Advertisement
ಜನರು ಬದುಕಿನ ಬಗ್ಗೆ ಗ್ಯಾರಂಟಿ ಕಳೆದುಕೊಂಡಿದ್ದಾರೆ. ಈ ಸರಕಾರದಲ್ಲಿ ಶಾಂತಿ, ನೀರು, ಮಹಿಳೆಯರ ಮಾನಪ್ರಾಣ, ರೈತರ ಬದುಕು, ಭಾವನೆ ಯಾವುದಕ್ಕೂ ಗ್ಯಾರಂಟಿ ಇಲ್ಲದಂತಾಗಿದೆ. ಗಲಭೆಕೋರರು, ಭಯೋತ್ಪಾದಕರಿಗೆ ರಕ್ಷಣೆಯ ಗ್ಯಾರಂಟಿ ಸಿಗುತ್ತಿದೆ. ವಿದ್ಯುತ್ ದರ ಏರಿಕೆಯ ಗ್ಯಾರಂಟಿ, ವಿವಿಧ ತೆರಿಗೆ ಹೆಚ್ಚಳದ ಗ್ಯಾರಂಟಿ ನೀಡುತ್ತಿದೆ ಎಂದು ದೂರಿದರು.
Related Articles
Advertisement
ಶಿವಮೊಗ್ಗದಲ್ಲಿ ಔರಂಗಜೇಬ್ ದ್ವಾರ ನಿರ್ಮಾಣ, ಕೋಲಾರದಲ್ಲಿ ತಲವಾರ್ ಪ್ರದರ್ಶನ, ಹನುಮಾನ್ ಚಾಲೀಸಾ ಬಿತ್ತರಿಸಿದ ಯುವಕನಿಗೆ ಥಳಿಸಿದವರನ್ನು ಬಿಟ್ಟು ರಾಮಮಂದಿರ ಕರಸೇವಕರ ಮೇಲೆ ಪ್ರಕರಣ ದಾಖಲಿಸಿದ್ದನ್ನು ಗಮನಸಿದರೆ ರಾಜ್ಯ ಸರಕಾರದ ಆಡಳಿತ ವೈಖರಿ ತಿಳಿಯುತ್ತದೆ. ಮಂಡ್ಯದಲ್ಲಿ ಕೇಸರಿ ಧ್ವಜವನ್ನು ಪೊಲೀಸ್ ಬಲ ಪ್ರಯೋಗಿಸಿ ಕೆಳಗಿಳಿಸಿ ದರು. ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದವರ ಮೇಲೆ ಕ್ರಮ ಕೈಗೊಳ್ಳÛದೆ ಇರುವುದನ್ನು ನೋಡಿದರೆ ಸಿಎಂ ಸಿದ್ದರಾಮಯ್ಯರ ಆದ್ಯತೆಗಳು ಯಾವುವು ಎಂಬುದು ಗೊತ್ತಾಗುತ್ತಿದೆ.
ಜಾಹೀರಾತಿನಿಂದ ಮನವೊಲಿಸುವ ಭ್ರಮೆಸಿದ್ದರಾಮಯ್ಯ ಸರಕಾರ ದಿವಾಳಿ ಆಗಿದೆ. ಜನಹಿತ ಮರೆತು ತುಘಲಕ್ ದರ್ಬಾರ್ ನಡೆಸುತ್ತಿರುವ ಸರಕಾರಕ್ಕೆ ಜನರೇ ಛೀಮಾರಿ ಹಾಕುತ್ತಿದ್ದಾರೆ. ಕಾಂಗ್ರೆಸ್ ಜಾಹೀರಾತು ಮೂಲಕ ಜನರ ಮನವೊಲಿಸುವ ಭ್ರಮೆಯಲ್ಲಿದೆ. ಆದರೆ ಅದರಿಂದ ಏನೂ ಪ್ರಯೋಜನವಿಲ್ಲ ಎಂದರು. ಹಿಂದೂಗಳನ್ನು ಬೆದರಿಸಿ ಚುನಾವಣೆ: ಡಿವಿಎಸ್
ಮಾಜಿ ಸಿಎಂ ಡಿ.ವಿ. ಸದಾನಂದ ಗೌಡ ಮಾತನಾಡಿ, ರಾಜ್ಯದಲ್ಲಿ ಈ ಬಾರಿ ಚುನಾವಣೆಯು ಒಂದು ರೀತಿಯಲ್ಲಿ ಭಯೋತ್ಪಾದಕರ ವಿರುದ್ಧ ಮತ್ತು ಹಿಂದೂ ಧಾರ್ಮಿಕ ವಿಚಾರಗಳನ್ನು ಅನುಷ್ಠಾನ ಮಾಡುವ ಪ್ರಾಮಾಣಿಕ ಮತ್ತು ಸಾಮಾನ್ಯ ಕಾರ್ಯಕರ್ತರ ವಿರುದ್ಧದ ಹೋರಾಟದಂತೆ ಕಾಣುತ್ತಿದೆ. ಸಿದ್ದರಾಮಯ್ಯ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಹಿಂದೂಗಳನ್ನು ತೃತೀಯ ದರ್ಜೆ ನಾಗರಿಕರಂತೆ ನೋಡುವ ಅತ್ಯಂತ ಕೆಟ್ಟ ವಾತಾವರಣ ನಿರ್ಮಾಣವಾಗಿದೆ. ಮುಸ್ಲಿಂ ಭಯೋತ್ಪಾದಕರು, ಗೂಂಡಾಗಳೇ ಕಾಂಗ್ರೆಸ್ ಪರವಾಗಿ ನಿಂತರೆ, ಅವರ ಪರವಾಗಿ ಸಿಎಂ, ಡಿಸಿಎಂ ನಿಲ್ಲುತ್ತಿದ್ದಾರೆ. ವಿಶ್ವಮಾನವ ಸಂದೇಶ ಸಾರಿದ ಕುವೆಂಪು ನಾಡಿನಲ್ಲಿ ಚುನಾವಣೆ ನಡೆಸುವುದೇ ಗೂಂಡಾಗಳ ಮೂಲಕ, ಬೆದರಿಕೆ ತಂತ್ರದ ಮೂಲಕ ಎನ್ನುವಂತೆ ಮಾಡಿದ್ದಾರೆ. ಹಿಂದೂಗಳು ಮತ ಹಾಕಲು ಮನೆಯಿಂದ ಹೊರ ಬಾರದಂತೆ ಭಯದ ವಾತಾವರಣ ಸೃಷ್ಟಿಸುತ್ತಿದ್ದಾರೆ. ಇದಕ್ಕೆ ಜನ ತಕ್ಕ ಉತ್ತರ ಕೊಡುತ್ತಾರೆ. ಮತಾಂಧತೆಯ ಪರಾಕಾಷ್ಠೆ ತಲುಪಿದವರು, ಗೂಂಡಾಗಳಿಗೆ ಗ್ಯಾರಂಟಿ ಸಿಗುತ್ತಿದೆ. ಈ ಪರಿಸ್ಥಿತಿಗಳನ್ನು ಜನ ಅರ್ಥ ಮಾಡಿಕೊಳ್ಳುತ್ತಾರೆ. ಈ ದೇಶದಲ್ಲಿ ಎಲ್ಲರಿಗೂ ಭವಿಷ್ಯದ ಭರವಸೆಯ ಜೀವನ ಕೊಡುವುದೇ ನನ್ನ ಉದ್ದೇಶ ಎಂದು ನಿನ್ನೆ ಮೋದಿ ಹೇಳಿದ್ದಾರೆ. ಸಿದ್ದರಾಮಯ್ಯ ಸರಕಾರ ಮುಂದುವರಿದರೆ ಹಿಂದೂಗಳಿಗೆ ರಕ್ಷಣೆ ಸಿಗದ ದಯನೀಯ ಸ್ಥಿತಿ ನಿರ್ಮಾಣ ಆಗಲಿದೆ. ಎಲ್ಲರಿಗೂ ರಕ್ಷಣೆ ಕೊಡುವ ಮೋದಿ ಸರಕಾರ ಬರಬೇಕು ಎಂದು ಹೇಳಿದರು.