Advertisement

ಟ್ಯೂಷನ್‌ ಸೆಂಟರ್‌

05:10 AM Jun 08, 2020 | Lakshmi GovindaRaj |

ಹೆಚ್ಚಿನ ಬಂಡವಾಳವನ್ನು ಬೇಡದ, ಯಾವುದೇ ಬಗೆಯ ಯಂತ್ರ, ತಂತ್ರಜ್ಞಾನಗಳ ಬಗ್ಗೆ ತಲೆಕೆಡಿಸಿ ಕೊಳ್ಳದೆ ಶುರು ಮಾಡಬಹುದಾದ ಉದ್ಯಮ ಎಂದರೆ- ಟ್ಯೂಷನ್‌ ಸೆಂಟರ್‌ ತೆರೆಯುವುದು. ಇಂದು ಹೆಚ್ಚಿನ ಟ್ಯೂಷನ್‌ ಸೆಂಟರ್‌ಗಳು  ಮನೆಯಲ್ಲೇ ನಡೆಸಲ್ಪಡುತ್ತಿವೆ. ಹೀಗೆ ಮಾಡುವುದರಿಂದ, ಆ ಜಾಗಕ್ಕೆ ಎಕ್ಸ್‌ ಟ್ರಾ ಬಾಡಿಗೆ, ಪೀಠೊಪಕರಣ ಹಾಕಬೇಕಾದ ಖರ್ಚು ಉಳಿಯುತ್ತದೆ. ಟ್ಯೂಷನ್‌ ತೆರೆಯಲು ಬೇಕಾಗುವ ಮುಖ್ಯ ಬಂಡವಾಳ ಎಂದರೆ, ಜ್ಞಾನ. ಕ್ಲಿಷ್ಟಕರ  ವಿಷಯಗಳನ್ನೂ ಮಕ್ಕಳಿಗೆ ಸುಲಭವಾಗಿ ಅರ್ಥ ಮಾಡಿಸಬಲ್ಲ ಸಾಮರ್ಥ್ಯ.

Advertisement

ಇದರಿಂದ, ಬಾಯಿಂದ ಬಾಯಿಗೆ ಮಾತು ಹರಡಿ, ಟ್ಯೂಷನ್‌ಗೆ ಸೇರುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಹಚ್ಚಳ ಕಂಡೀತು. ತುರುಸಿನ ಪೈಪೋಟಿಯ ಈ ದಿನಗಳಲ್ಲಿ,  ಶೈಕ್ಷಣಿಕವಾಗಿ ಮಕ್ಕಳು ಪ್ರಗತಿ ಹೊಂದಬೇಕೆಂದು, ಹೆತ್ತವರು ಬಯಸುತ್ತಿದ್ದಾರೆ. ಇದರಿಂದಾಗಿಯೇ ಟ್ಯೂಷನ್‌ಗಳಿಗೆ ಪ್ರಾಮುಖ್ಯತೆ ಹೆಚ್ಚಿರುವುದು. ಟ್ಯೂಷನ್‌ ಸೆಂಟರ್‌ಗಳು ಚೆನ್ನಾಗಿ ಕಾರ್ಯನಿರ್ವಹಿ ಸಿದಲ್ಲಿ, ಇದೊಂದು ಲಾಭದಾಯಕ ಇದೊಂದು ಕ್ಷೇತ್ರ ಆಗಬಹುದು.

Advertisement

Udayavani is now on Telegram. Click here to join our channel and stay updated with the latest news.

Next