Advertisement

ಇಂದು ತುಳಸೀ ಪೂಜೆ; ನೆಲ್ಲಿ, ಕಬ್ಬಿನ ಕುಡಿ, ಹೂ ಮಾರಾಟ

12:05 AM Nov 09, 2019 | Sriram |

ಉಡುಪಿ: ಶ್ರೀಕೃಷ್ಣಮಠವೂ ಸೇರಿದಂತೆ ನಾಡಿನಾದ್ಯಂತ ತುಳಸೀಪೂಜೆ, ಕ್ಷಿರಾಬ್ದಿ ಪೂಜೆ ಶನಿವಾರ ನಡೆಯಲಿದೆ.

Advertisement

ಶನಿವಾರ ಉತ್ಥಾನದ್ವಾದಶಿಯಾದ ಕಾರಣ ಬೆಳಗ್ಗೆ ಬೇಗ ಪೂಜೆಗಳು ನಡೆ ಯುತ್ತವೆ. ಕೆಲವೆಡೆ ಶುಕ್ರವಾರ ಸಂಜೆ ತುಳಸೀ ಪೂಜೆ ನಡೆಯಿತು.

ಶ್ರೀಕೃಷ್ಣಮಠದಲ್ಲಿ ಶನಿವಾರ ಸಂಜೆ ಲಕ್ಷದೀಪೋತ್ಸವ ಜರಗಲಿದೆ. ಇದೇ ದಿನ ಮಧ್ವಸರೋವರದ ಮಧ್ಯದ ಮಂಟಪದಲ್ಲಿ ಕ್ಷೀರಾಬ್ದಿ ಪೂಜೆ, ತುಳಸೀ ವಿವಾಹ ಸಂಪ್ರದಾಯ ನಡೆದ ಬಳಿಕ ಉತ್ಸವ ಮೂರ್ತಿಗಳನ್ನು ಹೊರತರಲಾಗುತ್ತಿದೆ. ಶ್ರೀಕೃಷ್ಣಮಠ ಮತ್ತು ನಾಡಿನಲ್ಲಿ ಉತ್ಸವಗಳ ಋತು ಆರಂಭವಾಗುವುದು ಇದೇ ದಿನ. ಮೊದಲ ಮೂರು ದಿನ ವಾಡಿಕೆಯ ಲಕ್ಷದೀಪೋತ್ಸವವಾದರೆ, ಮತ್ತೆರಡು ದಿನ ಸೇವಾದಾರರಿಂದ ನಡೆಯುತ್ತದೆ.

ಜನರು ಕಡಿಮೆ ಸಂಖ್ಯೆಯಲ್ಲಿ ಬರುತ್ತಿ ದ್ದಾರೆ. ನಮಗಿದು ಲಾಭದಾಯಕ ವಾಗುತ್ತಿಲ್ಲ ಎಂದು ಹೂವು ಮಾರಾಟ ಮಾಡುವವರು ಹೇಳಿದ್ದಾರೆ.

ವಿವಿಧ ವಸ್ತುಗಳ ಮಾರಾಟ
ರಥಬೀದಿಯ ಸುತ್ತಲೂ ದೂರದ ಊರುಗಳಿಂದ ಬಂದ ಮಾರಾಟಗಾರರು ಕಂಡು ಬಂದರು. ನೆಲ್ಲಿಕುಡಿ, ಕಬ್ಬಿನ ಕುಡಿ, ವಿವಿಧ ಹೂವುಗಳು ಮಾರಾಟವಾದವು. ನೆಲ್ಲಿಕುಡಿ, ಕಬ್ಬಿನ ಕುಡಿಗೆ ತಲಾ 30 ರೂ. ಇತ್ತು. ಸೇವಂತಿಗೆ, ಕಾಕಡ, ಕೆಂಪು ಸೇವಂತಿಗೆ ಹೂವುಗಳು ಮಾರಿಗೆ 50ರಿಂದ 60 ರೂ.ಗೆ ಮಾರಾಟಗೊಂಡವು. ದೀಪ ಉರಿಸಲೋಸುಗ ಬಿಡಿ ನೆಲ್ಲಿಕಾಯಿಗಳೂ ಮಾರಾಟವಾದವು. ಎರಡು ದಿನಗಳ ಹಿಂದೆ ಹೂವಿನ ದರ ಮಾರಿಗೆ 100 ರೂ. ಇತ್ತು. ಹಾಸನ, ಸಕಲೇಶಪುರ, ಚಿಕ್ಕಮಗಳೂರು ಮೊದಲಾದೆಡೆಗಳಿಂದ ಸುಮಾರು ಮೂರು ಲಾರಿಗಳಲ್ಲಿ ಹೂವುಗಳು ಬಂದಿವೆ. ಇವುಗಳಲ್ಲಿ ಕೆಲವು ಮಾರಾಟಗಾರರು ಸ್ವತಃ ಬೆಳೆಗಾರರೂ ಆಗಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next