾರ್ಯಾಧ್ಯಕ್ಷೆ ಮಲ್ಲಿಕಾ ಪೂಜಾರಿ ಮಾಹಿತಿ ನೀಡಿದರು.

ನೂತನ ಅಧ್ಯಕ್ಷ ಶಶಿಧರ ಶೆಟ್ಟಿ ಇನ್ನಂಜೆ ಮಾತನಾಡಿ, ಇಲ್ಲಿನ ಗ್ರಾಮೀಣ ಪ್ರದೇಶದ ತುಳುವರು ಒಗ್ಗಟ್ಟಾಗಿರಬೇಕು ಎನ್ನುವ ಉದ್ದೇಶದಿಂದ ತುಳುಕೂಟ ಸ್ಥಾಪನೆಗೊಂಡಿದೆ. ಜನಸಾಮಾನ್ಯರ ಕಷ್ಟಗಳನ್ನು ಗುರುತಿಸಿ ಅವರಿಗೆ ಬೆಂಬಲಿಸುವ ಸೇವೆ ಮುಂದಿನ ದಿನಗಳಲ್ಲಿ  ಹೆಚ್ಚಾಗಿ ನಡೆಯಲಿದೆ. ಲಾಕ್‌ಡೌನ್‌ ಸಮಯದಲ್ಲಿ  ನಮ್ಮ ಸಂಸ್ಥೆ 3,550 ಕುಟುಂಬಗಳಿಗೆ ಆಹಾರದ ಕಿಟ್‌ಗಳನ್ನು ವಿತರಿಸಿದೆ. ತುಳುಕೂಟ ಫೌಂಡೇಶನ್‌ ಅಲ್ಪಾವಧಿಯಲ್ಲಿ ಮಾಡಿದ ಸಾಧನೆ ಬಗ್ಗೆ ನಮಗೆ ಗೌರವವಿದ್ದು, ಹಲವಾರು ಯೋಜನೆಗಳನ್ನು ರೂಪಿಸಿದ್ದೇವೆ ಎಂದರು.

ಸಭಿಕರ ಪರವಾಗಿ ದಯಾನಂದ, ಜಯಂತ್‌ ಪಕ್ಕಳ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಬಳಿಕ ಮುಂದಿನ ಮೂರು ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಶಶಿಧರ ಕೆ. ಶೆಟ್ಟಿ ಇನ್ನಂಜೆ ಅವರಿಗೆ ಅಧಿಕಾರ ಹಸ್ತಾಂತರಿಸಲಾಯಿತು. ಚುನಾವಣ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ಲ| ಕೃಷ್ಣಯ್ಯ ಎ. ಹೆಗ್ಡೆ ಅಡಂದಾಲು ಕಾರ್ಯಕಾರಿ ಮಂಡಳಿಗೆ ಆಯ್ಕೆಗೊಂಡಿರುವ ಸದಸ್ಯರ ಯಾದಿಯನ್ನು ವಾಚಿಸಿದರು.

Advertisement

ನಿರ್ಗಮನ ಅಧ್ಯಕ್ಷ ರಮೇಶ್‌ ಶೆಟ್ಟಿ ಕಾಪು, ಉಪಾಧ್ಯಕ್ಷರಾದ ಗಣೇಶ್‌ ವಿ. ಸುವರ್ಣ, ಗೌರವ ಕೋಶಾಧಿಕಾರಿ ಸುರೇಂದ್ರ ಜೆ. ಶೆಟ್ಟಿ, ಜತೆ ಕೋಶಾಧಿಕಾರಿ ದಿವಾಕರ ಬಿ. ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಉಮಾ ಸತೀಶ್‌ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ರಿತೇಶ್‌ ಶೆಟ್ಟಿ ಉಪಸ್ಥಿತರಿದ್ದರು.

ಕೊರೊನಾ ಲಾಕ್‌ಡೌನ್‌ ಸಂದರ್ಭ ಆಹಾರ ಸಾಮಗ್ರಿಗಳನ್ನು ಮನೆಬಾಗಿಲಿಗೆ ತಲುಪಿಸಲು ಸಹಕರಿಸಿದ ಜಗನ್ನಾಥ ಡಿ. ಶೆಟ್ಟಿ ಪಳ್ಳಿ, ಲ| ಕೃಷ್ಣಯ್ಯ ಎ. ಹೆಗ್ಡೆ ಅಡಂದಾಲು, ರಾಮಣ್ಣ ಶೆಟ್ಟಿ, ಸುಪ್ರಿತ್‌ ಶೆಟ್ಟಿ ನೀರೆ, ಪ್ರವೀಣ್‌ ಶೆಟ್ಟಿ ಕಣಂಜಾರು, ದಯಾನಂದ ಬಿ. ಶೆಟ್ಟಿ, ರಮೇಶ್‌ ಪೂಜಾರಿ, ಜಯ ಅಶೋಕ್‌ ಶೆಟ್ಟಿ, ಉಷಾ ಶ್ರೀಧರ ಶೆಟ್ಟಿ, ಪ್ರೇರಕ್‌ ಕೃಷ್ಣಯ್ಯ ಹೆಗ್ಡೆ, ಯಶೋದಾ ಎಸ್‌. ಕೋಟ್ಯಾನ್‌, ಮಲ್ಲಿಕಾ ಆರ್‌. ಪೂಜಾರಿ, ಉಮಾ ಸತೀಶ್‌ ಶೆಟ್ಟಿ, ಶುಭಾಷ್‌ ಶೆಟ್ಟಿ ಎರ್ಮಾಳ್‌, ಪ್ರತ್ವಿರಾಜ್‌ ಶ್ರೀಧರ್‌ ಶೆಟ್ಟಿ, ರಿತೇಶ್‌ ಶೆಟ್ಟಿ, ಹರಿಪ್ರಸಾದ್‌ ಶೆಟ್ಟಿ, ಲಕೇಶ್‌ ಶೆಟ್ಟಿ, ಪ್ರಸಾದ್‌ ಬನ್ಸೋಡೆ, ಮಂಜುನಾಥ್‌ ಪೈ ಹಾಗೂ ಆಹಾರ ಸಾಮಗ್ರಿಗಳ ಪೊಟ್ಟಣಗಳನ್ನು ತಯಾರಿಸಿದ ರೀಜೆನ್ಸ್‌ ಬ್ಯಾಂಕ್ವೆಟ್‌ನ ರಾಮಣ್ಣ ಶೆಟ್ಟಿ  ಮತ್ತು ನೌಕರ ವೃದದವರನ್ನು ಗೌರವಿಸಲಾಯಿತು.

ಕಾರ್ಯಕ್ರಮವನ್ನು ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷ ಪ್ರವೀಣ್‌ ಶೆಟ್ಟಿ ಕಣಂಜಾರು ನಿರ್ವಹಿಸಿದರು. ಗೌರವ ಪ್ರಧಾನ ಕಾರ್ಯದರ್ಶಿ ಜಗನ್ನಾಥ ಡಿ. ಶೆಟ್ಟಿ ಪಳ್ಳಿ ವಂದಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next