Advertisement

ಮಣ್ಣಿನ ಬದುಕೇ ತುಳು ಸಿರಿ: ವೀಣಾ ಟಿ. ಶೆಟ್ಟಿ

11:39 PM Jul 10, 2019 | Sriram |

ಕೊಡಿಯಾಲಬೈಲ್‌: ಮಣ್ಣು ಆರೋಗ್ಯ ಕೊಡುತ್ತದೆ. ಸಂಪತ್ತು ಸಮಾಧಾನ ಕೊಡುತ್ತದೆ. ಸತ್ಯದ ಸಾಕ್ಷಿ ಯಾಗಿರುವ ಆಯುರ್ವೇದ ಶಕ್ತಿಯಿರುವ ತುಳುನಾಡಿನ ಮಣ್ಣಿನ ಬದುಕೇ ತುಳು ಸಿರಿ ಎಂದು ಎಂಆರ್‌ಪಿಎಲ್‌ ಉದ್ಯಮ ಸಂಸ್ಥೆಯ ಚೀಫ್‌ ಮ್ಯಾನೇಜರ್‌ ವೀಣಾ ಟಿ. ಶೆಟ್ಟಿ ಹೇಳಿದರು.

Advertisement

ಸಂತ ಅಲೋಶಿಯಸ್‌ ಕಾಲೇಜು ಸಮುದಾಯ ಬಾನುಲಿ ರೇಡಿಯೋ ಸಾರಂಗ್‌ನ ದಶಮಾನೋತ್ಸವದ ಅಂಗ ವಾಗಿ ಅಗೋಳಿ ಮಂಜಣ ಜಾನಪದ ಕೇಂದ್ರ ಜ್ಞಾನ ಶಕ್ತಿ, ಸುಬ್ರಮಣ್ಯ ದೇವಸ್ಥಾನ ಪಾವಂಜೆ, ಸುರತ್ಕಲ್‌ ಗೋವಿಂದ ದಾಸ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ ಆಶ್ರಯದಲ್ಲಿ ನಡೆದ “ತುಳು ಸಿರಿ ತುದೆ ಬರಿ’ ಕಾರ್ಯಕ್ರಮದಲ್ಲಿ ಅವರು ಮಾತ ನಾಡಿದರು.

ನಮ್ಮ ಹಿರಿಯರು ಕೃಷಿಯಿಂದಲೇ ಬದುಕು ಕಟ್ಟಿಕೊಂಡವರು. ನಿಜವಾದ ತುಳು ಸಿರಿ ಎಂದರೆ ಅದು ಮಣ್ಣಿನ ಬದುಕು, ಬೆವರಿನ ಬದುಕು ಎಂದವರು ಅಭಿಪ್ರಾಯಪಟ್ಟರು.

ಭೂಮಿ ಪೂಜೆ
ಮಾಜಿ ಸಚಿವ ಅಭಯಚಂದ್ರ ಜೈನ್‌ ಉದ್ಘಾಟಿಸಿದರು. ಜ್ಞಾನ ಶಕ್ತಿ ಸುಬ್ರಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರ ಶಶೀಂದ್ರ ಕುಮಾರ್‌ ಭೂಮಿ ಪೂಜೆ ನೆರವೇರಿಸಿದರು. ತುಳು ಕೂಟ ಕುಡ್ಲದ ಅಧ್ಯಕ್ಷ ಬಿ. ದಾಮೋದರ ನಿಸರ್ಗ ಅಧ್ಯಕ್ಷತೆ ವಹಿಸಿದ್ದರು. ಸಂತ ಅಲೋಶಿಯಸ್‌ ಪ.ಪೂ. ಕಾಲೇಜಿನ ಆರ್ಥಿಕ ನಿರ್ವಾಹಣಾಧಿಕಾರಿ ವಂ| ವಿನೋದ್‌ ಪೌಲ್‌ ಆಶೀರ್ವಚನ ನೀಡಿದರು. ನ್ಯಾಯವಾದಿ ಮಧುಕರ ಅಮೀನ್‌, ಗೋವಿಂದದಾಸ ಕಾಲೇಜಿನ ಪ್ರಾಂಶುಪಾಲ ಪ್ರೊ| ಶಿವಶಂಕರ ಭಟ್‌, ಕಡಂಬೋಡಿ ಮಹಾಬಲ ಪೂಜಾರಿ, ಹಳೆಯಂಗಡಿ ಗ್ರಾ.ಪಂ. ಅಧ್ಯಕ್ಷೆ ಜಲಜಾ ಪಾಣಾರ, ಮಾಜಿ ಅಧ್ಯಕ್ಷ ವಸಂತ ಬೆರ್ನಾಡ್‌ ಉಪಸ್ಥಿತರಿದ್ದರು.

ಸಮ್ಮಾನ
ವಿಜಯ್‌ ಕುಮಾರ್‌ ಕುಬೆವೂರು, ಯಶೋಧರ ಸಾಲ್ಯಾನ್‌, ಭಾಸ್ಕರ ಸಾಲ್ಯಾನ್‌, ಕೆ.ಕೆ. ಪೇಜಾವರ, ಧರ್ಮ ಪಾಲ್‌ ಎಂ.ಟಿ. ಸಂಯೋಜಿಸಿದ್ದರು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ್‌ ನಾಣಿಲ್‌, ಆದರ್ಶ ಕೃಷಿ ಸಾಧಕಿ ವಸಂತಿ ದೇವಾಡಿಗ, ರಾಷ್ಟ್ರೀಯ ಸೇವಾ ಯೋಜನ ಸಂಯೋಜಕಿ ಪ್ರತೀಕ್ಷಾ ಅವರನ್ನು ಅಭಿನಂದಿಸಲಾಯಿತು. ಕೇಂದ್ರದ ಅಧ್ಯಕ್ಷ ಡಾ| ಗಣೇಶ್‌ ಅಮೀನ್‌ ಸಂಕಮಾರ್‌ ಸ್ವಾಗತಿಸಿದರು. ಜಯಂತಿ ಸಂಕಮಾರ್‌ ವಂದಿಸಿದರು. ಅನು ಸಂಕಮಾರ್‌ ಸಹಕರಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next