Advertisement

ಫೋಟೋ ಇದ್ದ ಕವರ್‌ಗೆ ಅರಿಶಿನ ಕುಂಕುಮ ಹಚ್ಚಿದರು!

06:19 PM Sep 15, 2020 | Suhan S |

ಭಾರತದ ಪ್ರಖ್ಯಾತ ಫೋಟೋ ಜರ್ನಲಿಸ್ಟ್, ವಿದೇಶಿಯರಿಗೆ ಬಹಳ ಇಷ್ಟವಾದ ಛಾಯಾಗ್ರಾಹಕ,ಕಪ್ಪು-ಬಿಳುಪಿನ ಫೋಟೊಗಳಿಗೆ ಮಾಂತ್ರಿಕ ಸ್ಪರ್ಶ ನೀಡಿದ ವ್ಯಕ್ತಿ ಎಂದೆಲ್ಲಾ ಹೆಸರಾದವರು ಟಿ.ಎಸ್‌. ಸತ್ಯನ್‌. ಜಗತ್ತಿನ ಶ್ರೇಷ್ಠ ಪತ್ರಿಕೆಗಳು ಎಂದು ಹೆಸರಾದ ಲೈಫ್, ಟೈಮ್ಸ್, ನ್ಯೂಸ್‌ ವೀಕ್‌, ಲಂಡನ್‌ ಟೈಮ್ಸ್, ಟೊರೆಂಟೋ ಸ್ಟಾರ್‌ ಸೇರಿದಂತೆ ಹಲವು ಪತ್ರಿಕೆಗಳು, ಸತ್ಯನ್‌ ಅವರ ಫೋಟೊ ಪ್ರಕಟಿಸಲು ಉತ್ಸಾಹ ತೋರುತ್ತಿದ್ದವು.

Advertisement

ದಕ್ಷಿಣ ಭಾರತದಲ್ಲಿ ಯಾವುದಾದರೂ ವಿಶೇಷ ಘಟನೆ ಜರುಗಿದರೆ, ಆ ಸಂದರ್ಭದ/ ಕಾರ್ಯಕ್ರಮದ ಫೋಟೊ ತೆಗೆದುಕೊಡಿ ಎಂದು ಸತ್ಯನ್‌ ಅವರಿಗೆ ಮನವಿ ಮಾಡುತ್ತಿದ್ದವು. ನೀವೀಗ ಓದಲಿರುವುದು, ಸತ್ಯನ್‌ ಅವರು ಖ್ಯಾತಿ ಪಡೆಯುವ ಮುಂಚಿನ ದಿನಗಳಿಗೆ ಸಂಬಂಧಿಸಿದ್ದು. ಅದೊಮ್ಮೆ ಸತ್ಯನ್‌ ಅವರ ತಾಯಿ ತುಳಸೀ ಪೂಜೆ ಮಾಡುತ್ತಾ, ಅವರ ತಂಗಿ ಹಸುವಿಗೆ ಅಕ್ಕಿ ತಿನ್ನಿಸುತ್ತಿದ್ದರು. ಆ ಸನ್ನಿವೇಶಕೂಡ ಸತ್ಯನ್‌ ಅವರಕ್ಯಾಮೆರಾದಲ್ಲಿ ಸೆರೆಯಾಯಿತು. ಅದನ್ನು ಟೊರೆಂಟೋ ಸ್ಟಾರ್‌ ಎಂಬ ವಿದೇಶಿ ಪತ್ರಿಕೆಗೆಕಳಿಸಲು ಸತ್ಯನ್‌ ನಿರ್ಧರಿಸಿದರು. ಆ ದಿನಗಳಲ್ಲಿ, ಪೋಸ್ಟ್ ಆಫೀಸ್‌ ಗೆ ಪ್ರತ್ಯೇಕಕಚೇರಿ ಇರಲಿಲ್ಲ. ಪೋಸ್ಟ್ ಮ್ಯಾನ್‌ ಆಗಿದ್ದವರ ಮನೆಯಲ್ಲೇ ಒಂದು ಚಿಕ್ಕ ರೂಮ್‌ನಲ್ಲಿ, ಪೋಸ್ಟ್ ಆಫೀಸ್‌ ಇರುತ್ತಿತ್ತು.

ಆ ಪೋಸ್ಟ್ ಮಾಸ್ಟರ್‌ಕೂಡ ಸತ್ಯನ್‌ ಅವರಕ್ಯಾಮೆರಾ ಹುಚ್ಚಿನ ಬಗ್ಗೆ ಗೊತ್ತಿದ್ದವರೇ. ಫೋಟೊಗಳಿದ್ದ ಕವರ್‌ಗೆ ಅಗತ್ಯವಿದ್ದಷ್ಟು ವಿದೇಶಿ ಅಂಚೆ ಚೀಟಿಗಳನ್ನುಕೊಟ್ಟು- ಏನು ವಿಶೇಷ? ವಿದೇಶಕ್ಕೆ ಏನುಕಳಿಸ್ತಾ ಇದ್ದೀರಾ? ಎಂದುಕೇಳಿದರಂತೆ. ಆಗ ಸತ್ಯನ್‌ ವಿಷಯ ತಿಳಿಸಿದ್ದಾರೆ. ತಕ್ಷಣ ಒಳಮನೆಯಲ್ಲಿದ್ದ ಹೆಂಡತಿಯನ್ನು ಕರೆದ ಆ ಪೋಸ್ಟ್ ಮ್ಯಾನ್‌, ಆಕೆಗೆಕವರ್‌ಕೊಟ್ಟು, ನಮ್ಮ ಸತ್ಯನ್‌ ವಿದೇಶಿ ಪತ್ರಿಕೆಗೆ ಫೋಟೊಗಳನ್ನುಕಳಿಸ್ತಾ ಇದ್ದಾನೆ. ಅವನಿಗೆ ಒಳಿತಿಗಾಗಿ ನಾವೂ ಪ್ರಾರ್ಥಿಸೋಣ. ಈ ಕವರ್‌ನ ತಗೊಂಡು ಹೋಗಿ, ದೇವರ ಮನೆಯಲ್ಲಿರುವ ಅರುಶಿನ- ಕುಂಕುಮ ಹಚ್ಚಿಕೊಂಡು ಬಾ ಅಂದರಂತೆ. ಆ ನಂತರವೇ ಮೊಹರು ಹಾಕಿ ಪೋಸ್ಟ್ ಮಾಡಿದರಂತೆ. ಕೆಲವು ದಿನಗಳ ನಂತರ, ಟೊರೆಂಟೋ ಸ್ಟಾರ್‌ ಪತ್ರಿಕೆಯಲ್ಲಿ ಸತ್ಯನ್‌ ಅವರ ಫೋಟೋ ಪ್ರಕಟ ಆಯಿತು. ಗೌರವ ಪ್ರತಿಯೂ ಬಂತು. ಅದನ್ನು ಕೊಡುತ್ತಾ ಆ ಪೋಸ್ಟ್ ಮ್ಯಾನ್‌ ತಮಾಷೆಯಾಗಿ ಹೇಳಿದರಂತೆ: ಸತ್ಯನ್‌, ನಾನು ಲಕೋಟೆಗೆ ಅರಿಶಿನ- ಕುಂಕುಮ ಹಚ್ಚಿದ್ದರಿಂದಲೇ ವಿದೇಶಿಯರು ಇದನ್ನು ಸ್ವೀಕರಿಸಿದರು!

Advertisement

Udayavani is now on Telegram. Click here to join our channel and stay updated with the latest news.

Next