Advertisement

ತುಳು ಆಲ್ಬಮ್‌ ಸಾಂಗ್‌ ಬಿಡುಗಡೆ

01:40 AM Oct 02, 2020 | mahesh |

ಮಂಜೇಶ್ವರ: ಗಡಿನಾಡ ಯುವಕರ ಹೊಸ ಪ್ರಯತ್ನ. ಉದಯ್‌ ಕುಮಾರ್‌ ಬೇಕೂರ್‌ ಸಾಹಿತ್ಯ ಮತ್ತು ನಿರ್ದೇಶನದಲ್ಲಿ, ದೀಪಕ್‌ ಹೊಸಂಗಡಿ, ಪ್ರಜ್ವಲ್‌ ಬೇಕೂರ್‌ ಸಹ ನಿರ್ದೇಶನದಲ್ಲಿ ಉಡಲ ಮೋಕೆ (ದೇವೆರೆ ಸೃಷ್ಟಿ) ತುಳುನಾಡ ಬಹು ಜನರ ಮನಸ್ಸಲ್ಲಿ ಸಂಚಲನ ಮೂಡಿಸಿದ ಬಹು ನಿರೀಕ್ಷಿತ ತುಳು ಆಲ್ಬಮ್‌ ಸಾಂಗ್‌ ಬಿಡುಗಡೆಗೊಂಡಿತು.

Advertisement

ಶಿವಂ ಕ್ರಿಯೇಷನ್ಸ್‌ ಯೂಟ್ಯೂಬ್‌ ಚಾನೆಲ್‌ನಲ್ಲಿ ತುಳು ಕನ್ನಡ ಚಲನಚಿತ್ರ ನಟ ಸ್ಯಾಂಡಲ್‌ವುಡ್‌ 2019 ಎಸ್‌ಐಎಂಎ ಪ್ರಶಸ್ತಿ ವಿಜೇತ ತುಳುವ ಸೌರಭ ಪ್ರಕಾಶ್‌ ತೂಮಿನಾಡು ಅವರು ಶ್ರೀಮದ್‌ ಅನಂತೇಶ್ವರ ದೇವಸ್ಥಾನ ಮಂಜೇಶ್ವರದಲ್ಲಿ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಖ್ಯಾತ ಕಲಾವಿದರಾದ ಪದ್ಮನಾಭ ತೂಮಿನಾಡು, ಸುನಿಲ್‌ ಕುಮಾರ್‌ ಬಾಯಿಕಟ್ಟೆ, ಸಾಹಿತಿ ಮೌನೇಶ್‌ ಆಚಾರ್ಯ ಕಡಂಬಾರ್‌, ಮನೋಹರ್‌ ಕಲಾಯಿ, ನಾಯಕ ನಟ ಪ್ರಣಮ್‌ ರೈ ಕೋಡಿಬೈಲ್‌, ನಟಿ ಸಂಜಿತಾ ಶೆಟ್ಟಿಗಾರ್‌, ನಯನ್‌ ಕಾಸರಗೋಡು, ವಸಂತ್‌ ಕಾಯತ್ತೋìಡಿ, ಚರಣ್‌ ಮೂರ್ನಾಡ್‌, ಪ್ರವೀಣ್‌ ಬಂದ್ಯೋಡು, ಹರೀಶ್‌ ತಚ್ಚಣಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next