Advertisement

ತುಳುಕೂಟ ಐರೋಲಿ ರಂಗೋತ್ಸವ ಏಕಾಂಕ ನಾಟಕ ಸ್ಪರ್ಧೆಯ ಸಮಾರೋಪ

03:13 PM Sep 07, 2017 | Team Udayavani |

ನವಿಮುಂಬಯಿ: ಕಳೆದ ಹತ್ತು ವರ್ಷಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಆಸ್ಪದವನ್ನು ನೀಡುತ್ತಾ ತುಳುಕೂಟದ ಸದಸ್ಯರಲ್ಲಿರುವ ಅಪ್ರತಿಮ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆಯನ್ನು ನಿರ್ಮಾಣ ಮಾಡಿದಂತಹ ತುಳುಕೂಟ ಐರೋಲಿಯು ಪ್ರಸ್ತುತ ದಶಮಾನೋತ್ಸವದ ನಿಮಿತ್ತ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಿಕೊಂಡು ಮುಂಬ ಯಿಯ ಕಲಾವಿದರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ಮಾಡಿಕೊಟ್ಟಿದ್ದು, ಇಂದಿನ ದಿನ ಪ್ರದರ್ಶಿಸಲ್ಪಟ್ಟ 5 ಉತ್ತಮ ನಾಟಕಗಳಲ್ಲಿ ಮುಂಬಯಿ ಮಹಾನಗರದ ಅದೆಷ್ಟೋ ಕಲಾಪ್ರತಿಭೆಗಳಿಗೆ ವೇದಿಕೆಯ ನಿರ್ಮಾಣವಾದಂತಾಗಿರುವುದು ಸಂತೃಪ್ತಿಯನ್ನು ನೀಡಿದೆ ಎಂದು ತುಳುಕೂಟ ಐರೋಲಿಯ ಅಧ್ಯಕ್ಷ ಹರೀಶ್‌ ಶೆಟ್ಟಿ ಪಡುಬಿದ್ರೆ ಅವರು ನುಡಿದರು.

Advertisement

ಆ. 20ರಂದು ಐರೋಲಿಯ ಮೆಹ್ತಾ ಕಾಲೇಜಿನ ಸಭಾಂಗಣದಲ್ಲಿ ತುಳುಕೂಟ ಐರೋಲಿಯ ದಶಮಾನೋತ್ಸವದ ನಿಮಿತ್ತ ಆಯೋಜಿಸಲಾಗಿದ್ದ ರಂಗೋತ್ಸವ ಏಕಾಂಕ ನಾಟಕ ಸ್ಪರ್ಧೆಯ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತ ನಾಡಿದ ಅವರು, ಬೆಳಗ್ಗೆ ಆರಂಭಗೊಂಡ ರಂಗೋತ್ಸವವು ಸ್ಪರ್ಧೆ ಯಾಗಿರದೆ ಮನೆಯವರೆಲ್ಲ ಸೇರಿ ಮಾಡಿದಂತಹ ಒಂದು ಸಾಂಸ್ಕೃತಿಕ ಕಾರ್ಯಕ್ರಮದಂತೆ ಭಾಸವಾಯಿತು. ಸಂಸ್ಥೆಯ ವಿದ್ಯಾನಿಧಿ ಕುಂಭ ಯೋಜನೆಗೆ ಎಲ್ಲರ ಸಹಕಾರ ಸದಾಯಿರಲಿ ಎಂದರು.

ಅತಿಥಿಯಾಗಿ ಪಾಲ್ಗೊಂಡ ಘನ್ಸೋಲಿ ಶ್ರೀ ಮೂಕಾಂಬಿಕಾ ಮಂದಿರದ ಅಧ್ಯಕ್ಷ, ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ ಅವರು ಮಾತನಾಡಿ, ತುಳುಕೂಟವು ಕಳೆದ 10 ವರ್ಷಗಳಿಂದ ವಿವಿಧ ಅಧ್ಯಕ್ಷರ ಮುಂದಾಳತ್ವದಲ್ಲಿ ಸರ್ವಾಂಗೀಣ ಪ್ರಗತಿಯನ್ನು ಕಂಡಿದ್ದು, ಪ್ರಸ್ತುತ ಅಧ್ಯಕ್ಷ ಹರೀಶ್‌ ಶೆಟ್ಟಿ ಪಡುಬಿದ್ರೆ ಅವರು ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ವಿದ್ಯಾ ನಿಧಿ ಕುಂಭ ಯೋಜನೆಯ ಯಶಸ್ಸಿಗಾಗಿ ಶ್ರಮಿಸುತ್ತಿದ್ದು ಅಭಿನಂದ ನೀಯವಾಗಿದೆ. ರಂಗೋತ್ಸವದಲ್ಲಿ ಎಲ್ಲಾ ತಂಡಗಳು ಉತ್ತಮ ವಾಗಿ ಪ್ರದರ್ಶನವನ್ನು ನೀಡಿವೆ. ಸೋಲು-ಗೆಲುವು ಕೇವಲ ತಾತ್ಕಾಲಿಕವಾದುದು. ತಂಡಗಳು ಪಟ್ಟ  ಶ್ರಮ, ನೀಡಿದ ಪ್ರದರ್ಶನ ಅದು ಶಾಶ್ವತವಾಗಿ  ಉಳಿಯುವಂಥದ್ದಾಗಿದೆ ಎಂದರು.

ಇನ್ನೋರ್ವ ಅತಿಥಿ ಉದ್ಯಮಿ ಸಂಜೀವ ಎನ್‌. ಶೆಟ್ಟಿ ಮಾತನಾಡಿ, ತುಳುಕೂಟವು ಉತ್ತಮ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಇಂತಹ ಸ್ಪರ್ಧೆಗಳನ್ನು ಆಯೋಜಿಸುವುದರಿಂದ ಕಲಾವಿದರಿಗೆ ತಮ್ಮ ಪ್ರದರ್ಶನವನ್ನು ನೀಡಲು ವೇದಿಕೆಯ ನಿರ್ಮಾಣವಾಗುತ್ತದೆ. ತುಳುಕೂಟವು ಪ್ರತೀ ವರ್ಷ ಇಂಥ ಉತ್ತಮ ಸ್ಪರ್ಧೆಗಳನ್ನು ಆಯೋಜಿಸುವಂತಾಗಲಿ ಎಂದರು.

ಬಂಟರ ಸಂಘ ಮುಂಬಯಿ ಡೊಂಬಿವಲಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ರಾಜೀವ ಭಂಡಾರಿ ಅವರು ಮಾತನಾಡಿ, ಹತ್ತು ವರ್ಷಗಳಿಂದ ಸರ್ವಾಂಗೀಣ ಪ್ರಗತಿಯನ್ನು ಸಾಧಿಸಿದ ತುಳುಕೂಟವು ಇಂದು ಉತ್ತಮ ಸ್ಪರ್ಧೆಯನ್ನು ಆಯೋಜಿಸಿ ಸಾಂಸ್ಕೃತಿಕ ರಂಗದಲ್ಲಿ ವಿಶೇಷ ಸಾಧನೆಗೈದಿದೆ. ಸಂಸ್ಥೆಯ ಕಾರ್ಯಕ್ರಮಗಳಿಗೆ ಎಲ್ಲರ ಸಹಕಾರವಿರಲಿ ಎಂದು ಶುಭ ಹಾರೈಸಿದರು.

Advertisement

ನವಿಮುಂಬಯಿ ಹೊಟೇಲ್‌ ಓನರ್ಸ್‌ ಅಸೋಸಿಯೇಶನ್‌ ಅಧ್ಯಕ್ಷ ದಯಾನಂದ ಶೆಟ್ಟಿ ಮಾತನಾಡಿ, ತುಳುಕೂಟ ಐರೋಲಿಯು ಹರೀಶ್‌ ಶೆಟ್ಟಿ ಪಡುಬಿದ್ರೆ ಅವರ ಸಾರಥ್ಯದಲ್ಲಿ ಉತ್ತಮ ಕಾರ್ಯವನ್ನು ಮಾಡುತ್ತಿದ್ದು, ಈಗಾಗಲೇ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ. ವಿದ್ಯಾನಿಧಿ ಕುಂಭಕ್ಕೆ ಈಗಾಗಲೇ 26 ಲಕ್ಷ ರೂ. ಜಮಾವಣೆಯಾಗಿದ್ದು, ಉಳಿದ 22 ಲಕ್ಷ ರೂ. ಗಳನ್ನು ಶೀಘ್ರದಲ್ಲೇ ಜಮಾವಣೆಗೊಳಿಸಲು ಎಲ್ಲಾ ಸದಸ್ಯರು ಮುಂದಾಗಬೇಕು ಎಂದರು.
ಫಾರ್‌ವೆುçಕಾ ಕಂಪೆನಿಯ ಮಹಾಪ್ರಬಂಧಕ ರಮೇಶ್‌ ಶೆಟ್ಟಿ ಸಿದ್ಧಕಟ್ಟೆ ಮಾತನಾಡಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಮುಂಬಯಿ ರಂಗಭೂಮಿಯಲ್ಲಿ ವಿಶೇಷ ಸಾಧನೆಗೈದ ಕಲಾವಿದ ರನ್ನು ಸಮ್ಮಾನಿಸಲಾಯಿತು. ಸಮ್ಮಾನ ಸ್ವೀಕರಿಸಿದ ಕರುಣಾಕರ ಕಾಪು, ರಂಗಕಲಾವಿದೆ ಪ್ರಿಯಾ ಸರೋಜಾ ದೇವಿ, ಆದ್ಯಪಾಡಿ ಬಾಲಕೃಷ್ಣ ಶೆಟ್ಟಿ ಅವರು ಮಾತನಾಡಿ ಕೃತಜ್ಞತೆ ಸಲ್ಲಿಸಿದರು.

ತೀರ್ಪುಗಾರರಾಗಿ ದಿನೇಶ್‌ ಬಿ. ಕುಡ್ವ, ಸುಧಾ ಶೆಟ್ಟಿ, ಪ್ರಫುಲ್‌ಚಂದ್ರ ರೈ ಕುಂಟಾಡಿ ಅವರು ಸಹಕರಿಸಿದರು. ತೀರ್ಪುಗಾರರನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು. ರಂಗೋತ್ಸವದ ಮೇಲ್ವಿಚಾರಕರಾಗಿ ಸಹಕರಿಸಿದ ರಂಗನಿರ್ದೇಶಕ, ಕವಿ ಸಾ. ದಯಾ, ಬಾಬಾ ಪ್ರಸಾದ್‌ ಅರಸ ಅವರನ್ನು ಗೌರವಿಸಲಾಯಿತು. ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಜಗದೀಶ್‌ ರೈ, ಡೊಂಬಿವಲಿ ತುಳುಕೂಟದ ಕಾರ್ಯದರ್ಶಿ ರವಿ ಶೆಟ್ಟಿ, ಮನೋಹರ ಶೆಟ್ಟಿ ನಂದಳಿಕೆ ಅವರನ್ನು ಗೌರವಿಸಲಾಯಿತು. ಚಲನಚಿತ್ರ ನಟಿ ಶ್ರದ್ದಾ ಸಾಲ್ಯಾನ್‌ ಅವರನ್ನು ಸತ್ಕರಿಸಲಾಯಿತು.

ಸಂಸ್ಥೆಯ ಉಪಾಧ್ಯಕ್ಷ ಕೆ. ಕೆ. ಹೆಬ್ಟಾರ್‌, ನಾಗೇಶ್‌ ಶೆಟ್ಟಿ ಬೈಕಾಡಿ ಹೆದ್ದಾರಿಮನೆ, ಕಾರ್ಯದರ್ಶಿ ರಾಜೇಶ ಬಿ. ಶೆಟ್ಟಿ, ಕೋಶಾಧಿಕಾರಿ ಗಂಗಾಧರ ಬಂಗೇರ, ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ಅಮರನಾಥ್‌ ಶೆಟ್ಟಿ ಕಳತ್ತೂರು, ರಂಗೋತ್ಸವ ಕಾರ್ಯಾಧ್ಯಕ್ಷ ಸುಕೇಶ್‌ ಶೆಟ್ಟಿ ಇರ್ವತ್ತೂರು ಉಪಸ್ಥಿತರಿದ್ದರು. ಗಂಗಾಧರ ಬಂಗೇರ ವಿಜೇತರ ಯಾದಿಯನ್ನು ಓದಿ ವಂದಿಸಿದರು. ಕು| ಸನ್ನಿಧಿ ವೀರೇಂದ್ರ ಶೆಟ್ಟಿ ಪ್ರಾರ್ಥನೆಗೈದರು. ಜಗದೀಶ್‌ ಶೆಟ್ಟಿ ನಾಡಾಜೆಗುತ್ತು ಕಾರ್ಯಕ್ರಮ
ನಿರ್ವಹಿಸಿದರು. ರೂಪಾ ಎಸ್‌. ಶೆಟ್ಟಿ, ಲಲಿತಾ ಪಿ. ಕೋಟ್ಯಾನ್‌, ಶೈಲಶ್ರೀ ಅಮರ್‌ ಶೆಟ್ಟಿ ಸಮ್ಮಾನ ಪತ್ರ ವಾಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next