Advertisement

ಮಂಗಳವಾರದ ರಾಶಿಫಲ : ಇಲ್ಲಿದೆ ನಿಮ್ಮ ಗ್ರಹಬಲ

07:44 AM Nov 16, 2021 | Team Udayavani |

ಮೇಷ: ಕರ್ತವ್ಯ ನಿಷ್ಠೆ. ಉದ್ಯೋಗ ವ್ಯವಹಾರಗಳಲ್ಲಿ ಅನಿರೀಕ್ಷಿತ ಪ್ರಗತಿ. ಜನ ಮನ್ನಣೆ. ಉತ್ತಮ ಧನಾರ್ಜನೆ. ಸ್ಪರ್ಧೆಗಳಲ್ಲಿ ಜಯ. ಗುರುಹಿರಿಯರಿಂದ ಲಾಭ. ಗೃಹದಲ್ಲಿ ಸಂತಸದ ವಾತಾವರಣ.

Advertisement

ವೃಷಭ: ಉತ್ತಮ ವಾಕ್‌ಚತುರತೆ. ಉದ್ಯೋಗ ವ್ಯವಹಾರಗಳಲ್ಲಿ ನಿರೀಕ್ಷಿಸಿದಂತೆ ಹೆಚ್ಚಿನ ಧನಸಂಪತ್ತು ವೃದ್ಧಿ. ಪಾಲುದಾರರೊಂದಿಗೆ ತಾಳ್ಮೆಯಿಂದ ಸಹಕರಿಸಿ. ದೂರದ ಸ್ಥಳದಿಂದ ಜ್ಞಾನ ಸಂಪಾದನೆ. ಮನೆಯಲ್ಲಿ ಸಂಭ್ರಮ ಪರಿಸ್ಥಿತಿ

ಮಿಥುನ: ಧಾರ್ಮಿಕ ಕಾರ್ಯಗಳಲ್ಲಿ ಮಗ್ನತೆ. ವಿದ್ಯಾರ್ಜನೆಯಲ್ಲಿ ಸಮಯ ಕಳೆಯುವಿಕೆ. ಸಾಹಸ ಪ್ರವೃತ್ತಿಯಿಂದ ಗೌರವಸ್ಥಾನ ಪ್ರಾಪ್ತಿ. ದಾಂಪತ್ಯ ತೃಪ್ತಿಕರ. ಮನೆಯ ನಿಮಿತ್ತ ಹೆಚ್ಚಿನ ಜವಾಬ್ದಾರಿ.

ಕರ್ಕ: ಕಾರ್ಯ ಸಾಧಿಸಿದ್ದರಿಂದ ಮನಸ್ಸಿನಲ್ಲಿ ಸಂತೋಷ. ಗುರುಹಿರಿಯರಲ್ಲಿ ಸಮಾದಾನ ತಾಳ್ಮೆ ಅಗತ್ಯ. ನಿರೀಕ್ಷಿಸಿದಂತೆ ಧನ ವೃದ್ಧಿ. ದೂರದ ಮಿತ್ರರಿಂದ ಸಹಾಯ ಹಾಗೂ ಅವರಿಗಾಗಿ ಧನ ವ್ಯಯ ಸಂಭವ. ಮಕ್ಕಳಿಂದ ಸಂತೋಷ.

ಸಿಂಹ: ಆರೋಗ್ಯ ವೃದ್ಧಿ. ಸರಕಾರಿ ಕೆಲಸಗಳಲ್ಲಿ ಪ್ರಗತಿ. ನಿರೀಕ್ಷಿತ ಸ್ಥಾನ ಲಾಭ. ಪಾಲುದಾರಿಕಾ ವ್ಯವಹಾರಗಳಲ್ಲಿ ಹೆಚ್ಚಿನ ಲಾಭ. ಆಸ್ತಿ, ಭೂಮಿ, ಕಟ್ಟಡಗಳ ಬಗ್ಗೆ ಬದಲಾವಣೆ ಸಂಭವ. ಸನ್ಮಾರ್ಗದ ಸಂಪತ್ತಿಗೆ ಆದ್ಯತೆ ನೀಡಿ.

Advertisement

ಕನ್ಯಾ: ಹೆಚ್ಚಿದ ದೈಹಿಕ ಶ್ರಮ ಜವಾಬ್ದಾರಿ. ಆರೋಗ್ಯ ಗಮನಿಸಿ. ಉದ್ಯೋಗ ವ್ಯವಹಾರಗಳಲ್ಲಿ ಕೀರ್ತಿ ಮನಃ ಸಂತೋಷ. ಸಾಂಸಾರಿಕ ಸುಖ ಮಧ್ಯಮ. ಹಣಕಾಸಿನ ವಿಚಾರದಲ್ಲಿ ಪ್ರಗತಿ. ಗುರುಹಿರಿಯರಿಂದ ತೃಪ್ತಿ.

ತುಲಾ: ಗುರು ಹಿರಿಯರ ಆಶೀರ್ವಾದದಿಂದ ಹೆಚ್ಚಿನ ಸ್ಥಾನ ವೃದ್ಧಿ. ಸಹೋದ್ಯೋಗಿಗಳ ಸಹಕಾರದಿಂದ ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ ಹಾಗೂ ಹೆಚ್ಚಿನ ಸಂಪಾದನೆ ಪ್ರಾಪ್ತಿ. ಭೂಮ್ಯಾದಿ ಆಸ್ತಿ ವಿಚಾರಗಳಲ್ಲಿ ಚರ್ಚೆ ಸಂಭವ.

ವೃಶ್ಚಿಕ: ಉದ್ಯೋಗ ವಿಚಾರದಲ್ಲಿ ಹೆಚ್ಚಿನ ಜವಾಬ್ದಾರಿ. ನಿರೀಕ್ಷೆಗೆ ಸರಿಯಾಗಿ ಧನಾಗಮನ. ಭೂಮ್ಯಾದಿ ವ್ಯವಹಾರಗಳಲ್ಲಿ ಅಡಚಣೆ ವಿಳಂಬ. ಮಾನಸಿಕ ಒತ್ತಡ. ದಂಪತಿಗಳಲ್ಲಿ ಪರಸ್ಪರ ಸಹಕಾರ ವೃದ್ಧಿ. ಮಕ್ಕಳಿಂದ ಸಂತೋಷ.

ಧನು: ವಿದ್ಯಾರ್ಜನೆಯಲ್ಲಿ ತಲ್ಲೀನತೆ. ಅವಿವಾಹಿತರಿಗೆ ವಿವಾಹ ಭಾಗ್ಯ. ನೂತನ ಮಿತ್ರರ ಸಮಾಗಮ. ಆಸ್ತಿ ವಿಚಾರಗಳಲ್ಲಿ ಮುನ್ನಡೆ. ಗೃಹದಲ್ಲಿ ಸಂತಸದ ವಾತಾವರಣ. ಅತಿಯಾದ ಪರಿಶ್ರಮದಿಂದ ಧನವೃದ್ಧಿ.

ಮಕರ: ದಾಂಪತ್ಯದಲ್ಲಿ ಪರಸ್ಪರ ಅನುರಾಗ ವೃದ್ಧಿ. ದೀರ್ಘ‌ ಪ್ರಯಾಣ ಸಂಭವ. ಭೂಮ್ಯಾದಿ ವಿಚಾರಗಳಲ್ಲಿ ಆಸ್ತಿ ವಿಚಾರಗಳಲ್ಲಿ ಬದಲಾವಣೆ ಸಂಭವ. ಎಚ್ಚರಿಕೆಯ ನಡೆ ಅಗತ್ಯ. ಮಕ್ಕಳ ವಿಚಾರದಲ್ಲಿ ಹೆಚ್ಚಿನ ಜವಾಬ್ದಾರಿ.

ಕುಂಭ: ಆರೋಗ್ಯ ಗಮನಿಸಿ. ನಡೆ ನುಡಿಗಳಲ್ಲಿ ಸ್ಪಷ್ಟತೆ ಇರಲಿ. ಅನ್ಯಥಾ ತೊಂದರೆಗಳನ್ನು ನಿಮಂತ್ರಿಸದಿರಿ. ಭೂಮ್ಯಾದಿ ವ್ಯವಹಾರಗಳಲ್ಲಿ ಏರುಪೇರು . ಮಕ್ಕಳಿಗೆ ಅಧ್ಯಯನ ನಿಮಿತ್ತ ಪ್ರಯಾಣ. ದಂಪತಿಗಳು ಸಾಮರಸ್ಯ ಕಾಪಾಡಿಕೊಳ್ಳಿ.

ಮೀನ: ವೃದ್ಧಿದಾಯಕ ಆರೋಗ್ಯ. ಉದ್ಯೋಗ ವ್ಯವಹಾರಗಳಲ್ಲಿ ನಿರೀಕ್ಷಿಸಿದಂತೆ ಧನಾಗಮನ. ಸ್ಥಾನ, ಕೀರ್ತಿ ಪ್ರಶಂಸೆ ಪ್ರಾಪ್ತಿ. ಉತ್ತಮ ವಾಕ್‌ಚತುರತೆ ಮನೋರಂಜನೆ. ಸಂಸಾರಿಕ ಸುಖ ವೃದ್ಧಿ. ಅವಿವಾಹಿತರಿಗೆ ಕಂಕಣ ಭಾಗ್ಯ.

Advertisement

Udayavani is now on Telegram. Click here to join our channel and stay updated with the latest news.

Next