Advertisement

ಆಂಧ್ರ ಪ್ರದೇಶದಾದ್ಯಂತ 1342 ದೇಗುಲ ನಿರ್ಮಾಣ: ಟಿಟಿಡಿ

09:18 PM Aug 27, 2022 | Team Udayavani |

ತಿರುಮಲ: ಹಿಂದೂ ಸನಾತನ ಧರ್ಮವನ್ನು ಉತ್ತೇಜಿಸುವ ಮತ್ತು ಧಾರ್ಮಿಕ ಮತಾಂತರಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಆಂಧ್ರಪ್ರದೇಶದಾದ್ಯಂತ 1,342 ಶ್ರೀವರಿ ದೇವಾಲಯಗಳನ್ನು ನಿರ್ಮಿಸಲು ಟಿಟಿಡಿ ನಿರ್ಧರಿಸಿದೆ ಎಂದು ತಿರುಮಲ ತಿರುಪತಿ ದೇವಸ್ಥಾನಮ್ಸ್‌ ಕಾರ್ಯಕಾರಿ ಅಧಿಕಾರಿ ಎ.ವಿ. ಧರ್ಮ ರೆಡ್ಡಿ ಘೋಷಿಸಿದ್ದಾರೆ.

Advertisement

ಇದಕ್ಕೆ ಸಂಬಂಧಿಸಿದ ಒಪ್ಪಂದಕ್ಕೆ ಟಿಟಿಡಿ ಮತ್ತು ರಾಜ್ಯ ದತ್ತಿ ಇಲಾಖೆ ಹಾಗೂ ಸಮರಸತ ಸೇವಾ ಪ್ರತಿಷ್ಠಾನ ಸಹಿ ಹಾಕಿದೆ ಎಂದೂ ಅವರು ತಿಳಿಸಿದ್ದಾರೆ.

ಟಿಟಿಡಿ ಮುಖ್ಯಸ್ಥ ವೈ.ವಿ.ಸುಬ್ಟಾ ರೆಡ್ಡಿ ಅವರ ನಿರ್ದೇಶನದಂತೆ ಆರಂಭದಲ್ಲಿ 120 ದೇಗುಲಗಳನ್ನು ನಿರ್ಮಾಣ ಮಾಡಲಾಗುವುದು. ಅದಕ್ಕೆ ಬೇಕಾದ ಭೂಮಿಯನ್ನೂ ಗುರುತಿಸಲಾಗಿದ್ದು, ಎಲ್ಲ ವಿವರಗಳನ್ನೂ ಸಮರಸತ ಸೇವಾ ಪ್ರತಿಷ್ಠಾನಕ್ಕೆ ಸಲ್ಲಿಸಲಾಗಿದೆ ಎಂದೂ ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next