Advertisement
ಬೆಂಗಳೂರಿನ ಖ್ಯಾತ ವೈದ್ಯರಾದ ಡಾ| ಗಿರೀಶ್ ಕಾಮತ್ ಹಾಗೂ ಡಾ| ಅನುರಾಧಾ ಕಾಮತ್ ಅವರ ಪುತ್ರಿ ಅರ್ಚನಾ ಕಾಮತ್ ಅವರು ತಮ್ಮ 9ನೇ ವರ್ಷದಿಂದಲೇ ಮಂಗಳೂರಿನ ಪದವಿನಂಗಡಿಯ ಕೊಂಚಾಡಿಯಲ್ಲಿ ಟೇಬಲ್ ಟೆನಿಸ್ ಅಭ್ಯಾಸ ಆರಂಭಿಸಿದ್ದರು. ರಜಾ ದಿನಗಳಲ್ಲಿ ಪ್ರಕಾಶ್ ಕಾಮತ್ ಅವರೊಂದಿಗೆ ಟೇಬಲ್ ಟೆನಿಸ್ ಆಡುತ್ತಿದ್ದ ಅವರು ಆಬಳಿಕ ಟಿ.ಟಿ.ಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಬಂದರು.
2014ರಲ್ಲಿ ಬಾರ್ಬಡೋಸ್‌ನಲ್ಲಿ ನಡೆದ ಐಟಿಟಿಎಫ್ ವರ್ಲ್ಡ್ ಕೆಡೆಟ್ ಚಾಲೇಂಜ್‌ನಲ್ಲಿ ಏಷ್ಯಾವನ್ನು ಪ್ರತಿನಿಧಿಸಿದ್ದ ಅವರ ತಂಡ ಬೆಳ್ಳಿ ಪದಕ ಗೆದ್ದಿತ್ತು. 2016ರಲ್ಲಿ ಮೊರೊಕ್ಕೋದಲ್ಲಿ ನಡೆದ ಐಟಿಟಿಎಫ್ ಜೂನಿಯರ್ ಸರ್ಕ್ನೂಟ್‌ನಲ್ಲಿ ಅರ್ಚನಾ ಅವರು ಸಿಂಗಲ್ಸ್, ಡಬಲ್ಸ್ ಮತ್ತು ತಂಡವಾಗಿ ಆಡಿ ಚಿನ್ನದ ಪದಕ ಗೆದ್ದು ವಿಶೇಷ ಸಾಧನೆ ಮಾಡಿದ್ದರು. ಒಟ್ಟಾರೆ 129 ಪದಕ ಗೆದ್ದ ಸಾಧನೆ ಮಾಡಿದ ಅರ್ಚನಾ 22 ಅಂತಾರಾಷ್ಟ್ರೀಯ, 14 ಬಾರಿ ರಾಷ್ಟ್ರೀಯ ಚಾಂಪಿಯನ್ ಆಗಿ ಮಿಂಚಿದ್ದರು. 2015ರಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಂದ ಪದಕವನ್ನು ಪಡೆದಿದ್ದಾರೆ.
Related Articles
ಅರ್ಚನಾ ಅವರು ಕ್ರೀಡೆಯ ಜತೆಗೆ ಶೈಕ್ಷಣಿಕ ಜೀವನದಲ್ಲೂ ವಿಶೇಷ ಸಾಧನೆ ಮಾಡಿದ್ದಾರೆ. 2016ರಲ್ಲಿ ಪ್ರೌಢಶಾಲಾ ಹಂತದಲ್ಲಿ ಬೆಸ್ಟ್ ಔಟ್‌ಗೊàಯಿಂಗ್ ಸ್ಟೂಡೆಂಟ್ ಆ್ಯಂಡ್ ಬೆಸ್ಟ್ ಆಲ್‌ರೌಂಡರ್ ಆಗಿದ್ದರು. ಎಸೆಸೆಲ್ಸಿ ಪರೀಕ್ಷೆಯಲ್ಲಿ ಶೇ.98.72 ಅಂಕದೊಂದಿಗೆ ರಾಜ್ಯಕ್ಕೆ 9ನೇ ರ್‍ಯಾಂಕ್ ಪಡೆದಿದ್ದರು. ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.97 ಅಂಕ ಪಡೆದಿದ್ದ ಅವರು ಅರ್ಥಶಾಸ್ತ್ರದಲ್ಲಿ ಬಿ.ಎ. ಹಾನರ್ಸ್ ಪೂರೈಸಿ, ಈಗ ಇಂಟರ್‌ನ್ಯಾಶನಲ್ ರಿಲೇಶನ್ಸ್, ಸೆಕ್ಯೂರಿಟಿ ಆ್ಯಂಡ್ ಸ್ಟ್ರಾಟೆಜಿ ವಿಷಯದಲ್ಲಿ ಎಂ.ಎ. ಅಂತಿಮ ಸೆಮಿಸ್ಟರ್ ಓದುತ್ತಿದ್ದಾರೆ.
Advertisement
ಆ. 5ರಿಂದ ಡಬಲ್ಸ್ ಸ್ಪರ್ಧೆಅರ್ಚನಾ ಕಾಮತ್ ಅವರು ಟೇಬಲ್ ಟೆನಿಸ್ ಸ್ಪರ್ಧೆಯ ಡಬಲ್ಸ್‌ನಲ್ಲಿ ಮನಿಕಾ ಬಾತ್ರಾ, ಶ್ರೀಜಾ ಅಕುಲಾ ಜತೆ ಆಡಲಿದ್ದಾರೆ. ವನಿತೆಯರ ಡಬಲ್ಸ್‌ನ ಅಂತಿಮ 16ರ ಸುತ್ತಿನ ಪಂದ್ಯಗಳು ಆ. 5ರಂದು ಆರಂಭಗೊಳ್ಳಲಿವೆ. ಈ ಸ್ಪರ್ಧೆಯಲ್ಲಿ ಶ್ರೇಷ್ಠ ಸಾಧನೆ ಮಾಡುವ ಮೂಲಕ ಅವರು ದೇಶದ ಕೀರ್ತಿ ಪತಾಕೆಯನ್ನು ಬಾನೆತ್ತರಕ್ಕೆ ಹಾರಿಸುವಂತಾಗಲಿ.