Advertisement

ತಿರುಮಲ ಭಕ್ತರಿಗೆ “ಗೋ ದರ್ಶನ’ವ್ಯವಸ್ಥೆ ಮಾಡಿದ ಟಿಟಿಡಿ

12:19 AM Oct 16, 2022 | Team Udayavani |

ತಿರುಪತಿ: ತಿರುಮಲದಲ್ಲಿ ವೆಂಕಟೇಶ್ವರನ ದರ್ಶನಕ್ಕೂ ಮೊದಲು ಅಲಿಪಿರಿಯಲ್ಲಿ “ಗೋ ದರ್ಶನ’ಕ್ಕೆ ತಿರುಮಲ ತಿರುಪತಿ ದೇವಸ್ಥಾನಮ್ಸ್‌ (ಟಿಟಿಡಿ) ಟ್ರಸ್ಟ್‌ ವ್ಯವಸ್ಥೆ ಮಾಡಿದೆ.

Advertisement

ಗೋವುಗಳ ಪೂಜೆಗಾಗಿ ಅಲಿಪಿರಿಯಲ್ಲಿ ಹೊಸದಾಗಿ “ಸಪ್ತ ಗೋ ಪ್ರದಕ್ಷಿಣೆ ಮಂದಿರ’ ವನ್ನು ಟಿಟಿಡಿ ಇತ್ತೀಚೆಗೆ ನಿರ್ಮಿ ಸಿದೆ. ಇದರ ಸಮೀಪವೇ ಅಲಿಪಿರಿಯಲ್ಲಿ ಟಿಟಿಡಿ ಗೋ ಶಾಲೆ, ಶ್ರೀ ವೇಣುಗೋಪಾಲ ಸ್ವಾಮಿ ದೇಗುಲ ಮತ್ತು ಶ್ರೀವಾರಿ ಪಾದ ಮಂಟಪ ಇದೆ. ನಡಿಗೆ ಮೂಲಕ ಬೆಟ್ಟ ಹತ್ತುವ ಭಕ್ತರು ಗೋ ದರ್ಶನ ಮಾಡು ವಂತಾಗಲು ಟಿಟಿಡಿ ಈ ವ್ಯವಸ್ಥೆ ಮಾಡಿದೆ.

ಸಪ್ತ ಗೋ ಪ್ರದಕ್ಷಿಣೆ ಮಂದಿರವನ್ನು ಶುಕ್ರವಾರ ಪರಿ ಶೀಲಿಸಿದ ಟಿಟಿಡಿ ವ್ಯವಸ್ಥಾಪಕ ಅಧಿಕಾರಿ ಎ.ವಿ. ಧರ್ಮ ರೆಡ್ಡಿ, ಗೋ ದರ್ಶನದ ಮಹತ್ವ ವನ್ನು ತಿಳಿಸುವ ನಾಮಫ‌ಲಕವನ್ನು ಅಳವ ಡಿಸುವಂತೆ ಸಿಬಂದಿಗೆ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next