Advertisement
ಕಳೆದ ಹಲವಾರು ವರ್ಷಗಳಿಂದ ನಗರದಲ್ಲಿ ತುಳು ಭಾಷೆ ಹಾಗೂ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ತುಳು ಬಾಂಧವರ ಅನೇಕ ಸಂಘಟನೆಗಳು ಕಾರ್ಯ ನಿರತರಾಗಿದ್ದು ಅದರಲ್ಲಿ ಸ್ಥಳೀಯ ತುಳು ಸಂಘಟನೆಗಳಾದ ಬಂಟರ ಸಂಘ ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ವಿಜಯ್ ಆರ್. ಭಂಡಾರಿ ಮತ್ತು ಬಿಲ್ಲವರ ಅಸೋಸಿಯೇಶನ್ ಬೊರಿವಲಿ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷರಾದ ಸುಂದರ ಎಂ. ಪೂಜಾರಿ ಅವರನ್ನು ಉಪಸ್ಥಿತರಿದ್ದ ಅತಿಥಿಗಳು ಹಾಗೂ ಸಂಘದ ಪದಾಧಿಕಾರಿಗಳು ಸಮ್ಮಾನಿಸಿ ಶುಭ ಹಾರೈಸಿದರು. ಸಮ್ಮಾನಿತರನ್ನು ಅಂಜನಾ ಮಹೇಶ್ ಶೆಟ್ಟಿ ಪರಿಚಯಿಸಿದರು. ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಪ್ರತಿಭೆಗಳನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.
ಸಮ್ಮಾನ ಸ್ವೀಕರಿಸಿ ಮಾತನಾಡಿದ ವಿಜಯ ಆರ್. ಭಂಡಾರಿ ಅವರು, ಪೇಟೆಮನೆ ಪ್ರಕಾಶ್ ಶೆಟ್ಟಿ ಅವರ ನೇತೃತ್ವದಲ್ಲಿ ಆರನೆಯ ವಾರ್ಷಿಕೋತ್ಸವ ಸಮಾರಂಭ ನಡೆಯುತ್ತಿದ್ದು, ಎಲ್ಲ ತುಳು ಬಾಂಧವರನ್ನು ಒಟ್ಟುಗೂಡಿಸುವ ಸಾಧನೆ ಇಂದಿನ ಸಭೆಯನ್ನು ನೋಡುವಾಗ ತಿಳಿಯುತ್ತಿದೆ. ಶಿಕ್ಷಣಕ್ಕೆ ಪೊ›àತ್ಸಾಹ, ಪರಿಸರದ ಜನರನ್ನು ಕೂಡಿಸುವ ಇಂತಹ ಕಾರ್ಯದಿಂದ ಮನೆ ಹಾಗೂ ಪರಿಸರ ಸುಧಾರಣೆಗೊಳ್ಳುವುದು. ತುಳು ಸಮಾಜ ಬಾಂಧವರ ಎಲ್ಲಾ ಸಂಘಟನೆಗಳು ತುಳು ತಾಯಿಯ ಸಂಘಟನೆಗಳಾಗಿದೆ. ಇಂತಹ ಉತ್ತಮ ಕೆಲಸಗಳು ಮುಂದುವರಿಯುತ್ತಿರಲಿ ಎಂದರು.
Related Articles
Advertisement
ಮಹಿಳಾ ವಿಭಾಗದವರಿಂದ ಅರಸಿನ ಕುಂಕುಮ ಮಾತ್ರವಲ್ಲದೆ ಸದಸ್ಯರಿಂದ ಹಾಗೂ ಮಕ್ಕಳಿಂದ ವಿವಿಧ ಮನೋರಂಜನ ಕಾರ್ಯಕ್ರಮ ನಡೆಯಿತು. ಮನೋರಂಜನಾ ಕಾರ್ಯಕ್ರಮವನ್ನು ಸಂಘದ ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷೆ ಹರಿಣಾ ಆರ್. ಶೆಟ್ಟಿ ಅವರು ನಿರ್ವಹಿಸಿದರು. ಸದಸ್ಯತನ ಕಾರ್ಯಾಧ್ಯಕ್ಷೆ ಸುಮತಿ ಸಿ. ಸಾಲ್ಯಾನ್, ಕ್ರೀಡಾ ಕಾರ್ಯಾಧ್ಯಕ್ಷೆ ಶೋಭಾ ಸಿ. ಶೆಟ್ಟಿ ಮತ್ತಿರರು ಸಹಕರಿಸಿದರು. ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷರಾದ ಪ್ರಭಾಕರ ಬಿ. ಶೆಟ್ಟಿ, ಕೋಶಾಧಿಕಾರಿ ರಜಿತ್ ಎಲ್. ಸುವರ್ಣ, ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷೆ ಹರಿಣಾ ಆರ್. ಶೆಟ್ಟಿ, ಜೊತೆ ಕೋಶಾಧಿಕಾರಿ ಸವಿತಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಅಭಿನಯ ಮಂಟಪ ಮುಂಬಯಿಯ ಕಲಾವಿದರಿಂದ ಕರುಣಾಕರ ಕಾಪು ನಿರ್ದೇಶನದ ತುಳು ನಾಟಕ ಒಯಿಕ್ ಲಾ ದಿನ ಬರೊಡು ನಾಟಕ ಪ್ರದರ್ಶನಗೊಂಡಿತು. ಕಾರ್ಯಕ್ರಮವನ್ನು ಜೊತೆ ಕಾರ್ಯದರ್ಶಿ ಪ್ರವೀಣ್ ಆರ್. ಶೆಟ್ಟಿ ನಿರ್ವಹಿಸಿದ್ದು ಸಂಘದ ಗೌ. ಪ್ರಧಾನ ಕಾರ್ಯದರ್ಶಿ ಕರುಣಾಕರ ಎಂ. ಶೆಟ್ಟಿ ಅವರು ಅತಿಥಿಗಳನ್ನು ಸ್ವಾಗತಿಸಿ ಕೊನೆಗೆ ವಂದಿಸಿದರು.
ಚಿತ್ರ-ವರದಿ: ಈಶ್ವರ ಎಂ. ಐಲ್.