Advertisement

ಮಂಗಳವಾರದ ರಾಶಿ ಭವಿಷ್ಯ : ಇಂದು ಈ ರಾಶಿಯವರಿಗೆ ಧನಲಾಭ…

07:21 AM Sep 27, 2022 | Team Udayavani |

ಮೇಷ: ವಿದ್ಯಾರ್ಥಿಗಳಿಗೆ ಅಧ್ಯಯನಶೀಲರಿಗೆ ಉತ್ತಮ ಫ‌ಲದಾಯಕ ದಿವಸ. ಉದ್ಯೋಗ ವ್ಯವಹಾರಗಳಲ್ಲಿ ಸಮಯ ಸಂದರ್ಭಕ್ಕೆ ಸಹಾಯ ದೊರಕಿ ಯಶಸ್ಸು ಲಭಿಸಿದ ತೃಪ್ತಿ. ದಂಪತಿಗಳಿಂದ ಪರಸ್ಪರ ಜವಾಬ್ದಾರಿಯುತ ನಡೆ. ಹಿರಿಯರಿಂದ ಸಂತೋಷ ವೃದ್ಧಿ.

Advertisement

ವೃಷಭ: ನೂತನ ಮಿತ್ರರ ಸಮಾಗಮದಿಂದ ಹೆಚ್ಚಿದ ಸಂತೋಷ. ಪಾಲುದಾರಿಕಾ ಕ್ಷೇತ್ರದಲ್ಲಿ ಪ್ರಗತಿ. ಕೈತುಂಬಾ ಕೆಲಸದಿಂದ ಹೆಚ್ಚಿನ ವರಮಾನ. ಸಾಂಸಾರಿಕ ಸುಖ ವೃದ್ಧಿ. ವಿದ್ಯಾರ್ಥಿಗಳಿಗೆ ಹೆಚ್ಚಿದ ಪುರಸ್ಕಾರ. ಉನ್ನತ ಸ್ಥಾನಮಾನ ಲಭ್ಯ.

ಮಿಥುನ: ಗಣ್ಯ ವ್ಯಕ್ತಿಗಳ ಸಂಪರ್ಕ. ವಿದ್ಯಾವಂತರೊಂದಿಗೆ ಸಮಾಲೋಚನೆ. ಉದ್ಯೋಗ ವ್ಯವಹಾರಗಳಲ್ಲಿ ನಿರೀಕ್ಷೆಗೂ ಮೀರಿದ ಅಭಿವೃದ್ಧಿಯ ಬದಲಾವಣೆ. ಹೆಚ್ಚಿದ ವರಮಾನ. ಸಹೋದ್ಯೋಗಿಗಳಿಂದ ಸಹಕಾರ. ಗುರು ಹಿರಿಯರ ಆರೋಗ್ಯ ಗಮನಿಸಿ.

ಕರ್ಕ: ದೂರ ಪ್ರಯಾಣ ಸಂಭವ. ಧಾರ್ಮಿಕ, ಸಾಮಾಜಿಕ ವಿಚಾರಗಳಲ್ಲಿ ತಲ್ಲೀನತೆ. ಸಾಂಸಾರಿಕ ಸುಖ ವೃದ್ಧಿ. ಸ್ವಪ್ರಯತ್ನದಿಂದ ಧನಾರ್ಜನೆ. ಗೃಹದಲ್ಲಿ ಸಂತಸದ ವಾತಾವರಣ. ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ. ಉತ್ತಮ ಆದಾಯ.

ಸಿಂಹ: ಆಸ್ತಿ ವಿಚಾರಗಳಲ್ಲಿ ಮುನ್ನಡೆ. ಪಾಲುದಾರಿಕಾ ವ್ಯವಹಾರಗಳಲ್ಲಿ ಪ್ರಗತಿ. ನಿರೀಕ್ಷಿತ ಧನಾರ್ಜನೆ. ವಿದ್ಯಾರ್ಥಿಗಳಿಗೆ ದೂರ ಪ್ರಯಾಣ ಸಂಭವ. ದಾಂಪತ್ಯ ತೃಪ್ತಿಕರ. ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗಿ.

Advertisement

ಕನ್ಯಾ: ಸಂತಸದಿಂದ ಕೂಡಿದ ದಿನ. ಎಲ್ಲ ವಿಚಾರಗಳಲ್ಲಿ ಅಭಿವೃದ್ಧಿ ಸಂಭವ. ಪಾಲುದಾರಿಕಾ ವ್ಯವಹಾರಗಳಲ್ಲಿ ಹೆಚ್ಚಿದ ಅಭಿವೃದ್ಧಿ. ಆರೋಗ್ಯದಲ್ಲಿ ಸುಧಾರಣೆ. ವಿದ್ಯಾರ್ಥಿಗಳಿಗೆ ಸೌಕರ್ಯ ವೃದ್ಧಿ. ಅನಿರೀಕ್ಷಿತ ಧನಾಗಮನ ಸಂಭವ.

ತುಲಾ: ಸ್ತ್ರೀ ಪುರುಷರಿಗೆ ಪರಸ್ಪರರಿಂದ ಸಹಕಾರ ಅನುಕೂಲತೆ. ಗೌರವದಿಂದ ಕೂಡಿದ ಧನಾರ್ಜನೆ. ದಂಪತಿಗಳಲ್ಲಿ ಅನುರಾಗ ವೃದ್ಧಿ. ಅನಿರೀಕ್ಷಿತತೆ ಹಾಗೂ ಗೌಪ್ಯತೆಯಿಂದ ಕೂಡಿದ ಕಾರ್ಯ ವೈಖರಿ. ಸಹೋದರಾದಿ ವರ್ಗದವರಿಗೆ ಅಭಿವೃದ್ಧಿ. ವಿದ್ಯಾರ್ಥಿಗಳಿಗೆ ಉತ್ತಮ ದಿನ.

ವೃಶ್ಚಿಕ: ಧನಾಗಮ ವಿಚಾರದಲ್ಲಿ ಏರಿಳಿತ ಪರಿಸ್ಥಿತಿ ಇದ್ದರೂ ಸ್ಥಾನಕ್ಕೆ ಚ್ಯುತಿಯಾಗದು. ಸ್ವಪ್ರಯತ್ನ ಸಹೋದರರ ಸಹಾಯದಿಂದಲೂ ಕಾರ್ಯರಂಗದಲ್ಲಿ ಉತ್ತಮ ಫ‌ಲಿತಾಂಶ. ದೇಹದಲ್ಲಿ ಕಟಿ ಪ್ರದೇಶ ಸೊಂಟದ ಆರೋಗ್ಯದಲ್ಲಿ ಗಮನವಿರಲಿ. ಧಾರ್ಮಿಕ ಕಾರ್ಯದಲ್ಲಿ ಶೃದ್ಧೆ.

ಧನು: ಆರೋಗ್ಯದಲ್ಲಿ ವೃದ್ಧಿ. ಸಹೋದರಾದಿ ಸಹಾಯದಿಂದ ಉತ್ತಮ ಧನಾರ್ಜನೆ. ಕಾರ್ಯಕ್ಷೇತ್ರದಲ್ಲಿ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ ಜನಮನ್ನಣೆ. ಮಕ್ಕಳಲ್ಲಿ ನಾಯಕತ್ವ ಗುಣ ವೃದ್ಧಿಯಿಂದ ಹಿರಿಯರಿಗೆ ಸಂತೋಷ. ಪ್ರಯಾಣ; ದೇವತಾ ಕಾರ್ಯ ವಿಳಂಬ.

ಮಕರ: ಸಂಪತ್ತಿನ ವಿಚಾರದಲ್ಲಿ ಕಟ್ಟಿ ಹಾಕಿದ ಪರಿಸ್ಥಿತಿ. ಕಾರ್ಮಿಕರಲ್ಲಿ ಸಹೋದರ ಸಮಾನರಲ್ಲಿ ತಾಳ್ಮೆಯಿಂದ ವ್ಯವಹರಿಸಿ ಕಾರ್ಯ ಸಾಧಿಸಿ. ದಂಪತಿಗಳು ಚರ್ಚೆಗೆ ಅವಕಾಶ ನೀಡದಿರಿ. ದೇವತಾ ಕೆಲಸ ಕಾರ್ಯಗಳಿಗೆ ಪ್ರಯಾಣ. ಆರೋಗ್ಯ ವೃದ್ಧಿ.

ಕುಂಭ: ಅನಿರೀಕ್ಷಿತ ಧನಲಾಭ. ಮಿತ್ರರಿಂದಲೂ ಸಹೋದರರಿಂದಲೂ ಸುಖ. ಮಕ್ಕಳು, ವಿದ್ಯಾರ್ಥಿಗಳ ವಿಚಾರದಲ್ಲಿ ಸಂತೋಷದ ಪರಿಸ್ಥಿತಿ. ಆಹಾರೋದ್ಯಮ ಉದ್ಯೋಗದವರಿಗೆ ಅಭಿವೃದ್ಧಿ. ಜಲೋತ್ಪನ್ನ ವಸ್ತುಗಳ ವ್ಯವಹಾರಸ್ಥರಿಗೆ ಉತ್ತಮ ದಿನ.

ಮೀನ: ಆರೋಗ್ಯ ಉತ್ತಮ. ಉದ್ಯೋಗದಲ್ಲಿ ನಿರೀಕ್ಷಿತ ಗೌರವ. ಉತ್ತಮ ಧನಾರ್ಜನೆ. ವಿದ್ಯಾರ್ಥಿಗಳಿಗೆ ಏರಿಳಿತದ ಅನುಭವ. ಧಾರ್ಮಿಕ ಕಾರ್ಯಗಳಿಗೆ ಮಿತವ್ಯಯ. ಸಣ ಪ್ರಯಾಣ. ಮಕ್ಕಳಿಂದ ಸುಖ. ಸಹೋದರರಲ್ಲಿ ಪ್ರೀತಿಯಿಂದ ವ್ಯವಹರಿಸಿ ಕಾರ್ಯಸಾಧನೆ. ಧಾರ್ಮಿಕ ಚಿಂತನೆಯಲ್ಲಿ ಆಸಕ್ತಿ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next