Advertisement

ಮಂಗಳವಾರದ ರಾಶಿಫಲ : ಇಂದು ನಿಮ್ಮ ಗ್ರಹಬಲದಲ್ಲಿ ಯಾರಿಗೆ ಶುಭ-ಯಾರಿಗೆ ಲಾಭ

07:20 AM May 04, 2021 | Team Udayavani |

ಮೇಷ: ಸಾಮಾಜಿಕವಾಗಿ ಅಂತಸ್ತಿನ ನೆಲೆಯಲ್ಲಿ ಬಹು ಎತ್ತರಕ್ಕೆ ನಿಮ್ಮನ್ನು ಏರಿಸಲಿದ್ದಾನೆ. ರಿಯಲ್‌ ಎಸ್ಟೇಟ್‌, ಅಟೋಮೊಬೈಲ್‌ ಹಾಗೂ ಹೊಟೇಲ್‌ ಉದ್ಯಮದವರಿಗೆ ಮುಟ್ಟಿದ್ದೆಲ್ಲಾ ಉನ್ನತಿಗೆ ತರುವ ಕಾಲವಾಗಿದೆ. ಶುಭವಿದೆ.

Advertisement

ವೃಷಭ: ಸಾಂಸಾರಿಕವಾಗಿ ಕುಟುಂಬದ ಸದಸ್ಯರ ಆರೋಗ್ಯದ ಬಗ್ಗೆ ಗಮನಹರಿಸಬೇಕಾಗುತ್ತದೆ. ಮನೆಯಲ್ಲಿ ಶುಭಮಂಗಲ ಕಾರ್ಯ ಚಟುವಟಿಕೆಯ ಸಂಭ್ರಮವಿದ್ದೀತು. ಕಷ್ಟಗಳನ್ನು ಎದುರಿಸುವ ಕಾಲವಾಗಿರುತ್ತದೆ.

ಮಿಥುನ: ಕಷ್ಟಗಳನ್ನು ಎದುರಿಸುವ ಮಂದಿಗೆ ಯಶಸ್ಸಿನ ಕಾಲವಿದು. ಆದರೂ ಹೊಂದಾಣಿಕೆಯು ಅಗತ್ಯವಿದೆ. ಕಾಯಕವೇ ಕೈಲಾಸ ಎಂಬ ನುಡಿಗಟ್ಟು ನಿಮ್ಮ ಪಾಲಿಗೆ ಅರ್ಥಪೂರ್ಣವಾಗಲಿದೆ.

ಕರ್ಕ: ವೃತ್ತಿರಂಗದಲ್ಲಿ ನಿಮ್ಮ ವಿಶ್ವಾಸದ ದುರುಪಯೋಗ ವಾಗದಂತೆ ಜಾಗೃತರಾಗಬೇಕು. ಹಿತಶತ್ರುಗಳು ನಿಮ್ಮ ಪ್ರಯೋಜನವನ್ನು ಪಡೆಯಲಿದ್ದಾರೆ. ದೈವಾನುಗ್ರಹವು ಉತ್ತಮವಿದ್ದು ಎಲ್ಲ ವಿಚಾರಗಳಲ್ಲಿ ಮುನ್ನಡೆಗೆ ಅವಕಾಶಗಳು ಒದಗಿ ಬರುತ್ತವೆ.

ಸಿಂಹ: ಅನೇಕ ರೀತಿಯಲ್ಲಿ ಕಿರಿಕಿರಿ ತೋರಿಬಂದರೂ ನಿಮ್ಮ ತಾಳ್ಮೆ – ಸಮಾಧಾನ ನಿಮಗೆ ಪೂರಕವಾಗುತ್ತದೆ. ಆರ್ಥಿಕ ವಾಗಿ ಸಮತೋಲನವನ್ನು ಕಾಯ್ದುಕೊಳ್ಳುವ ಪರಿಸ್ಥಿತಿ ನಿಮ್ಮದಾದೀತು. ವಿದ್ಯಾರ್ಥಿಗಳು ಅದೃಷ್ಟಭಾಗ್ಯವನ್ನು ಹೊಂದಲಿದ್ದಾರೆ.

Advertisement

ಕನ್ಯಾ: ಆರ್ಥಿಕವಾಗಿ ಧನಸಂಗ್ರಹ ಉತ್ತಮವಿದ್ದರೂ ಕೈಯಲ್ಲಿ ಹಣ ಉಳಿಯದು. ದೂರ ಸಂಚಾರದ ಒಪ್ಪಂದ ಹೂಡಿಕೆಗಳು ನಿಮಗೆ ಪೂರಕವಾಗಿ ಕಾಣಿಸಿಕೊಂಡರೂ ವಂಚನೆಗೆ ಅವಕಾಶವಾಗದಂತೆ ಜಾಗ್ರತೆ ವಹಿಸಬೇಕು.

ತುಲಾ: ಅವಿವಾಹಿತರಿಗೆ ಯೋಗ್ಯ ಸಂಬಂಧದ ಕಂಕಣಬಲ, ವಿದ್ಯಾರ್ಥಿಗಳಿಗೆ ಅಭ್ಯಾಸದಿಂದ ಉತ್ತಮ ಫ‌ಲಿತಾಂಶ ಗೋಚರಕ್ಕೆ ಬರುತ್ತದೆ. ವಾರಾಂತ್ಯ ಶುಭವಾರ್ತೆ. ಹೆಚ್ಚಿನ ಗ್ರಹಗಳ ಪ್ರತಿಕೂಲತೆ ಆಗಾಗ ತೋರಿಬಂದು ಮಾನಸಿಕ ಕಿರಿಕಿರಿ.

ವೃಶ್ಚಿಕ: ಹಿತಶತ್ರುಗಳು ವೃತ್ತಿರಂಗದಲ್ಲಿ ಕಿರುಕುಳಕ್ಕೆ ಕಾರಣರಾದಾರು. ಆರೋಗ್ಯ, ದೂರಸಂಚಾರದ ಬಗ್ಗೆ ಜಾಗ್ರತೆ ವಹಿಸಬೇಕು. ಧಾರ್ಮಿಕ ಆಚರಣೆಗಳು ಮನಸ್ಸಿಗೆ ಶಾಂತಿ, ಸಮಾಧಾನ ನೀಡಲಿವೆ.

 ಧನು: ಆರ್ಥಿಕವಾಗಿ ನಾನಾ ರೂಪದಲ್ಲಿ ಧನ ಸಂಗ್ರಹ ವಿದ್ದರೂ ಖರ್ಚುವೆಚ್ಚಗಳು ಮಿತಿಮೀರದಂತೆ ಗಮನ ಹರಿಸಿರಿ. ವಿದ್ಯಾರ್ಥಿ ವರ್ಗದವರಿಗೆ ಉದಾಸೀನತೆ ತೋರಿಬಂದರೂ ಮುನ್ನಡೆಗೆ ಅಭ್ಯಾಸ ಬಲ, ಪ್ರಯತ್ನ ಆತ್ಮವಿಶ್ವಾಸ ಪೂರಕವಾಗುತ್ತದೆ.

ಮಕರ: ಗೃಹದಲ್ಲಿ ಸಾಂಸಾರಿಕವಾಗಿ ಹಾಗೂ ಕೌಟುಂಬಿಕವಾಗಿ ಶಾಂತಿ, ಸಮಾಧಾನ, ಸೌಹಾರ್ದ ಗಳೆಲ್ಲ ಸಾಧ್ಯ. ಚಿಕ್ಕಪುಟ್ಟ ಸಮಸ್ಯೆಗಳು ಅನಾವಶ್ಯಕವಾಗಿ ಮಾನಸಿಕ ಅಸ್ಥಿರತೆ, ಉದ್ವೇಗ, ಕೋಪ-ತಾಪಗಳು ಹೆಚ್ಚಲಿವೆ.

ಕುಂಭ: ಸಾಮಾಜಿಕ ರಂಗದಲ್ಲಿ ಹೊಸಬರೊಂದಿಗೆ ಸಂಪರ್ಕ ಬಂದು ಸಹಾಯ ಹಸ್ತ ದೊರೆಯುವುದು. ನಿರುದ್ಯೋಗಿಗಳಿಗೆ ಅನಿರೀಕ್ಷಿತ ಉದ್ಯೋಗ ಲಾಭವಿದ್ದು. ಸದ್ಯದ ಪರಿಸ್ಥಿತಿಯಲ್ಲಿ ಹೊಂದಾಣಿಕೆಯ ಅಗತ್ಯವಿದೆ.

ಮೀನ: ನಿಮ್ಮ ಜೀವನಗತಿಯಲ್ಲಿ ಇದು ಉದ್ವೇಗದ ಕಾಲ ಸಮಾಧಾನಚಿತ್ತದಿಂದ ಮುಂದುವರಿಯಬೇಕಾದೀತು. ಹಾಗೇ ವೃತ್ತಿರಂಗದಲ್ಲಿ ತುಂಬ ವೆಚ್ಚ ಹಾಗೂ ಅನಗತ್ಯ ಕೆಲಸಗಳು ನಡೆದು, ನಿಮ್ಮ ಸಮಯ ಮಿತಿಮೀರಿ ವ್ಯಯವಾಗುವುದು.

Advertisement

Udayavani is now on Telegram. Click here to join our channel and stay updated with the latest news.

Next