Advertisement

ತುಕ್ಡೆ ಗ್ಯಾಂಗ್ ನ ಪ್ರಚೋದನೆಯಿಂದ ಕರ್ನಾಟಕದಲ್ಲಿ ಬೆಂಕಿ ಹತ್ತಿದೆ: ಸಿ.ಟಿ.ರವಿ

01:59 PM Dec 21, 2021 | Team Udayavani |

ಚಿಕ್ಕಮಗಳೂರು: ಕನ್ನಡ ಭಾವುಟ ಸುಟ್ಟು ಗಲಭೆ ಎಬ್ಬಿಸುವಂತಹ ಕೆಲಸ ಕಾಂಗ್ರೆಸ್ ಬೆಂಬಲಿತ ಕಾರ್ಯಕರ್ತರು ಮಾಡಿದ್ದಾರೆ. ಶಿವಾಜಿ ಪ್ರತಿಮೆಗೆ ಮಸಿ ಬಳಿದು ಮರಾಠಿಗರನ್ನು ಎತ್ತು ಕಟ್ಟುವ ಷಡ್ಯಂತ್ರ ನಡೆಸಿದರು, ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿರೂಪಗೊಳಿಸಿ ಕರ್ನಾಟಕದಲ್ಲಿ ಮರಾಠಿಗರು ಮತ್ತು ಕನ್ನಡಿಗರೆಂದು ಸಂಘರ್ಷ ಉಂಟು ಮಾಡುವ ಸಂಚು ಮಾಡಿದರು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೆಲ್ಲದರ ಹಿಂದೆ ಕಾಂಗ್ರೆಸ್ ಇದೆ. ಈಗ ಬಂಧನವಾಗಿರುವುದು ಕಾಂಗ್ರೆಸ್ ಬೆಂಬಲಿಗರು. ಬಂಧಿತರು ಡಿ.ಕೆ.ಶಿವಕುಮಾರ್ ಹಾಗೂ ಜಮೀರ್ ಖಾನ್ ಬೆಂಬಲಿಗರು. ತುಕ್ಡೆ ಗ್ಯಾಂಗ್ ನಲ್ಲಿದ್ದವರು ಕಾಂಗ್ರೆಸ್ ಸೇರಿಕೊಂಡಿದ್ದಾರೆ. ಅದು ಕನ್ನಯ್ಯ ಕುಮಾರ್ ಇರಬಹುದು, ಹಾರ್ಥಿಕ್ ಪಟೇಲ್ ಇರಬಹುದು. ತುಕ್ಡೆ ಗ್ಯಾಂಗ್ ನ ಪ್ರಚೋದನೆಯಿಂದ ಕರ್ನಾಟಕದಲ್ಲಿ ಬೆಂಕಿ ಹತ್ತಿದೆ ಎಂದು ಹೇಳಿದರು.

ಇದನ್ನೂ ಓದಿ:ಬೆಳಗಾವಿ:ಗೃಹ ಸಚಿವರಿಂದ ಶಿವಾಜಿ,ಬಸವೇಶ್ವರ ಮತ್ತು ರಾಯಣ್ಣರ ಪ್ರತಿಮೆಗೆ ಮಾಲಾರ್ಪಣೆ

ಪಟಾಕಿ ರವಿ ಎಂಬ ಡಿ.ಕೆ. ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿದ ಅವರು, ಪಟಾಕಿ ಶುಭ ಕಾರ್ಯದಲ್ಲಿ ಸ್ವಾಗತ ಮಾಡಲು ಹಚ್ಚುತ್ತಾರೆ. ಆದರೆ ಬೆಂಕಿ ಹಚ್ಚುವ ಜಾಯಾಮಾನಕ್ಕೆ ನಾನು ಸೇರಿದವನಲ್ಲ.ಇವರ ಉದ್ದೇಶ ಅರಾಜಕತೆ ಸೃಷ್ಟಿ ಮಾಡುವುದು, ಬೆಂಕಿ ಹಾಕುವುದು. ಆ ಬೆಂಕಿ ಹಾಕುವ ಜಾಯಮಾನಕ್ಕೆ ನಾನು ಸೇರಿದವನಲ್ಲ. ಬೆಂಕಿ ಹಾಕುವವರು ಡೇಂಜರ್. ಕಾಂಗ್ರೆಸ್ಸಿಗರು ಊರಿಗೆ ಬೆಂಕಿ ಹಾಕಿ ಇದ್ದಲು ಮಾರಿದರೆ ಎಷ್ಟು ಲಾಭವಾಗುತ್ತದೆಂಬ ಮನಸ್ಥಿತಿ ಇರುವವರು. ಬೆಂಕಿ ಹಾಕುವ ಮನಸ್ಥಿತಿ ಕಾರಣಕ್ಕೆ ಇವತ್ತು ಮರಾಠ, ಕನ್ನಡಿಗರ ನಡುವೆ ಸಂಘರ್ಷ ಉಂಟಾಗಿದೆ ಎಂದು ಕಿಡಿಕಾರಿದರು.

Advertisement

Udayavani is now on Telegram. Click here to join our channel and stay updated with the latest news.

Next