Advertisement

ಸುನಾಮಿ: 380 ಸಾವು

06:00 AM Dec 25, 2018 | Team Udayavani |

ಕ್ಯಾರಿಟಾ:  ಇಂಡೋನೇಷ್ಯಾದಲ್ಲಿ ಶನಿವಾರ ರಾತ್ರಿ ಅಪ್ಪಳಿಸಿದ ಸುನಾಮಿಗೆ ಬಲಿಯಾದವರ ಸಂಖ್ಯೆ ಸೋಮವಾರ 380ಕ್ಕೇರಿದೆ. ಜೊತೆಗೆ, ಸುಂಡಾ ಜಲಸಂಧಿಯ ಸುತ್ತಮುತ್ತಲಿನ ಪ್ರದೇಶದಲ್ಲಿ ಇನ್ನಷ್ಟು ದೈತ್ಯ ಅಲೆಗಳು ಅಪ್ಪಳಿಸುವ ಬಗ್ಗೆ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದ್ದು, ನಾಗರಿಕರನ್ನು ಆತಂಕಕ್ಕೆ ದೂಡಿದೆ.

Advertisement

ರಕ್ಷಣಾ ಕಾರ್ಯ ಪ್ರಗತಿಯಲ್ಲಿದ್ದು, ಅವಶೇಷಗಳ ತೆರವು ಕಾರ್ಯವೂ ಸಮರೋಪಾದಿಯಲ್ಲಿ ನಡೆಯುತ್ತಿದೆ. ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಭೀತಿಯಿದೆ. ಸುನಾಮಿಯ ತೀವ್ರತೆಗೆ ಸಾವಿರಾರು ಕಟ್ಟಡಗಳು ನೆಲಕ್ಕುರುಳಿದ್ದು, ಬೀಚ್‌ ಬದಿಯ ರೆಸಾರ್ಟ್‌ಗಳು ಹೇಳ ಹೆಸರಿಲ್ಲದಂತೆ ನಿರ್ನಾಮ ವಾಗಿ ಹೋಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
 

Advertisement

Udayavani is now on Telegram. Click here to join our channel and stay updated with the latest news.

Next