Advertisement

ಶ್ರೀಕೃಷ್ಣಮಠದಲ್ಲಿ ತುಳಸೀ ಸಂಕೀರ್ತನೆ ರಂಗು

12:46 AM Oct 17, 2019 | Sriram |

ಉಡುಪಿ: ಶ್ರೀ ಕೃಷ್ಣ ಮಠ ಪರ್ಯಾಯ ಶ್ರೀ ಪಲಿಮಾರು ಮಠದ ಆಶ್ರಯದಲ್ಲಿ ಈಗ ಪ್ರತಿನಿತ್ಯ ಅಪರಾಹ್ನ ವಿಶಿಷ್ಟ ಕುಣಿತದ ತುಳಸೀ ಸಂಕೀರ್ತನೆ ಸ್ಪರ್ಧೆ ನಡೆಯುತ್ತಿದೆ.

Advertisement

ಕಾರ್ತಿಕ ಮಾಸದಲ್ಲಿ ನಡೆಯುವ ಈ ವಿಶಿಷ್ಟ ಸಂಕೀರ್ತನೆಯ ಸ್ಪರ್ಧೆ ತುಳು ಶಿವಳ್ಳಿ ಮಾಧ್ವ ಮಹಾಮಂಡಲದವರ ಆಯೋಜನೆಯಲ್ಲಿ ಮಧ್ವಮಂಟಪದಲ್ಲಿ ನಡೆಯುತ್ತಿದೆ. ಭಕ್ತಿ, ಸಂಸ್ಕೃತಿ, ಸಂಗೀತ, ನರ್ತನ ಇವುಗಳ ಸಾಂಸ್ಕೃತಿಕ ಮಿಶ್ರಣ ಇಲ್ಲಿ ಕಂಡು ಬರುತ್ತಿದೆ.

ಈ ಭಜನೆ ಶೈಲಿ ಶ್ರೀವಾದಿರಾಜ ಸ್ವಾಮಿಗಳ ಕಾಲದಲ್ಲಿ ಬೆಳೆದು ಬಂದ ಕಾರಣವೇ ಅವರು ರಚಿಸಿದ ಹಾಡುಗಳನ್ನು ವಿಶೇಷವಾಗಿ ಹಾಡಲಾಗುತ್ತಿದೆ. ಕಾರ್ತಿಕ ಮಾಸದಲ್ಲಿ ತುಳಸೀಪೂಜೆಯ ಸಂಕೇತವಾಗಿ ತುಳಸೀದಾಮೋದರನನ್ನು ಪ್ರಾರ್ಥಿಸುವ ಪದ್ಧತಿ ಇದೆ. ಆಗ ಹಾಡುವ ಈ ನರ್ತನವನ್ನು ಈಗ ಸ್ಪರ್ಧೆ ರೂಪದಲ್ಲಿ ಕಾಣಬಹುದು.

ಉತ್ತಮ ಪ್ರತಿಕ್ರಿಯೆ
ತುಳಸೀ ಸಂಕೀರ್ತನೆ ಪದ್ಧತಿ ಪ್ರಾಚೀನವಾದುದು. ಶ್ರೀಕೃಷ್ಣ, ದೇವಕಿ ಜತೆ ತುಳಸಿ ದೇವಿಯನ್ನೂ ಪೂಜಿಸುವ, ಪ್ರಾರ್ಥಿಸುವ ಕ್ರಮ ಇದಾಗಿದೆ. ಈ ಸಂಸ್ಕೃತಿಯನ್ನು ಮುಂದಿನ ಪೀಳಿಗೆಯೂ ಮುಂದು ವರಿಸಿಕೊಂಡು ಹೋಗಬೇಕೆಂಬ ಇರಾದೆಯಿಂದ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ನೃತ್ಯ ಗೊತ್ತಿರುವ ತಂಡದವರಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ.
– ಅರವಿಂದ ಆಚಾರ್ಯ, ವಾದಿರಾಜ ಆಚಾರ್ಯ, ತುಳು ಶಿವಳ್ಳಿ ಮಾಧ್ವ ಮಹಾಮಂಡಲದ ಪ್ರಮುಖರು

ಅ. 20ರ ವರೆಗೆ ಸ್ಪರ್ಧೆ
ಒಂದೊಂದು ಹಾಡನ್ನು ಹಲವು ಬಗೆಯ ಹೆಜ್ಜೆಗಳಲ್ಲಿ ಹಾಡಿ ನರ್ತಿಸಬಹುದು. ಸ್ಪರ್ಧೆಯಲ್ಲಿ ಮಹಿಳೆಯರು, ಪುರುಷರು, ಮಕ್ಕಳು ಎಂದು ವಿಭಾಗಗಳನ್ನು ಮಾಡಲಾಗಿದೆ. ಅ. 14ರಂದು ಆರಂಭಗೊಂಡ ಸ್ಪರ್ಧೆ 20ರ ವರೆಗೆ ನಡೆಯುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next