Advertisement

ತುಳಸೀ ದಳ ಪೂಜನೀಯ, ಔಷಧೀಯ

06:33 PM Dec 17, 2019 | mahesh |

ಹಿಂದೂಗಳ ಪಾಲಿಗೆ ತುಳಸಿ, ಪವಿತ್ರ ಸಸ್ಯ. ಪ್ರತಿ ಮನೆಯಂಗಳದಲ್ಲೂ ಇರುವ, ಪ್ರತಿ ದಿನವೂ ಪೂಜಿಸಲ್ಪಡುವ ಈ ಗಿಡ ಅನೇಕ ಔಷಧೀಯ ಗುಣಗಳನ್ನೂ ಹೊಂದಿದೆ.

Advertisement

– ತೆಂಗಿನೆಣ್ಣೆಗೆ ನಾಲ್ಕಾರು ತುಳಸಿ ಎಲೆಗಳನ್ನು ಹಾಕಿ ಕುದಿಸಿ, ಕೂದಲಿನ ಬುಡಕ್ಕೆ ಹಚ್ಚಿ ಮಸಾಜ್‌ ಮಾಡಿದರೆ ಹೊಟ್ಟು ನಿವಾರಣೆಯಾಗುತ್ತದೆ.

-ತುಳಸಿ ಎಲೆಗಳಿಂದ ಪೇಸ್ಟ್ ತಯಾರಿಸಿ, ತಲೆಗೆ ಹಚ್ಚಿ 2-3 ಗಂಟೆ ನಂತರ ಸ್ನಾನ ಮಾಡಿದರೆ, ಬಿಳಿಗೂದಲನ್ನು ಸ್ವಲ್ಪ ಮಟ್ಟಿಗೆ ತಡೆಯಬಹುದು.

-ತುಳಸಿ ಎಲೆಗಳನ್ನು ಅರೆದು, ತಲೆಗೆ ಹಚ್ಚುವುದು ಕೂದಲಿನ ಆರೋಗ್ಯಕ್ಕೆ ಒಳ್ಳೆಯದು.

-ತುಳಸಿ ಎಲೆಯ ಪೇಸ್ಟ್‌ ಜೊತೆ ಕಡಲೆ ಹಿಟ್ಟು ಅಥವಾ ಹೆಸರು ಹಿಟ್ಟನ್ನು ಹಾಕಿ ಚೆನ್ನಾಗಿ ಕಲಸಿ, ಶ್ಯಾಂಪೂವಿನಂತೆ ಬಳಸಿದರೆ ಕೂದಲಿನ ಹೊಳಪು ಹೆಚ್ಚುತ್ತದೆ.

Advertisement

-ತುಳಸಿ ಪೇಸ್ಟ್‌ನ ಜೊತೆ ಜೇನು ಮತ್ತು ಮೊಸರನ್ನು ಕಲಸಿ ಹಚ್ಚಿದರೆ ಮೊಡವೆಗಳು ಮಾಯವಾಗುತ್ತವೆ.

-ತುಳಸಿ ಪೇಸ್ಟ್‌ನ ಜೊತೆ ರೋಸ್‌ ವಾಟರ್‌ ಅನ್ನು ಸೇರಿಸಿ, ಫೇಸ್‌ಪ್ಯಾಕ್‌ ಮಾಡಿಕೊಂಡರೆ ಮುಖದ ಕಾಂತಿ ಹೆಚ್ಚುತ್ತದೆ.

-ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಎರ್ಡಮೂರು ತುಳಸಿ ಎಲೆಗಳನ್ನು ತಿಂದರೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.

-ಬಾಯಿ ಹುಣ್ಣಾದಾಗ ತುಳಸಿ ಎಲೆ ಜಗಿದರೆ ನೋವು ಶಮನವಾಗುವುದು.

– ತುಳಸಿ ಎಲೆಯನ್ನು ನೀರಿನಲ್ಲಿ ಕುದಿಸಿ, ಆ ನೀರಿನಿಂದ ಬಾಯಿ ಮುಕ್ಕಳಿಸಿದರೆ ಬಾಯಿಯ ದುರ್ಗಂಧ ಕಡಿಮೆಯಾಗುತ್ತದೆ.

-ತುಳಸಿ ರಸ ಹಾಗೂ ಜೇನುತುಪ್ಪವನ್ನು ಸಮ ಪ್ರಮಾಣದಲ್ಲಿ ಬೆರೆಸಿ, ಸೇವಿಸಿದರೆ ಜೀರ್ಣಶಕ್ತಿ ಸರಾಗವಾಗುತ್ತದೆ.

– ಪುಷ್ಪ ಎನ್‌.ಕೆ. ರಾವ್‌

Advertisement

Udayavani is now on Telegram. Click here to join our channel and stay updated with the latest news.

Next