Advertisement
ಒಟ್ಟು 110 ಭಾಷೆಗಳನ್ನು ಗೂಗಲ್ ಟ್ರಾನ್ಸ್ ಲೇಟ್ ಸೇವಾ ಪಟ್ಟಿಗೆ ಸೇರಿಸಿರುವುದಾಗಿ ಗೂಗಲ್ ಜೂ.27ರಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ.
Related Articles
Advertisement
ಹೇಗೆ ಸೇರ್ಪಡೆ?ನ್ಯಾಚುರಲ್ ಲ್ಯಾಂಗೇÌಜ್ ಪ್ರಾಸೆಸಿಂಗ್ ಆಧಾರದಲ್ಲಿ ಗೂಗಲ್‌ನಲ್ಲಿ ಭಾಷೆಗಳನ್ನು ಸೇರಿಸಲಾಗುತ್ತದೆ. ಇದರಲ್ಲಿ ಎರಡು ವಿಧಗಳಿವೆ- ರೂಲ್ ಬೇಸ್ಡ್ ಹಾಗೂ ಸ್ಟಾಟಿಸ್ಟಿಕಲ್ ಬೇಸ್ಡ್. ಸ್ಟಾಟಿಸ್ಟಿಕಲ್ ಬೇಸ್ ಆಗಿದ್ದರೆ ಅದಕ್ಕೆ ಅಗಾಧವಾದ ಸಾಮಗ್ರಿ(ಕಾರ್ಪಸ್) ಬೇಕಾಗುತ್ತದೆ. ನಾಮಪದ, ಕ್ರಿಯಾಪದ ಇತ್ಯಾದಿ ಸೇರಿಕೊಂಡು ಸುಮಾರು 20 ಲಕ್ಷದಷ್ಟು ವಾಕ್ಯಗಳ ಅನುವಾದವನ್ನು ಮೆಷಿನ್ ಲರ್ನಿಂಗ್‌ಗೆ ಪೂರಕವಾಗಿ ಫೀಡ್ ಮಾಡಲಾಗುತ್ತದೆ. ಬಳಿಕ ಇದನ್ನು ಮೆಷಿನ್ ಅರಿತುಕೊಂಡು ಭಾಷಾಂತರ ಮಾಡುತ್ತದೆ. ಇದನ್ನು ಬಳಕೆ ಮಾಡಿಕೊಂಡಷ್ಟೂ ಸುಧಾರಣೆಯಾಗುತ್ತಾ ಹೋಗುತ್ತದೆ. ತುಳು ಸೇರ್ಪಡೆಯಿಂದ ಮುಂದೆ ವಿಕಿಪೀಡಿಯಾ ಟ್ರಾನ್ಸ್‌ಲೇಷನ್‌ಗೆ ಬೇಕಾದ ಟೂಲ್‌ಗಳಿಗೂ ತುಳು ಬರಬಹುದು. ಸದ್ಯ ಕನ್ನಡದ್ದು ಮಾತ್ರವಿದೆ. ಇದರಿಂದ ತುಳು ಭಾಷಾಂತರ ಇನ್ನಷ್ಟು ಸಮೃದ್ಧಗೊಳ್ಳಲಿದೆ ಎನ್ನುತ್ತಾರೆ ಪವನಜ. ಪ್ರಸ್ತುತ ತುಳು ಭಾಷಾಂತರ ತುಸು ಕಚ್ಚಾ ರೂಪದಲ್ಲೇ ಇದೆ. ಕೆಲವು ತಪ್ಪುಗಳಿದ್ದು, ಇವು ಸುಧಾರಣೆಯಾಗಬೇಕಾದರೆ ನಾವು ಫೀಡ್‌ಬ್ಯಾಕ್ ವಿಭಾಗದಲ್ಲಿ ಸರಿಯಾದ ಆಯ್ಕೆಗಳನ್ನು ತೋರಿಸಬೇಕು. ಬದಲು ಅದನ್ನು ಸ್ಕ್ರೀನ್‌ಶಾಟ್ ತೆಗೆದು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಿ ಪ್ರಯೋಜನವಿಲ್ಲ. ಪ್ರಸ್ತುತ ಟ್ರಾನ್ಸ್‌ಲೇಟ್ ಸೇವೆ ವೆಬ್‌ನಲ್ಲಿ ಮಾತ್ರವೇ ಲಭ್ಯವಿದೆ. ಗೂಗಲ್ ಟ್ರಾನ್ಸ್ ಲೇಟ್ ಆ್ಯಪ್‌ಗೆ ಬಂದಿಲ್ಲ. ಆದರೆ ಮುಂದೆ ಇದೂ ಬರಬಹುದು.
-ಯು.ಬಿ.ಪವನಜ,
ಮಾಹಿತಿ ತಂತ್ರಜ್ಞಾನ ತಜ್ಞರು ಗೂಗಲ್ ಟ್ರಾನ್ಸ್‌ಲೇಟರ್‌ನಲ್ಲಿ ತುಳು ಸೇರ್ಪಡೆಗೊಂಡಿರುವುದು ತುಳು ಭಾಷೆಗೆ ಜಾಗತಿಕವಾಗಿ ಸಂದ ಗೌರವವಾಗಿದ್ದು, ತುಳುವರು ಸಂಭ್ರಮಪಡುವ ಸಂಗತಿ. ಗೂಗಲ್ ಟ್ರಾನ್ಸ್ ಲೇಟರ್‌ನಲ್ಲಿ ಕೆಲವು ಸಂದರ್ಭದಲ್ಲಿ ಶಬ್ದಗಳು ತಪ್ಪಾಗಿ ಉಲ್ಲೇಖವಾಗುವುದು ಸಾಮಾನ್ಯ ವಿಚಾರ. ಇಂತಹ ಸಂದರ್ಭಗಳಲ್ಲಿ ಅಲ್ಲೇ ಇರುವ ಫೀಡ್ ಬ್ಯಾಕ್ ಕಾಲಂನಲ್ಲಿ ಸರಿಯಾದ ಶಬ್ದವನ್ನು ಉಲ್ಲೇಖೀಸಿ ಪ್ರತಿಕ್ರಿಯಿಸಿದರೆ ಗೂಗಲ್ ಅದನ್ನು ಮುಂದಕ್ಕೆ ಸರಿ ಮಾಡಿಕೊಳ್ಳುವುದು. ಈ ಅಂಶವನ್ನು ತುಳುವರು ಸಮರ್ಪಕವಾಗಿ ಬಳಸಿಕೊಂಡರೆ ತುಳುವರಿಗೆ ಹಾಗೂ ತುಳುವೇತರರಿಗೂ ಪ್ರಯೋಜನವಾಗಲಿದೆ.
-ತಾರಾನಾಥ್ ಗಟ್ಟಿ ಕಾಪಿಕಾಡ್,
ಅಧ್ಯಕ್ಷ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ