Advertisement
ಪುತ್ತೂರಿನಲ್ಲಿ ಕುಸಿತ ದ.ಕ. ಜಿಲ್ಲೆಯಲ್ಲಿ ಕೊಳವೆ ಬಾವಿ ಕೊರೆತದ ನಿಷೇಧದ ಪಟ್ಟಿಯಲ್ಲಿರುವ ಪುತ್ತೂರು ತಾಲೂಕಿನ ಅಂತರ್ಜಲ ಮಟ್ಟದ ಅಂಕಿ ಅಂಶ ಇಲ್ಲಿನ ನೀರಿನ ಮೂಲ ಸುರಕ್ಷಿತವಾಗಿಲ್ಲ ಅನ್ನುವುದನ್ನು ದೃಢೀಕರಿಸಿದೆ. ತಾಲೂಕಿನ ತೆರೆದ ಬಾವಿಯಲ್ಲಿನ ನೀರಿನ ಮಟ್ಟ 2022ರ ಫೆಬ್ರವರಿಯಲ್ಲಿ ಸರಾಸರಿ 5.75 ಮೀಟರ್‌ನಲ್ಲಿತ್ತು. ಅದೀಗ 7.20 ಮೀಟರ್ ಕೆಳಗೆ ಜಾರಿದೆ. ಕೊಳವೆ ಬಾವಿಯ ಅಂತರ್ಜಲ ಮಟ್ಟ 2022ರ ಫೆಬ್ರವರಿಯಲ್ಲಿ 15.07 ಮೀ. ನಲ್ಲಿದ್ದ ನೀರಿನ ಮಟ್ಟ 2023ರ ಫೆಬ್ರವರಿಯಲ್ಲಿ 19.30 ಮೀ. ನಷ್ಟು ಕೆಳಭಾಗಕ್ಕೆ ಇಳಿದಿದೆ. ಅಂದರೆ ತೆರೆದ ಬಾವಿಯಲ್ಲಿ 1.45 ಮೀ., ಕೊಳವೆಬಾವಿಯಲ್ಲಿ 4.23 ಮೀ.ನಷ್ಟು ಕೆಳಗೆ ಇಳಿದಿದೆ.
Related Articles
Advertisement
4.23 ಮೀ -ಒಂದು ವರ್ಷದಲ್ಲಿ ಕೊಳವೆ ಬಾವಿಯಲ್ಲಿ ನೀರು ಕೆಳಕ್ಕೆ ಇಳಿದಿರುವುದು .
ನೀರಿನ ಮಟ್ಟ ಕುಸಿತ ದ.ಕ. ಜಿಲ್ಲೆಯಲ್ಲಿ 2022 ಜನವರಿಯಲ್ಲಿ 12.90 ಮೀ.ನಲ್ಲಿದ್ದ ಅಂತರ್ಜಲ ಮಟ್ಟ 2023 ಜನವರಿಯಲ್ಲಿ 12.01ರಷ್ಟಿತ್ತು. 2022 ಫೆಬ್ರವರಿಯಲ್ಲಿ 13.79ರಲ್ಲಿದ್ದ ಅಂತರ್ಜಲ ಮಟ್ಟ 2023 ಫೆಬ್ರವರಿಯಲ್ಲಿ 13.71 ಮೀ.ನಷ್ಟಿದೆ.-ದಾವೂದ್, ಭೂ ವಿಜ್ಞಾನಿ, ಅಂತರ್ಜಲ ವಿಭಾಗ ಮಂಗಳೂರು ಜಿಲ್ಲೆಯ ಉಳಿದ ತಾಲೂಕಿನ ಸಿತಿ..! 2022 ಮತ್ತು 2023ರ ಫೆಬ್ರವರಿಯಲ್ಲಿ ತೆರೆದ ಬಾವಿ ಹಾಗೂ ಕೊಳವೆಬಾವಿಯ ಅಂತರ್ಜಲ ಮಟ್ಟ ಪುತ್ತೂರಿಗಿಂತ ಉತ್ತಮ ಎಂದರೂ ಭವಿಷ್ಯದಲ್ಲಿ ಸುರಕ್ಷಿತ ಅಲ್ಲ. ಬೆಳ್ತಂಗಡಿಯಲ್ಲಿ ಕೊಳವೆ ಬಾವಿ ನೀರಿನ ಮಟ್ಟ 20 ಮೀ.ನಿಂದ 20.91ಕ್ಕೆ ಇಳಿದಿದೆ. ಮೂಡುಬಿದಿರೆಯಲ್ಲಿ 28.15 ಮೀ.ನಿಂದ 31.90 ಮೀ.ಗೆ ಇಳಿಕೆ ಕಂಡಿದೆ. ತೆರೆದ ಬಾವಿ ಅಂತರ್ಜಲ ಮಟ್ಟದ ಗಮನಿಸಿದರೆ ಮಂಗಳೂರು ತಾಲೂಕಿನಲ್ಲಿ 7.52 ಮೀ.ನಿಂದ 7.58 ಮೀ.ಗೆ ಇಳಿಕೆ ಕಂಡಿದೆ. ~ಕಿರಣ್ ಪ್ರಸಾದ್ ಕುಂಡಡ್ಕ