Advertisement
ವೃಷಭ: ಸಾಂಸಾರಿಕವಾಗಿ ಹೊಂದಾಣಿಕೆಯು ಗಟ್ಟಿಯಾಗಿರಲಿ. ಹಿರಿಯರ ಹಾಗೂ ಮಕ್ಕಳ ಆರೋಗ್ಯ ಆಗಾಗ ಕೈಕೊಡಲಿದೆ. ಆರ್ಥಿಕ ಪರಿಸ್ಥಿತಿ ನಿಮ್ಮ ಲೆಕ್ಕಾಚಾರವನ್ನು ಹೊಂದಿಕೊಂಡು ಇರುತ್ತದೆ. ದೂರ ಸಂಚಾರದ ವಿಷಯ ಬೇಡ.
Related Articles
Advertisement
ಕನ್ಯಾ: ಧನ ಸಂಗ್ರಹದಿಂದ ಋಣಬಾಧೆಯು ನಿವಾರಣೆಯಾಗಿ ಸಂತಸವಾಗಲಿದೆ. ಕೋರ್ಟುಕಚೇರಿ ಕಾರ್ಯಭಾಗದಲ್ಲಿ ಬಹು ಸಮಯದ ನಂತರ ನಿಮಗೆ ಯಶಸ್ಸು ಕಂಡುಬರಲಿದೆ. ಆರೋಗ್ಯದ ಬಗ್ಗೆ ಕಾಳಜಿ ಇರಲಿ.
ತುಲಾ: ದೂರಸಂಚಾರದಿಂದ ನಿಮ್ಮ ಮನೋಕಾಮನೆ ಗಳು ಸಿದ್ಧಿಯಾಗಲಿವೆ. ನವದಂಪತಿಗಳಿಗೆ ಸಂತಾನಭಾಗ್ಯದ ಸೂಚನೆ ತಂದೀತು. ಹೂಡಿಕೆ ವಿಸ್ತರಣೆಗಳು, ವ್ಯಾಪಾರ, ವ್ಯವಹಾರಗಳಿಗೆ ಅನುಕೂಲಕರವಾಗಲಿದೆ. ಶುಭವಿದೆ.
ವೃಶ್ಚಿಕ: ವ್ಯವಹಾರದಲ್ಲಿ ಆಗಾಗ ಹಿನ್ನಡೆಯನ್ನು ಅನುಭವಿಸಿ ದರೂ ಧನಾಗಮನವು ಪರಿಸ್ಥಿತಿಯನ್ನು ಸುಧಾರಿಸಲಿದೆ. ಕೆಲವೊಮ್ಮೆ ನಿಮ್ಮ ಪ್ರಯತ್ನಶೀಲತೆಗೆ ಮಹತ್ತರ ಬದಲಾವಣೆ ಕಂಡುಬರುವುದು. ಶುಭಮಂಗಲ ಕಾರ್ಯ ನಡೆದೀತು.
ಧನು: ಕಾರ್ಯರಂಗದಲ್ಲಿ ಹಾಗೂ ವೃತ್ತಿರಂಗದಲ್ಲಿ ಸಾವಧಾನ ದಿಂದ ಮುಂದುವರಿಯಬೇಕಾಗುತ್ತದೆ. ಅನಾವಶ್ಯಕ ಅಪವಾದ, ಅವಮಾನ ಕಿರಿಕಿರಿ ಪ್ರಸಂಗವನ್ನು ಎದುರಿಸಬೇಕಾದೀತು. ನಿಮ್ಮ ಪ್ರಯತ್ನಬಲ, ಆತ್ಮವಿಶ್ವಾಸದಲ್ಲಿ ವಿಶ್ವಾಸವಿರಲಿ.
ಮಕರ: ಸಾಮಾಜಿಕ ಕ್ಷೇತ್ರದಲ್ಲಿ ಕೂಡಾ ಕೀರ್ತಿ ಹೆಚ್ಚಿ ಆದರಾದಿಗಳಿಗೆ ಪಾತ್ರರಾಗುವಿರಿ. ಜೊತೆಗೆ ಅದರಿಂದ ಆರ್ಥಿಕ ಅನುಕೂಲವೂ ಒದಗಿ ಬರುವುದು. ಅವಿವಾಹಿತರ ವೈವಾಹಿಕ ಭಾಗ್ಯಕ್ಕೆ ಅದೃಷ್ಟ ಖುಲಾಯಿಸಲಿದೆ. ಮುನ್ನಡೆಯಿರಿ.
ಕುಂಭ: ಆದಾಯ ಮಾರ್ಗಸೂಚಿಗೆ ಹಲವಾರು ಮಾರ್ಗ ಗಳು ಗೋಚರಕ್ಕೆ ಬಂದಾವು. ಸದುಪಯೋಗಿಸಿಕೊಳ್ಳಿರಿ. ಯಾವುದೇ ವಿಚಾರದಲ್ಲಿ ದುಡುಕು ವರ್ತನೆಗೆ ಕಾರಣರಾಗದಂತೆ ವರ್ತಿಸಿರಿ. ವಿದ್ಯಾರ್ಥಿಗಳು ಅಭ್ಯಾಸದಲ್ಲಿ ಮುನ್ನಡೆ ಕಂಡಾರು.
ಮೀನ: ನಿರುದ್ಯೋಗಿಗಳ ಹಿನ್ನಡೆ ಅನಿರೀಕ್ಷಿತ ರೂಪದಲ್ಲಿ ನಿವಾರಣೆಯಾಗುತ್ತದೆ. ಶ್ರೀ ದೇವರ ಅನುಗ್ರಹಕ್ಕಾಗಿ ಪ್ರಾರ್ಥಿಸಿರಿ. ಕೌಟುಂಬಿಕವಾಗಿ ಹಠಾತ್ ಏರಿಳಿತಗಳು ಕಂಡುಬಂದಾವು. ದೂರಸಂಚಾರದ ಅವಕಾಶ ಕಾರ್ಯಸಾಧನೆಗೆ ಅನುಕೂಲವಾಗಲಿದೆ.