Advertisement

ಮಂಗಳವಾರ, ಶುಕ್ರವಾರಗಳು ವಿಶೇಷವೇಕೆ?

08:59 AM May 04, 2019 | Vishnu Das |

ಮಂಗಳವಾರ, ಶುಕ್ರವಾರಗಳು ಶ್ರೀದೇವಿಗೆ ಸಂಬಂಧಿಸಿದ ದಿನಗಳು. ವಿಶೇಷವಾಗಿ ಸಂಪತ್ತಿನ ಅಧಿದೇವತೆ ಲಕ್ಷ್ಮೀಗೆ ಸಂಬಂಧಪಟ್ಟಿರುವ ದಿನಗಳು. ದೇವಿ ಮಂಗಲಕಾರಳು. ಆಕೆ ಕಲ್ಯಾಣೀ. ಮನೆಯನ್ನು ಬೆಳಗುವುದೂ ಸಮೃದ್ಧಿಯನ್ನು ತರುವುದೂ ಶ್ರೀದೇವಿಯೇ. ವಿವಿಧ ಸ್ವರೂಪಗಳಲ್ಲಿ ಆಕೆಯಿದ್ದರೂ ಭಕ್ತಿ, ಕರ್ಮ, ಜ್ಞಾನಗಳಿಗೆ ಅಧಿದೇವತೆಯಾಗಿ ಮುನ್ನಡೆಸುವವಳು. ರೂಪ, ಜಯ , ಯಶಸ್ಸು ಮುಂತಾದ ಲೌಕಿಕ ಸಮೃದ್ಧಿಗಳನ್ನು ಆಕೆ ಒದಗಿಸುವಳು. ಸರಸ್ವತಿ, ಲಕ್ಷ್ಮೀ
ಹಾಗೂ ಖಾಲಿಯಾಗಿ ಸೃಷ್ಟಿ, ಸ್ಥಿತಿ, ಲಯಗಳ ಹಿಂದಿನ ಶಕ್ತಿಯಾಗಿರುವವಳು. ಆದುದರಿಂದ, ಆ ದಿನಗಳಲ್ಲಿ ಧನ ಅಥವಾ ಇತರ ಸಂಪತ್ತನ್ನು ಮನೆಯಿಂದ ಹೊರನೀಡಬಾರದು ಎಂದು ನಂಬಿಕೆಯಿದೆ. ಹಾಗೇ, ಮನೆಯ ಮಗಳನ್ನು ಅಥವಾ ಸೊಸೆಯನ್ನು ಮನೆಯಿಂದ ಈ ದಿನಗಳಲ್ಲಿ ಕಳುಹಿಸಿಕೊಡುವುದಿಲ್ಲ. ಯಾವುದೇ ನೂತನ ವಸ್ತುಗಳನ್ನು ಮನೆಗೆ ತರುವಾಗ ಶುಕ್ರವಾರ ವಿಶೇಷವಾಗಿ ಪ್ರಶಸ್ತ ಎನ್ನುತ್ತಾರೆ. ಈ ದಿನಗಳಲ್ಲಿ ಮನೆಗೆ ವಸ್ತುಗಳನ್ನು ತಂದರೆ ಅವು ಹೆಚ್ಚುತ್ತವೆ. ಮನೆಯಿಂದ ಹೊರಗೆ ನೀಡಿದರೆ ಅವು ಕ್ಷೀಣಿಸುತ್ತದೆ ಎನ್ನುವುದು ನಂಬಿಕೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next