Advertisement

ನಲುಗಿದ ಕಡಲತೀರದ ಜನ

10:21 PM May 17, 2021 | Team Udayavani |

ಕುಮಟಾ: ಅರಬ್ಬಿ ಸಮುದ್ರದಲ್ಲಿ ಉಲ್ಬಣಗೊಂಡ ತೌಕ್ತೇ ಚಂಡಮಾರುತದ ಪರಿಣಾಮ ಕಡಲು ಕಳೆದೆರಡು ದಿನಗಳಿಂದ ರೌದ್ರಾವತಾರ  ತಾಳಿದೆ. ತಾಲೂಕಿನ ವನ್ನಳ್ಳಿ ಸೇರಿದಂತೆ ಇನ್ನಿತರ ಪ್ರದೇಶಗಳು ವಿಸ್ತಾರಗೊಂಡಿದ್ದು, ಸಮುದ್ರ ತೀರದ ನಿವಾಸಿಗಳಲ್ಲಿ ಆತಂಕ ಮೂಡಿಸಿದೆ.

Advertisement

ತೌಕ್ತೇ ಚಂಡಮಾರುತದ ಪರಿಣಾಮ ತಾಲೂಕಿನಾದ್ಯಂತ ಕಳೆದೆರಡು ದಿನಗಳಿಂದ ಗಾಳಿ ರಭಸವಾಗಿ ಬೀಸುತ್ತಿದ್ದು, ಎಡಬಿಡದೆ ಮಳೆ ಸುರಿಯಲಾರಂಭಿಸಿದೆ. ಶನಿವಾರ ಮಧ್ಯರಾತ್ರಿ ಬೀಸಿದ ಭಾರಿ ಗಾಳಿ ಮಳೆಯಿಂದ ಧಾರೇಶ್ವರ ಹಾಗೂ ವನ್ನಳ್ಳಿ ಬೀಚ್‌ನಲ್ಲಿ ಬೃಹದಾಕಾರದ ಅಲೆಗಳು ಏಳುತ್ತಿವೆ. ಸಮುದ್ರ ವಿಸ್ತಾರಗೊಂಡ ಪರಿಣಾಮ ಕೆಲವೆಡೆ ಸಮುದ್ರ ಕೊರೆತದ ಭೀತಿ ಎದುರಾಗಿದೆ. ವನ್ನಳ್ಳಿ, ಧಾರೇಶ್ವರ, ಶಶಿಹಿತ್ತಲ ಪ್ರದೇಶಗಳಲ್ಲಿ ಕಡಲ ಕೊರೆತ ಉಂಟಾಗಿದೆ.

ಇನ್ನು ಸಮುದ್ರದ ಅಲೆಗಳ ರಭಸಕ್ಕೆ ತಗ್ಗು ಪ್ರದೇಶದ 32ಕ್ಕೂ ಅಧಿಕ ಮನೆಗಳಿಗೆ ಹಾಗೂ ಕೃಷಿ ಭೂಮಿಗೆ ಉಪ್ಪು ನೀರು ನುಗ್ಗಿ, ಸಾಕಷ್ಟು ಅವಾಂತರ ಸೃಷ್ಟಿಸಿದೆ. ಜನಜೀವನ ಅಸ್ತವ್ಯಸ್ತಗೊಂಡಿದೆ. ಆಸ್ತಿಪಾಸ್ತಿ ಸಮುದ್ರ ಪಾಲಾಗಿದೆ. ಜನ ಕಾಳಜಿ ಕೇಂದ್ರಗಳಿಗೆ: ಉಪವಿಭಾಗಾಧಿಕಾರಿಗಳ ಆದೇಶದಂತೆ ತಾಲೂಕಾಡಳಿತ, ಪುರಸಭೆ ಹಾಗೂ ಸ್ಥಳೀಯಾಡಳಿತ ಶಶಿಹಿತ್ತಲ ಹಾಗೂ ಕಲಭಾಗ ಶಾಲೆಯಲ್ಲಿ ನಿರ್ಮಿಸಿದ ಕಾಳಜಿ ಕೇಂದ್ರಗಳಲ್ಲಿ ಜಲಾವೃತಗೊಂಡ ಪ್ರದೇಶದ 120ಕ್ಕೂ ಅಧಿಕ ಜನರು ವಾಸ್ತವ್ಯ ಹೂಡಿದ್ದಾರೆ. ಪುರಸಭೆ ಊಟದ ವ್ಯವಸ್ಥೆ ಕಲ್ಪಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next